www.karnatakatv.net : ಬೆಳಗಾವಿ: ಬೆಳಗಾವಿಯ ವಿಮಾನ ನಿಲ್ದಾಣ ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಬೆಳಗಾವಿಯಿಂದ ದೆಹಲಿಗೆ ವಿಮಾನ ಹಾರಾಟ ಸೇವೆ ಪ್ರಾರಂಭಿಸಲಾಗಿದೆ. ಶುಕ್ರವಾರ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬೆಳಗಾವಿ- ದೆಹಲಿ ವಿಮಾನ ಸೇವೆಯ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ಅನಿಲ ಬೆನಕೆ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು.
ದೆಹಲಿ- ಬೆಳಗಾವಿ ವಿಮಾನ ಸೇವೆಯ ಲಾಭವನ್ನು ಪಡೆಯಲು ಶಾಸಕ ಅನಿಲ ಬೆನಕೆ ಅವರು ಜನರಲ್ಲಿ ಮನವಿ ಮಾಡಿದ್ದಾರೆ. ಈ ಹಿಂದೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ವಿಮಾನಗಳ ಹಾರಾಟದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹಿಂದಕ್ಕಿತ್ತು.
ಈ ಹಿಂದೆ ಪುಣೆ, ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ವಿಮಾನಯಾನ ಸೇವೆ ಪ್ರಾರಂಭಿಸಲಾಗಿದೆ. ,ಇಂದಿನಿಂದ ಪ್ರಾರಂಭ ಆಗಿರುವ ವಿಮಾನ ಸೇವೆ ವಾರದ ಎರಡು ದಿನಗಳ ಕಾಲ ನಡೆಯಲಿದೆ. ಮಂಗಳವಾರ ಮತ್ತು ಶುಕ್ರವಾರ ಬೆಳಗಾವಿ ಮತ್ತು ದೆಹಲಿ ನಡುವೆ ವಿಮಾನ ಸೇವೆ ಇರಲಿದೆ ಎಂದರು.
ನಾಗೇಶ್ ಕರ್ನಾಟಕ ಟಿವಿ ಬೆಳಗಾವಿ