Chikkodi News: ಚಿಕ್ಕೊಡಿ: ಮನೆ ನೋಡಲು ಹೋದ ವ್ಯಕ್ತಿ ಕೃಷ್ಣಾ ನದಿಯಲ್ಲಿ ನಾಪತ್ತೆಯಾದ ಘಟನೆ ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದಿದೆ.
ನೆರೆ ಪ್ರವಾಹದಲ್ಲಿ ಮಗನ ಎದುರೇ ಚಿಕ್ಕಪ್ಪ ನೀರುಪಾಲಾಗಿದ್ದು, ನಾಪತ್ತೆಯಾಗಿರುವ ವ್ಯಕ್ತಿಯನ್ನು ಬಾಳು ಚವ್ಹಾಣ್ (54) ಎಂದು ಗುರುತಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಧಾರಾಕಾರ ಮಳೆಯಿಂದಾಗಿ ಇವರ ಮನೆ ಕೃಷ್ಣಾ ನದಿಯಲ್ಲಿ ಮುಳುಗಿತ್ತು. ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಇವರು, ತಮ್ಮ ಮಗನ ಜೊತೆ ಮನೆ ನೋಡಲು ಹೋಗಿದ್ದಾರೆ. ಆದರೆ, ನೀರಿನ ರಭಸ ಸಡನ್ನಾಗಿ ಹೆಚ್ಚಾಗಿದ್ದು, ಇವರು ಮಗನ ಎದುರೇ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಇ್ನನೊಂದೆಡೆ ಇವರನ್ನು ಮೊಸಳೆ ಹೊತ್ತೊಯ್ದಿದೆ ಎನ್ನುವ ಶಂಕೆಯೂ ವ್ಯಕ್ತವಾಗಿದೆ. ಅಥಣಿ ಅಗ್ನಿಶಾಮಕ ಹಾಗೂ ಪೋಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. 3 ಗಂಟೆ ಸತತವಾಗಿ ಶೋಧ ಕಾರ್ಯ ನಡೆಸಿದ್ದು, ಈ ವ್ಯಕ್ತಿಯ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.