National news
ಹೈದರಾಬಾದ್ (ಫೆ.21): ಪ್ರತಿಯೊಬ್ಬರು ತಮ್ಮ ಅನುಕೂಲಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ದ ಇರುತ್ತಾರೆ. ಅದೇರೀತಿ ಇಲ್ಲೊಬ್ಬ ವ್ಯಕ್ತಿ ಬೇರೆ ಹೈದ್ರಾಬಾದ್ನಿಂದ ಚನೈಗೆ ವಿಮಾನದಲ್ಲಿ ಪ್ರಯಾಣ ಮಾಡಬೇಕಾಗಿರುತ್ತದೆ. ಆದರೆ ವಿಮಾನ ನಿಲ್ದಾಣಕ್ಕೆ ಬರುವುದು ಸ್ವಲ್ಪ ತಡವಾಗುತ್ತಿರುತ್ತದೆ. ತಡವಾಗಿ ಹೋದರೆ ವಿಮಾನ ಹೊರಟು ಹೋಗುತ್ತದೆ. ಪ್ರಯಾಣ ಮಾಡಲು ಆಗುವುದಿಲ್ಲವೆಂದು ಒಂದು ಉಪಾಯ ಮಾಡಿ ವಿಮಾನದಲ್ಲಿ ಬಾಂಬ್ ಇರಿಸಿದ್ದಾರೆಂದು ಸುಳ್ಳು ಕರೆ ಮಾಡುತ್ತಾನೆ .
ವಿಮಾನ ಹಾರಾಟಕ್ಕೆ ಸಿದ್ದವಿರುತ್ತದೆ.ಕರೆ ಬಂದ ತಕ್ಷಣ ಹಾರಾಟವನ್ನು ರದ್ದುಗೊಳಿಸಿ ಪ್ರಯಾಣಿಕರನ್ನು ಕೆಳಗಿಳಿಸಿ ಸುಕಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಾರೆ. ವಿಮಾನವನ್ನು ತಪಾಸಣೆ ಮಾಡಿದ ನಂತರ ಯಾವುದೆ ರೀತಿಯ ಬಾಂಬ್ ಇರುವುದಿಲ್ಲ.ನಂತರ ಬಾಂಬ್ ಇರುವುದಾಗಿ ಸುಳ್ಳು ಮಾಹಿತಿ ಕೊಟ್ಟವರು ಯಾರು ಎಂದು ತನಿಖೆ ಮಾಡಿದಾಗ ಅವರಿಗೆ ಒಂದು ರೋಚಕ ಸಂಗತಿ ಹೊರಬೀಳುತ್ತದೆ.
ಅದೆನೆಂದರೆ ಆವ್ಯಕ್ತಿ ಅದೇ ವಿಮಾನದಲ್ಲಿ ಪ್ರಯಾಣ ಮಾಡುವವನಾಗಿದ್ದು ನಿಲ್ಧಾಣಕ್ಕೆ ಸರಿಯಾದ ಸಮಯಕ್ಕೆ ಬರಲು ವಿಫಲವಾಗಿದ್ದರಿಂದ ಈ ರೀತಿ ವಿಮಾನದಲ್ಲಿ ಬಾಂಬ್ ಇರುವುದಾಗಿ ಸುಳ್ಳು ಮಾಹಿತಿ ನೀಡಿ ವಿಮಾನವನ್ನು ತಡೆದೆ ಎಂದು ವಿಚಾರಣೆ ವೇಳೆ ತಿಳಿಸಿದಾಗ ಅವನನ್ನು ಬಂದಿಸುತ್ತಾರೆ.