Sunday, December 22, 2024

Latest Posts

ಮುಂದೆ ಕೊರೊನಾ ಮತ್ತಷ್ಟು ಉಗ್ರ ರೂಪ, ಯಾರೂ ಭಯ ಬೀಳಬೇಡಿ – ಸಿ.ಎಸ್ ಪುಟ್ಟರಾಜು

- Advertisement -

ಕರ್ನಾಟಕ ಟಿವಿ ಮಂಡ್ಯ : ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳ ಸಾವು ಹೆಚ್ಚಾಗ್ತಿರುವ ಹಿನ್ನೆಲೆ ಮಂಡ್ಯದಲ್ಲಿ ಶಾಸಕ ಸಿಎಸ್ ಪುಟ್ಟರಾಜು ಸುದ್ದಿಗೋಷ್ಠಿ ನಡೆಸಿದ್ರು. ಮಂಡ್ಯ ಜಿಲ್ಲೆಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯಾವ ಸೋಂಕಿತ ಸತ್ತಿಲ್ಲಾ.. ಬೇರೆ ಬೇರೆ ಜಿಲ್ಲೆಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಸಾವು ಆಗಿದೆ. ನಮ್ಮ ಎಲ್ಲಾ ಶಾಸಕರು, ಜನಪ್ರತಿನಿದಿಗಳ ಸಹಕಾರ ತೆಗೆದುಕೊಂಡು ನಮ್ಮ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಬಹಳ ಸಮರ್ಪಕವಾಗಿ ಜವಾಬ್ದಾರಿಯನ್ನ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ ಎಂದು ಪುಟ್ಟರಾಜು ಹೇಳಿದ್ರು.

ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಕೊರೊನಾ ಹಾವಳಿ

ಇದೇ ವೇಳೆ ಮಾತನಾಡಿದ ಶಾಸಕ ಪುಟ್ಟರಾಜು ಮುಂದಿನ ದಿನಗಳಲ್ಲಿ ಇದು ಬಹಳ ಆತಂಕಕ್ಕೆ ಒಳಗಾಗುವ ರೀತಿಯಲ್ಲಿ ಕೊರೊನಾ ಪ್ರಬಲವಾಗುವ ಲಕ್ಷಣ ಕಾಣ್ತಿದೆ.. ಇದನ್ನ ಸಮರ್ಪಕವಾಗಿ ಎದುರಿಸಲು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ರು. ಎಂಥಹ ಸಮಸ್ಯೆ ಬಂದ್ರು ಬಗೆಹರಿಸುವ ನಿಟ್ಟಿನಲ್ಲಿ ಶಾಸಕರು, ಹಾಗೂ ಅಧಿಕಾರಿಗಳು ಕೆಲಸ ಮಾಡ್ತಾರೆ ಎಲ್ಲಾರು ಧೈರ್ಯದಿಂದ ಇರಬೇಕು ಎಂದು ಪುಟ್ಟರಾಜಜು ಜಿಲ್ಲೆಯ ಜನರಿಗೆ ಧೈರ್ಯ ಹೇಳಿದ್ರು. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ಅಧಿಕಾರಿಗಳು ಕೆಲಸ ಮಾಡುವಂತೆ ಜಿಲ್ಲಾಡಳಿತಕ್ಕೆ ವಿನಂತಿ ಮಾಡಿದ್ದೇವೆ ಎಂತ ಶಾಸಕ ಪುಟ್ಟರಾಜು ನಮ್ಮ ನಮ್ಮ ಕ್ಷೇತ್ರದಲ್ಲಿ ನಮ್ಮ ಜವಾಬ್ದಾರಿ ನಿರ್ವಹಿಸುತ್ತೆವೆ ಎಂದು ಭರವಸೆ ನೀಡಿದ್ರು.

ಪ್ರಸನ್ನ, ಕರ್ನಾಟಕ ಟಿವಿ, ಮಂಡ್ಯ

- Advertisement -

Latest Posts

Don't Miss