www.karnatakatv.net : ರಾಯಚೂರು: ದೇಗುಲ ಜಲಾವೃತವಾದರೂ ಪೂಜೆ ಬಿಡದ ಅರ್ಚಕ.. ನದಿಯ ಪ್ರವಾಹದಲ್ಲೂ ಈಜಿಕೊಂಡು ಹೋಗಿ ಪೂಜೆ ನೆರವೇರಿಸುತ್ತಿರೋ ಅರ್ಚಕ.
ರಾಯಚೂರು ಜಿಲ್ಲೆಯ ದೇವದುರ್ಗದ ಕೊಪ್ಪರ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನಲ್ಲಿ ಘಟನೆ.. ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ ಜಲಾವೃತವಾಗಿದೆ.ದೇವಾಲಯದ ಗರ್ಭಗುಡಿಯ ಮೆಟ್ಟಿಲುವರೆಗೆ ನೀರು ಬಂದಿದೆ. ಹೀಗಾಗಿ ಭಕ್ತರಿಗೆ ದೇವರ ದರ್ಶನ ಕಷ್ಟಸಾಧ್ಯವಾಗಿದೆ.

ಪೂಜೆ ನಿಂತು ಹೋದ್ರೆ ಮತ್ತಷ್ಟು ಜಲಪ್ರಳಯ ಹೆಚ್ಚಳ ಎಂಬ ನಂಬಿಕೆ ಆ ಭೀತಿಯಿಂದ ಭೋರ್ಗರೆವ ನೀರಿನಲ್ಲಿ ಈಜಿ ನಿತ್ಯ ಪೂಜೆ ಮಾಡುತ್ತಿದ್ದರು. ಬೆಳಗ್ಗೆ ಸಂಜೆ ಎರಡು ಹೊತ್ತು ಪೂಜೆ ಸಲ್ಲಿಸುತ್ತಿರೋ ಪೂಜಾರಿ..ಒಟ್ಟು 33.333 ಟಿಎಂಸಿ ಸಾಮರ್ಥ್ಯದ ಬಸವಸಾಗರ ಜಲಾಶಯ. ಸದ್ಯ 26.23 ಟಿಎಂಸಿ ನೀರು ಸಂಗ್ರಹವಿರುವ ಜಲಾಶಯ. ಒಳಹರಿವು ಹೆಚ್ಚಾದಂತೆ ನದಿಗೆ ಹೆಚ್ಚಿನ ಪ್ರಮಾಣದ ನೀರನ್ನ ಹರಿಸಲಾಗುತ್ತಿದೆ.

ಈಗಾಗಲೇ 3.5 ಲಕ್ಷ ಕ್ಯೂಸೆಕ್ಸ್ ನೀರು ಕೃಷ್ಣಾ ನದಿಗೆ ಹರಿಬಿಟ್ಟ ಹಿನ್ನಲೆ.. ನದೀ ತೀರದ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದ್ದು , ನದಿಯ ನೀರಿನ ರಭಸಕ್ಕೆ ನರಸಿಂಹಸ್ವಾಮಿ ದೇವಸ್ಥಾನ ಮುಳುಗಡೆಯಾಗಿದೆ. ದೇಗುಲ ಮುಳುಗಡೆಯಾದರೂ ಪೂಜೆ ಬಿಡದ ಅರ್ಚಕ..ಪ್ರವಾಹದ ಎದುರು ಈಜಿ ನರಸಿಂಹ ಸ್ವಾಮಿ ಪೂಜೆ ಸಲ್ಲಿಸುತ್ತಿರೋ ಅರ್ಚಕ.