Chikkodi News: ಚಿಕ್ಕೋಡಿ: ಬಸ್‌ಸ್ಯ್ಟಾಂಡ್‌ನಲ್ಲಿ ಬಟ್ಟೆ ಬಿಚ್ಚಿ ರೀಲ್ಸ್ ಮಾಡುತ್ತಿದ್ದ ಪೋಕರಿಗೆ, ಅಥಣಿ ಪೊಲೀಸರು ಬುದ್ಧಿ ಕಲಿಸಿದ್ದಾರೆ. ಹುಡುಗಿಯರು ನೋಡಲೆಂದು ಬಟ್ಟೆ ಧರಿಸದೇ ಬಂದ ಯುವನೊಬ್ಬ, ಪೋಸ್ ಕೊಡುತ್ತಿದ್ದ.
ತನ್ನ ಬಾಡಿ ತೋರಿಸಲೆಂದು, ಬರೀ ಜೀನ್ಸ್‌ನಲ್ಲಿ ಅಥಣಿ ಬಸ್‌ಸ್ಚ್ಯಾಂಡ್‌ಗೆ ಬಂದ ಯುವಕ, ರೀಲ್ಸ್ ಮಾಡುತ್ತಾ ಹುಚ್ಚಾಟ ಮೆರೆದಿದ್ದಾನೆ. ಸಿಸಿಟಿವಿ ಕ್ಯಾಮೆರಾ ರೆಕಾರ್ಡಿಂಗ್‌ನಲ್ಲಿ ಈತನನ್ನು ನೋಡಿರುವ ಸ್ಥಳೀಯ ಪೊಲೀಸರು, ತಕ್ಷಣವೇ ಅರೆಸ್ಟ್ ಮಾಡಿ, ಠಾಣೆಗೆ ಕರೆತಂದು, ಅವರ ರೀತಿಯಲ್ಲೇ ಬುದ್ಧಿ ಹೇಳಿದ್ದಾರೆ.
ಅಥಣಿ ತಾಲೂಕಿನ ಶಿನಾಳ ಗ್ರಾಮದ ಬಾಳೇಶ್ ದುರ್ಗಿ ಎಂಬ ಯುವಕ ಈ ರೀತಿ ಹುಚ್ಚಾಟ ಮೆರೆದಿದ್ದು, ಪೊಲೀಸರು ಬುದ್ಧಿ ಕಲಿಸಿದ ಬಳಿಕ, ತನ್ನದೇ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ತಾನು ಮಾಡಿದ್ದು ತಪ್ಪು, ಇನ್ನು ಮುಂದೆ ಈ ರೀತಿ ಯಾರೂ ಮಾಡಬೇಡಿ ಎಂದು ಹೇಳಿದ್ದಾನೆ. ಅಥಣಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.