Friday, November 28, 2025

Latest Posts

7 ಕೋಟಿ ದೋಚಿದ ಗ್ಯಾಂಗ್, ವೆಬ್ ಸೀರೀಸ್ ಲೆವೆಲ್ ಗೆ ಪ್ಲ್ಯಾನ್!

- Advertisement -

ಬೆಂಗಳೂರಿನಲ್ಲಿ RBI ಅಧಿಕಾರಿಗಳ ಸೋಗಿನಲ್ಲಿ 7 ಕೋಟಿ 11 ಲಕ್ಷ ರೂಪಾಯಿ ದರೋಡೆ ನಡೆದಿದೆ. ಈ ಪ್ರಕರಣಕ್ಕೆ ಈಗ ವೆಬ್ ಸೀರೀಸ್‌ಗಳು ಸ್ಫೂರ್ತಿಯಾಗಿರಬಹುದೇ ಎಂಬ ಅನುಮಾನ ತನಿಖಾ ತಂಡಕ್ಕೆ ವ್ಯಕ್ತವಾಗಿದೆ. ಮೂರು ಪೊಲೀಸ್ ಠಾಣೆಗಳ ಗಡಿ ಭಾಗದಲ್ಲಿ ಆರೋಪಿಗಳು ದೋಚಿದ ವಾಹನವನ್ನು ಬಿಟ್ಟು ಹೋಗಿರುವುದು ಪ್ಲ್ಯಾನ್ ಬೇಸ್‌ನ ಆಪರೇಷನ್ ಆಗಿರಬಹುದೆಂಬ ಶಂಕೆಯನ್ನು ಗಾಢಗೊಳಿಸಿದೆ.

ATM ಗಳಿಗೆ ಹಣ ಪೂರೈಸುತ್ತಿದ್ದ CMS ವಾಹನವನ್ನು ನಕಲಿ RBI ಅಧಿಕಾರಿಗಳಾಗಿ ನಟಿಸಿದ ರಾಬರ್ಸ್ ಅಡ್ಡಗಟ್ಟಿ, ಕ್ಷಣಾರ್ಧದಲ್ಲೇ ಹಣ ದೋಚಿ ಪರಾರಿಯಾಗಿದ್ದರು. ವಾಹನವನ್ನು ಬಿಟ್ಟು ಹೋದ ಸ್ಥಳವೇ ಮೂರು ಠಾಣೆಗಳ ಜಂಕ್ಷನ್. ಮೇಲ್ಭಾಗಕ್ಕೆ ಹೋದರೆ ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿ, ಎಡಬದಿಯಲ್ಲಿ ಸುದ್ಗುಂಟೆಪಾಳ್ಯ ಪೊಲೀಸ್ ಠಾಣೆ ಮತ್ತು ದರೋಡೆ ನಡೆದಿದ್ದು ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲೇ. ಆರೋಪಿಗಳು ಪೊಲೀಸರ ನಡುವೆ ಗೊಂದಲ ಸೃಷ್ಟಿಸಿ ಎಸ್ಕೇಪ್ ಆಗಲು ಯೋಚಿಸಿದ್ದಾರೆಯೇ ಎನ್ನುವ ಪ್ರಶ್ನೆ ಹುಟ್ಟಿಸಿದೆ.

ಅನೇಕ ರಾಬರಿ ವೆಬ್ ಸೀರೀಸ್‌ಗಳಲ್ಲಿ ಕಾಣುವ ‘ಜುರಿಸ್ಡಿಕ್ಷನ್ ಕನ್ಫ್ಯೂಷನ್’ (jurisdiction confusion) ಟ್ರಿಕ್‌ನ್ನು ಆರೋಪಿಗಳು ನಿಖರವಾಗಿ ಬಳಸಿರುವ ಸಾಧ್ಯತೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ರಾಬರಿಯ ಸಂಚು ಜೈಲಿನೊಳಗಿಂದಲೇ ರೂಪಿತವಾಗಿದೆಯೇ ಎಂಬ ಅನುಮಾನ ಹಿನ್ನೆಲೆಯಲ್ಲಿ, ತನಿಖಾ ತಂಡವು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ರಾಬರಿ ಗ್ಯಾಂಗ್ ಮತ್ತು ಜೈಲಿನೊಳಗಿನ ಯಾರಾದರೂ ನಡುವಿನ ಸಂಪರ್ಕ ಬಗ್ಗೆ ವಿಚಾರಣೆ ನಡೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಸಿಬ್ಬಂದಿ, CMS ಸಿಬ್ಬಂದಿ ಸೇರಿದಂತೆ 20ಕ್ಕೂ ಹೆಚ್ಚು ಜನರನ್ನು ವಿಚಾರಣೆಗೊಳಪಡಿಸಲಾಗಿದೆ. ಘಟನೆಯ ಸಂಪೂರ್ಣ ಟೈಂಲೈನ್ ಮ್ಯಾಚ್ ಮಾಡುವ ಮೂಲಕ ಪೊಲೀಸರ ಪ್ರಶ್ನೆ ಮುಂದುವರಿದಿದೆ. ಆದರೆ ಆರೋಪಿಗಳ ಬಗ್ಗೆ ಯಾವುದೇ ಸೂಕ್ತ ಸುಳಿವು ಇನ್ನೂ ಪತ್ತೆಯಾಗಿಲ್ಲ.

ಇನ್ನೊಂದೆಡೆ, 50ಕ್ಕೂ ಹೆಚ್ಚು ಪೊಲೀಸರನ್ನೊಳಗೊಂಡ ವಿಶೇಷ ತಂಡಗಳು ಆರೋಪಿಗಳಿಗಾಗಿ ರಾಜ್ಯ ಗಡಿಭಾಗಗಳಲ್ಲಿ ವಿಶೇಷವಾಗಿ ಹೊಸಕೋಟೆ ಮತ್ತು ತಮಿಳುನಾಡಿನ ದಿಕ್ಕಿನಲ್ಲಿ ಹುಡುಕಾಟ ತೀವ್ರಗೊಳಿಸಿವೆ. ಸದ್ಯ CCTV ಗಳಲ್ಲಿ ಕಾರ್ ಹೋಗುವ ದೃಶ್ಯ ಲಭ್ಯವಾಗಿದೆ. ಜೊತೆಗೆ ಇಬ್ಬರು ಖದೀಮರು ಓಡಾಡಿರುವುದು ಕೂಡ CCTV ಗಳಲ್ಲಿ ಕಂಡು ಬಂದಿದೆ. ಪೊಲೀಸರು ಕಳ್ಳರನ್ನ ಯಾವಾಗ ಬಂಧಿಸುತ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss