Friday, July 4, 2025

Latest Posts

ಹಾಸನವನ್ನ ಮೀರಿಸುವಂತಿದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಸಂಖ್ಯೆ.

- Advertisement -

Hubli News: ಹುಬ್ಬಳ್ಳಿ: ಎಲ್ಲಿ ನೋಡಿದರೂ ಹೃದಯಾಘಾತದ್ದೇ ಸುದ್ದಿ, ದಿನಕ್ಕೆ ಕರ್ನಾಟಕದಲ್ಲೇ 4ರಿಂದ 5 ಮಂದಿ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಹಾಸನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿತ್ತು. ಆದರೆ ಇದೀಗ ಹುಬ್ಬಳ್ಳಿ ಕಮ್ಸ್ ಆಸ್ಪತ್ರೆಯಲ್ಲಿಯೂ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

ಕಳೆದ ಒಂದೇ ತಿಂಗಳು 26 ಜನ ಹಾರ್ಟ್‌ ಅಟ್ಯಾಕ್‌ನಿಂದ ಸಾವನ್ನಪ್ಪಿದ್ದಾರೆ. ಇದೇ ಜನವರಿಯಿಂದ ಇಲ್ಲಿಯವರೆಗೂ 101 ಜನ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇದು ಕಿಮ್ಸ್ ಆಸ್ಪತ್ರೆಯಲ್ಲಿ ಸತ್ತವರ ಸಂಖ್ಯೆ ಮಾತ್ರ, ಖಾಸಗಿ ಆಸ್ಪತ್ರೆ ಸಾವು ಲೆಕ್ಕಕ್ಕೆ ಇಲ್ಲ ಎನ್ನುವಂತಾಗಿದೆ..ಜನವರಿಯಿಂದ ಜೂನ್‌ವರೆಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 1749 ಜನರಿಗೆ ಹೃದಯ ಖಾಯಿಲೆಗೆ ಚಿಕಿತ್ಸೆ ನೀಡಲಾಗಿದೆ.

  • ಜನವರಿಯಲ್ಲಿ 308 ಜನರಿಗೆ ಚಿಕಿತ್ಸೆ, 11 ಜನರ ಸಾವು.
  • ಫೆಬ್ರವರಿಯಲ್ಲಿ 259 ಜನರಿಗೆ ಚಿಕಿತ್ಸೆ, 13 ಜನರ ಸಾವು.
  • ಮಾರ್ಚ್‌ನಲ್ಲಿ 277 ಜನರಿಗೆ ಚಿಕಿತ್ಸೆ, 19 ಜನ ಸಾವು.
  • ಏಪ್ರಿಲ್‌ನಲ್ಲಿ 289 ಜನರಿಗೆ ಚಿಕಿತ್ಸೆ, 16 ಜನ ಸಾವು.
  • ಮೇ‌ ನಲ್ಲಿ 303 ಜನರಿಗೆ ಚಿಕಿತ್ಸೆ, 16 ಜನ ಸಾವು.

ಕಳೆದ ತಿಂಗಳು ಅಂದ್ರೆ ಜೂನ್ ನಲ್ಲಿ 316 ಜನರು ಚಿಕಿತ್ಸೆ ಪಡೆದುಕೊಂಡರೇ ಬರೋಬ್ಬರಿ 26 ಜನ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

- Advertisement -

Latest Posts

Don't Miss