ಬೆಂಗಳೂರಿನಲ್ಲಿ ಮನೆ ಹುಡುಕುತ್ತಿದ್ದಿರಾ ಎಚ್ಚರಾ…. ನಿಮ್ಮನ್ನ ಯಾಮಾರಿಸೋದು ಪಕ್ಕಾ … ಇಲ್ಲೋಬ್ಬ ಭೂಪಾ ಒಂದೇ ಮನೆಯನ್ನು 22 ಜನಕ್ಕೆ ತೋರಿಸಿ ವಂಚನೆ ಮಾಡಿದ್ದಾನೆ … ಈತನ ಬಗ್ಗೆ ಹೇಳ್ತಿವಿ ನೋಡಿ,..
ಸ್ವಂತ ಮನೆಯನ್ನು ಬಾಡಿಗೆ ಹಾಗೂ ಭೋಗ್ಯಕ್ಕೆ ಕೊಡುವುದಾಗಿ ನೋ ಬ್ರೋಕರ್ ಆ್ಯಪ್ ಮೂಲಕ ಜಾಹೀರಾತು ನೀಡಿ ಹತ್ತಾರು ಮಂದಿಗೆ ಕೋಟ್ಯಂತರ ರೂ.ವಂಚಿಸಿದ ಆರೋಪಿಯನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.ಆರ್.ಟಿ.ನಗರ ಸಮೀ ಪದ ಚೋಳನಗರ ನಿವಾಸಿ ಗಿರೀಶ್ ( ಬಂಧಿತ. ಆರೋಪಿ ಹೆಬ್ಬಾಳ, ಆರ್ .ಟಿ.ನಗರ ಸೇರಿ ನಗರದ ‘ವಿವಿಧೆಡೆ ಸುಮಾರು 22 ಮಂದಿಗೆ 2 ಕೋಟಿ ರೂ.ಗೂ ಅಧಿಕ ವಂಚಿಸಿದ್ದಾನೆ ಎಂಬುದು ಗೊತ್ತಾಗಿದೆ. ಇದೇ ಪ್ರಕರಣದಲ್ಲಿ ಆರೋಪಿಗಳಾಗಿರುವ ಗಿರೀಶ್ ಪತ್ನಿ ದೀಪಾ, ನಾದಿನಿ ಸರಿತಾ ಹಾಗೂ ಸಂಬಂಧಿ ಮನೋಹರ್‌ಗೆ ನೋಟಿಸ್ ಕೊಡಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಅಂತ ಪೊಲೀಸರು ಮಾಹಿತಿ ನೀಡಿದರು.
ಚೋಳನಗರದಲ್ಲಿ ಆರೋಪಿಗೆ ಸೇರಿದ 3. ಅಂತಸ್ತಿನ ಕಟ್ಟಡ ಇದೆ. ಅದೇ ಕಟ್ಟಡದ 2ನೇ ಮಹಡಿಯಲ್ಲಿರುವ ಮನೆಯನ್ನು ಭೋಗ್ಯ ಅಥವಾ ಬಾಡಿಗೆಗೆ ನೀಡುವುದಾಗಿ ನೋಟ್ರೋಕರ್ ಆ್ಯಪ್ ನಲ್ಲಿ ಜಾಹೀರಾತು ನೀಡಿದ್ದಾನೆ. ಅದನ್ನು ನಂಬಿ ಆರೋಪಿಯನ್ನು ಸಂಪರ್ಕಿಸುವ ಮಂದಿಗೆ ಮನೆಯನ್ನು ತೋರಿಸಿದ್ದಾನೆ. ಬಳಿಕ ಮನೆ ಒಪ್ಪುವ ಬಾಡಿಗೆದಾರನಿಂದ ಮುಂಗಡವಾಗಿ 6 ರಿಂದ 13 ಲಕ್ಷ ರೂ. ಪಡೆದುಕೊಂಡಿದ್ದಾನೆ. ಅದೇ ರೀತಿ ಪ್ರತಿ ಬಾರಿ ಸಂಪರ್ಕಿಸುವ ಬಾಡಿಗೆದಾರನಿಗೆ ಮನೆ ತೋರಿಸಿ ಲಕ್ಷಾಂತರ ರೂ. ಮುಂಗಡ ಹಣ ಪಡೆದುಕೊಂಡಿದ್ದಾನೆ. ಆದರೆ, ಯಾರಿಗೂಅಗ್ರಿಮೆಂಟ್ ಮಾಡಿಕೊಟ್ಟಿಲ್ಲ.ಅದನ್ನು ಪ್ರಶ್ನಿಸಿದಾಗ ಮನೆ ಪ್ರವೇಶಿಸಿದಾಗ ಅಗ್ರಿಮೆಂಟ್ ಮಾಡಿಕೊಳ್ಳೋಣ ಅಂತ ನಂಬಿಸಿದ್ದಾನೆ ಅಂತ ಪೊಲೀಸರು ಹೇಳಿದರು.
ಮತ್ತೊಂದೆಡೆ ಹಣ ಕೊಟ್ಟವರು ಮನೆ ಕೊಡಿ ಎಂದಾಗ ‘ಮನೆ ರಿನೋವೇಶನ್ ಆಗುತ್ತಿದೆ. ಈಗಿರುವ ಬಾಡಿಗೆದಾರರ ಜತೆ ಹಣದ ವಿಚಾರವಾಗಿ ಸಮಸ್ಯೆಯಾಗಿದೆ. ತಂದೆ ತೀರಿಕೊಂಡಿದ್ದಾರೆ. ಸಂಬಂಧಿಕರಿಗೆ ಹುಷಾರಿಲ್ಲ ಎಂದೆಲ್ಲ ಕಾರಣಗಳನ್ನು ನೀಡಿ ದಿನದೂಡುತ್ತಿದ್ದ ಅಂತ ದೂರುದಾರರು ಆರೋಪಿಸಿದ್ದಾರೆ.
ಸದ್ಯ ಆರೋಪಿಯ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ನಾಲ್ವರು ನೀಡಿರುವ ದೂರಿನ್ವಯ ದಾಖಲಾಗಿರುವ ಪ್ರಕರಣಗಳಲ್ಲಿ 1.09 ಕೋಟಿ ರೂ. ವಂಚಿಸಿದ್ದಾನೆ ಎಂಬುದು ಗೊತ್ತಾಗಿದೆ. ಆದರೆ, ಆರೋಪಿ 55 ಲಕ್ಷ ರೂ. ಕೊಟ್ಟಿದ್ದೇನೆ. ಬಾಕಿ 54 ಲಕ್ಷ ರೂ. ಮಾತ್ರ ಬಾಕಿ ಕೊಡಬೇಕಿದೆ ಎಂದು ಹೇಳಿಕೆ ನೀಡಿದ್ದಾನೆ. ಮತ್ತೊಂದೆಡೆ ಈತ ಇದುವರೆಗೂ ಬರೋಬ್ಬರಿ 22 ಮಂದಿಗೆ 2 ಕೋಟಿ ರೂ. ವಂಚಿಸಿದ್ದಾನೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಈ ನಡುವೆ ಆರೋಪಿ ಗಿರೀಶ್ ವಿರುದ್ದ ಯಲಹಂಕ ಠಾಣೆ ವ್ಯಾಪ್ತಿಯಲ್ಲಿ ಕಾರೊಂದನ್ನು ಬಾಡಿಗೆ ಪಡೆದು, ಬೇರೆಯವರಿಗೆ 3 ಲಕ್ಷ ರೂ.ಗೆ ಅಡುಮಾನ ಇಟ್ಟಿರುವ ಸಂಬಂಧ ಕಾರು ಮಾಲಿಕ ಶರತ್ ಕುಮಾರ್ ಎಂಬುವರು ದೂರು ನೀಡಿದ್ದಾರೆ.



