Tuesday, October 14, 2025

Latest Posts

ಮೈದುಂಬಿ ಹರಿಯುತ್ತಿರುವ ಮುತ್ಯಾಲಮಡುವು ಜಲಪಾತ!

- Advertisement -

ಇತ್ತೀಚೆಗೆ ಸುರಿದ ಬಾರೀ ಮಳೆಯಿಂದ ಬೆಂಗಳೂರಿನಿಂದ 40 ಕಿ.ಮೀ. ದೂರದಲ್ಲಿರುವ, ಆನೇಕಲ್ ಸಮೀಪದ ಮುತ್ಯಾಲಮಡುವು ಜಲಪಾತ ಮೈದುಂಬಿದೆ. ದಿನ ದಿನಕ್ಕೂ ಜಲಪಾತ ವೀಕ್ಷಿಸಲು ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.

ಹಲವಾರು ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಮಳೆಗಾಲದ ಆರಂಭಿಕ ದಿನಗಳಲ್ಲಿ ಜಲಪಾತ ನೋಡುವುದೇ ಒಂದು ವಿಶೇಷ. ಈ ಕಾರಣದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಜಲಪಾತ ನೋಡಲು ಬರುತ್ತಿದ್ದಾರೆ. ಮುತ್ಯಾಲಮಡುವು ಜಲಪಾತದಿಂದ ಸುಮಾರು ಒಂದೂವರೆ ಕಿಲೋಮೀಟರ್ ಚಾರಣ ಮಾಡಿದರೆ ಶಂಕು ಚಕ್ರ ಜಲಪಾತ ತಲುಪಬಹುದು.

ಪ್ರವಾಸಿ ಸ್ಥಳದ ಅಭಿವೃದ್ಧಿಗೆ ಹೆಚ್ಚಿನ ಗಮನ ಕೊಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯು ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಸ್ವಚ್ಛತಾ ಸೌಲಭ್ಯ, ಮಕ್ಕಳ ಆಟದ ಸಾಧನ, ಮುತ್ಯಾಲಮಡುವಿನಿಂದ ಶಂಕು ಚಕ್ರ ಜಲಪಾತಕ್ಕೆ ಸುರಕ್ಷಿತ ಚಾರಣ ಮಾರ್ಗ ಮತ್ತು ಭದ್ರತೆಗಾಗಿ ಪೊಲೀಸ್ ಚೌಕಿಯನ್ನು ಒಳಗೊಂಡ ಅಗತ್ಯ ಸೌಕರ್ಯ ಒದಗಿಸಬೇಕಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss