ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದ ಕಲ್ಲು ತೂರಾಟ ಪ್ರಕರಣ, ಪೂರ್ವ ನಿಯೋಜಿತ ಎಂಬುದು ತನಿಖೆಯಲ್ಲಿ ಸಾಬೀತಾಗಿದೆ. ಘಟನೆ ಸಂಬಂಧ ಆರಂಭದಲ್ಲಿ 22 ಮಂದಿಯನ್ನು ಗುರುತಿಸಲಾಗಿತ್ತು. ಬಳಿಕ 29 ಮಂದಿಯನ್ನು ವಶಕ್ಕೆ ಪಡೆದಿದ್ರು. ಇದೀಗ ಆರೋಪಿಗಳ ಸಂಖ್ಯೆ 32ಕ್ಕೆ ಏರಿದ್ದು, ಪೊಲೀಸರಿಂದ ತನಿಖೆ ಮುಂದಿವರಿದಿದೆ.
ತನಿಖೆ ವೇಳೆ ಆರೋಪಿಗಳು ಸ್ಫೋಟಕ ವಿಷಯ ಬಾಯಿ ಬಿಟ್ಟಿದ್ದಾರೆ. ಸ್ವಾಮಿ ಎಂಬುವರ ನೇತೃತ್ವದಲ್ಲಿ ಕೂರಿಸಿದ್ದ ಗಣೇಶ ಮೂರ್ತಿ ಮೇಲೆ, ಕಲ್ಲು ತೂರಲು ಪೂರ್ವಯೋಜನೆ ಮಾಡಲಾಗಿತ್ತಂತೆ. ಆದರೆ ಟಾರ್ಗೆಟ್ ಮಾಡಿದ್ದ ಗಣೇಶ ಮೆರವಣಿಗೆಯ ಬದಲು, ಬೇರೆ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಇನ್ನು, ಮದ್ದೂರು ಕಲ್ಲು ತೂರಾಟ ರಾಜಕೀಯ ದ್ವೇಷದ ಭಾಗಾನಾ ಅಥವಾ ಧಾರ್ಮಿಕ ಕಾರಣಗಳಿಂದ ಗಲಭೆ ಎಬ್ಬಿಸಲು ಮಾಡಿದ ಹುನ್ನಾರವಾ? ಎಂಬುದರ ಬಗ್ಗೆ ತನಿಖೆ ನಡೀತಿದೆ.
ಸೆಪ್ಟೆಂಬರ್ 7ರಂದು ಮದ್ದೂರಿನ ರಾಮ್ ರಹೀಂ ನಗರದಲ್ಲಿ ಗಣೇಶ ಮೆರವಣಿಗೆ ಮೇಲೆ, ಮಸೀದಿ ಕಡೆಯಿಂದ ಕಲ್ಲು ತೂರಾಟ ಮಾಡಲಾಗಿತ್ತು. ಘಟನೆ ಖಂಡಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ಮಾಡಿದ್ದವು. ಜೊತೆಗೆ ಬಿಜೆಪಿಗರು ಕೂಡ ಸಾಥ್ ಕೊಟ್ಟಿದ್ದರು. ಹಿಂದೂ ಫೈರ್ ಬ್ರ್ಯಾಂಡ್ ಬಸನಗೌಡ ಪಾಟೀಲ್ ಯತ್ನಾಳ್ ಕೂಡ, ಮದ್ದೂರಿಗೆ ಬಂದಿದ್ರು.

