Political News: ಕೆಆರ್ಎಸ್ ಪಕ್ಷ ಸ್ಥಾಪಿಸಿರುವ, ಎಎಪಿ ಮಾಜಿ ನಾಯಕ ರವಿಕೃಷ್ಣಾ ರೆಡ್ಡಿ ಕರ್ನಾಟಕ ಟಿವಿ ಜತೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಕಾನೂನಿನಲ್ಲಿ ಪ್ರಬಲಿರಿಗೆ ಮಾತ್ರ ನ್ಯಾಯ ಸಿಗುತ್ತಿದೆ. ಜನ ಸಾಮಾನ್ಯರು ತಪ್ಪು ಮಾಡದಿದ್ದರೂ ಶಿಕ್ಷೆ ಅನುಭವಿಸುತ್ತಿದ್ದಾರೆಂದು ರವಿಕೃಷ್ಣ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಹೈಕೋರ್ಟ್ ನಲ್ಲಿ ಮುಂದಿನ ಆದೇಶದ ತನಕ ಕ್ರಮ ಜರುಗಿಸುವಂತಿಲ್ಲ ಎಂದು ಹೆಚ್ಚಿನ ಪ್ರಭಾವಿಗಳಿಗೆ ಸ್ಟೇ ಸಿಗುತ್ತಿದೆ. ಪೋಕ್ಸೋ ಕೇಸ್ ಅಡಿ ಜೈಲು ಪಾಲಾಗಿದ್ದ ಮಾಜಿ ಸಿಎಂ ಅವರಿಗೂ ಸ್ಟೇ ಸಿಕ್ಕಿದೆ. ಬೇರೆಯವರಾಗಿದ್ದರೆ ಈಗಾಗಲೇ ಅವನನ್ನು ಜೈಲಲ್ಲೇ ಇರಿಸಲಾಗುತ್ತಿತ್ತು. ಆದರೆ ಅವರು ಪ್ರಭಾವಿಯಾಗಿದ್ದ ಕಾರಣಕ್ಕೆ ಅವರಿಗೆ ಸ್ಟೇ ಸಿಕ್ಕಿತು ಎಂದು ರವಿಕೃಷ್ಣಾ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಸ್ವಾಮೀಜಿ ಅನ್ನೋ ಹೆಸರಿನಲ್ಲಿ ಅತ್ಯಾಚಾರದ ಆರೋಪದಲ್ಲಿದ್ದವರ ಕೇಸ್ ವಿಚಾರಣೆ ನೆಪದಲ್ಲಿ ಮುಂದೆ ಮುಂದೆ ಹೋಗುತ್ತಿದೆ. ಅಂಥವರಿಗೆಲ್ಲ ಬೆಂಬಲಿಸುವಂತಿದ್ದರೆ, ನೀವು ಹೇಗೆ ಜಡ್ಜ್ ಆಗುತ್ತೀರಿ ಎಂದು ರವಿಕೃಷ್ಣಾ ರೆಡ್ಡಿ ಪ್ರಶ್ನಿಸಿದ್ದಾರೆ.




