ಕರುಳಿನ ಕೂಗು ಸಿನಿಮಾ ಕಂಡ್ರೆ ಆಗ್ತಿರಲಿಲ್ಲ!: ವಿಷ್ಣು ಸರ್ ಬೆಸ್ಟ್ : Prathama Podcast

Sandalwood: ನಟಿ ವಿನಯಾ ಪ್ರಸಾದ್ ಮಗಳು ಮತ್ತು ಕಲಾವಿದೆಯೂ ಆಗಿರುವ ಪ್ರತಿಮಾ ಪ್ರಸಾದ್ ಅವರು ಇಂದಿನ ಕಾಲದ ಕಲಾವಿದರು ಯಾವ ರೀತಿ ಡೈಲಾಗ್ ಹೇಳಲು ಕಷ್ಟಪಡುತ್ತಾರೆ ಅಂತಾ ವಿವರಿಸಿದ್ದಾರೆ.

ಅಮ್ಮನ ಜತೆ ಚಿಕ್ಕವಳಿದ್ದಾಗ ಶೂಟಿಂಗ್‌ಗೆ ಹೋದಾಗ, ಅಮ್ಮ ಡೈಲಾಗ್ ಹೇಳುವ ರೀತಿ ನೋಡುತ್ತಿದ್ದ ಪ್ರತಿಮಾ, ಅದೇ ರೀತಿ ಡೈಲಾಗ್ ಹೇಳುವುದನ್ನು ಕಲಿತಿದ್ದರಂತೆ. ಎಷ್ಟೇ ಪೇಜ್ ಡೈಲಾಗ್ ನೀಡಿದರೂ ಪ್ರತಿಮಾ ಹೇಳುತ್ತಾರಂತೆ. ಇದು ನನ್ನ ಅಮ್ಮನಿಂದ ನನಗೆ ಸಿಕ್ಕ ಅತ್ಯುತ್ತಮ ಬಳುವಳಿ ಅಂತಾರೆ ಪ್ರತಿಮಾ.

ಇನ್ನು ಪ್ರತಿಮಾಗೆ ಅಮ್ಮನ ಸಿನಿಮಾದಲ್ಲಿ ಕರುಳಿನ ಕೂಗು ಸಿನಿಮಾ ಇಷ್ಟವಾಗದ ಸಿನಿಮಾ ಅಂತೆ. ಯಾಕಂದ್ರೆ ಆ ಸಿನಿಮಾದಲ್ಲಿ ಅಮ್ಮನನ್ನು ಟ್ರಂಪ್ ಕಾರ್ಡ್ ರೀತಿ ಬಳಸಲಾಗಿದೆ. ನಾನು ಅಮ್ಮನ ಹಾಸ್ಯ ಭರಿತ ಸಿನಿಮಾ ನೋಡಿದವಳು. ಯಾರಿಗೂ ಹೇಳ್ಬೇಡಿ, ನೀ ನಕ್ಕರೆ ಹಾಲು ಸಕ್ಕರೆ, ಗಣೇಶನ ಮದುವೆ ಇಂಥ ಸಿನಿಮಾ ನೋಡಿ ಬೆಳೆದವಳು.

ಆದರೆ ಕರುಳಿನ ಕೂಗು ಸಿನಿಮಾದ ಡಬ್ಬಿಂಗ್ ಮಾಡುವ ಸಂದರ್ಭದಲ್ಲಿ ನನಗೆ ಕೋಪ ಬಂದು, ಅಲ್ಲೇ ಇದ್ದ ನಿರ್ದೇಶಕರನ್ನು ನಾನು ಬೈದಿದ್ದೆ. ಆಗ ನನಗೆ 7 ವರ್ಷ ವಯಸ್ಸು. ವಾಯ್ಸ್ ನೀಡುವಾಗ ಅಮ್ಮ ಅಳುತ್ತಿರಲಿಲ್ಲ. ಆದರೆ ಅಮ್ಮನ ವಾಯ್ಸ್ ವೇರಿಯೇಷನ್ ನೋಡಿ ನನಗೆ ಅಳು ಬಂದಿತ್ತು. ಹಾಗಾಗಿ ನಾನು ನಿರ್ದೇಶಕರ ಬಳಿ ಹೋಗಿ, ಯಾಕೆ ನೀವು ನನ್ನ ಅಮ್ಮನನ್ನು ಅಳಿಸುತ್ತಿದ್ದೀರಿ ಅಂತಾ ಕೇಳಿದ್ದೆ ಎಂದು ಹಳೆಯ ನೆನಪನ್ನು ಪ್ರತಿಮಾ ಮೆಲುಕು ಹಾಕಿದ್ದಾರೆ.

About The Author