ರಾಮನಗರ : ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ಹೆಚ್ಚಿನ ಅನುದಾನದ ಬಳಕೆಯಿಂದ ಅಭಿವೃದ್ಧಿ ಕುಂಠಿತವಾಗಿತ್ತು. ಇದೇ ವಿಚಾರಕ್ಕೆ ರಾಜ್ಯ ಸರ್ಕಾರದ ವಿರುದ್ಧ ಎಲ್ಲ ಶಾಸಕರು ಆಕ್ರೋಶ ಹೊರಹಾಕಿದ್ದರು. ಬಿಜೆಪಿ – ಜೆಡಿಎಸ್ ಶಾಸಕರಲ್ಲದೆ, ಕಾಂಗ್ರೆಸ್ ಶಾಸಕರೂ ಸಹ ಅನುದಾನಕ್ಕಾಗಿ ತಮ್ಮದೇ ಸರ್ಕಾರದ ವಿರುದ್ಧ ಬಹಿರಂಗ ಸಮರ ಸಾರಿದ್ದರು. ಆದರೆ ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಇಷ್ಟು ದಿನಗಳ ಕಾಲ ಅನುದಾನವಿಲ್ಲದೆ ಗೋಳುತೋಡಿಕೊಳ್ಳುತ್ತಿದ್ದ ಕೈ ಶಾಸಕರಿಗೆ 50 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಆದರೆ ಇದರಿಂದ ಅಸಮಧಾನಗೊಂಡಿದ್ದ ಮೈತ್ರಿ ಪಕ್ಷಗಳ ಶಾಸಕರಿಗೆ ಡಿಸಿಎಂ ಡಿಕೆ ಶಿವಕುಮಾರ್ ಅನುದಾನ ನೀಡುವ ಭರವಸೆ ಕೊಟ್ಟಿದ್ದಾರೆ. ಈ ಕುರಿತು ಚನ್ನಪಟ್ಟದಲ್ಲಿಂದು ಮಾತನಾಡಿರುವ ಅವರು, ಬಜೆಟ್ನಲ್ಲಿ ನಿರ್ಧಾರ ಮಾಡಿದಂತೆ ಶಾಸಕರಿಗೆ ಅನುದಾನ ನೀಡಲಾಗಿದೆ. 8 ಸಾವಿರ ಕೋಟಿ ರೂಪಾಯಿ ಹಣವನ್ನು ಮೀಸಲಿಟ್ಟಿದ್ದೇವು. ಪ್ರಮುಖವಾಗಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ರಸ್ತೆ, ಸೇತುವೆಗಳಿಗಾಗಿ ಅನುದಾನ ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಸದ್ಯ ಸಿಎಂ ಸಿದ್ದರಾಮಯ್ಯ ಅವರು ನೀಡಿರುವ ಅನುದಾನದಲ್ಲಿ ಶಾಸಕರು ತಮ್ಮ ವಿವೇಚನೆಗೆ ತಕ್ಕಂತೆ ಮೂಲಸೌಕರ್ಯ ಸೇರಿದಂತೆ ಇತರ ಅಭಿವೃದ್ದಿ ಕಾರ್ಯಗಳಿಗೆ ಬಳಸಬಹುದಾಗಿದೆ. ಹೆಚ್ಚಿನ ಅನುದಾನದ ಸಿಎಂ ಸಿದ್ದರಾಮಯ್ಯನವರು ಜುಲೈ 30-31ರಂದು ಎರಡು ದಿನ ಶಾಸಕರೊಂದಿಗೆ ಮ್ಯಾರಥಾನ್ ಮೀಟಿಂಗ್ ಮಾಡಲಿದ್ದಾರೆ. ಶಾಸಕರು ಕ್ಷೇತ್ರದ ಬೇಡಿಕೆಗಳ ಪಟ್ಟಿ ಸಮೇತ ವಿವರಗಳನ್ನು ನೀಡುವಂತೆ ಸೂಚನೆ ಕೊಟ್ಟಿದ್ದಾರೆ. ಬಗ್ಗೆ ಕಾಂಗ್ರೆಸ್ನಂತೆಯೇ ಬಿಜೆಪಿ ಹಾಗೂ ಜೆಡಿಎಸ್ ಶಾಸಕರೂ ತಾಳ್ಮೆಯಿಂದ ಇರಬೇಕು. ನಿಮಗೂ ಅನುದಾನ ಸಿಗುತ್ತದೆ. ಈಗ ನಮ್ಮನ್ನು ಟೀಕೆ ಮಾಡುವ ಮುನ್ನ ನೀವು ಕೊಟ್ಟಿರುವುದರ ಬಗ್ಗೆ ಮೊದಲು ಹೇಳಬೇಕು. ಅಲ್ಲದೆ ನನಗೆ ಸ್ಯಾಂಕ್ಷನ್ ಆಗಿದ್ದ ಮೆಡಿಕಲ್ ಕಾಲೇಜು ಕಿತ್ತುಕೊಳ್ಳಲಿಲ್ವಾ? ಅದನ್ನು ಮರೆತು ಬಿಟ್ಟಿದ್ದೀರಾ ಎಂದು ಟೀಕಿಸಿದ್ದಾರೆ.
ಆದರೆ ನಾವು ನಿಮ್ಮ ಹಾಗೆ ಮಾಡುವುದಿಲ್ಲ. ಈಗ ಪ್ರಾರಂಭಿಸಲಾಗಿದೆ, ಎಲ್ಲರಿಗೂ ಹಂತ ಹಂತವಾಗಿ ಅನುದಾನ ನೀಡುತ್ತೇವೆ. ಸದ್ಯಕ್ಕೆ ಗ್ರಾಮೀಣ ಭಾಗದ ರಸ್ತೆ ಹಾಗೂ ನಗರ ಕಾಮಗಾರಿಗಳಿಗೆ 37.5 ಕೋಟಿ ರೂಪಾಯಿ ಹಣವನ್ನು ಇಡಲಾಗಿದೆ. ಅಲ್ಲದೆ 12.5 ಕೋಟಿ ರೂಪಾಯಿ ಶಾಸಕರ ವಿವೇಚನಾಧಿಕಾರಕ್ಕೆ ಬಿಟ್ಟು ಬಿಡಲು ತೀರ್ಮಾನಿಸಲಾಗಿದೆ. ಎಲ್ಲರೂ ತಾಳ್ಮೆಯಿಂದ ಇರಬೇಕೆಂದು ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.