www.karnatakatv.net : ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮ ಘಟದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಕೊಯ್ನಾ ಜಲಯಾಶಯ ಸಂಪೂರ್ಣ ಭರ್ತಿಯಾಗಿದ್ದು ಕೃಷ್ಣಾ ನದಿಗೆ ನೀರನ್ನ ಬಿಡಲಾಗಿದೆ. ಜೊತೆಗೆ ವೇದಂಗಂಗಾ ನದಿಯು ಕೂಡಾ ಉಕ್ಕಿ ಹರಿಯುತ್ತಿದೆ. ಇದರ ಪರಿಣಾಮ ರಾಷ್ಟ್ರೀಯ ಹೆದ್ದಾರಿ ನಾಲ್ಕು ಸಂಪೂರ್ಣ ಜಲಾವೃತಗೊಂಡು ಹೈವೇ ಸಂಚಾರವನ್ನ ಸಂಪೂರ್ಣವಾಗಿ ಬಂದ ಮಾಡಲಾಗಿದ್ದು

ಬೆಳಗಾವಿಯಲ್ಲಿ ನಿನ್ನೆಯಿಂದ ರಾಷ್ಟ್ರೀಯ ಹೆದ್ದಾರಿ ನದಿಯಾಗಿ ಪರಿವರ್ತನೆ ಗೊಂಡಿದ್ದು, ಹೆದ್ದಾರಿ ಮಧ್ಯೆ ಪ್ರವಾಹದಲ್ಲಿ ಸಿಲುಕಿದ್ದ ಲಾರಿ ಚಾಲಕ ಪರದಾಡುತ್ತಿದ್ದನ್ನು ಕಂಡು ಟ್ರ್ಯಾಕ್ಟರ್ ಮೂಲಕ ಪೊಲೀಸರು ಲಾರಿ ಚಾಲಕನ ರಕ್ಷಣೆ ಮಾಡಲಾಗಿದೆ.

ಯಮಗರ್ಣಿ ಬಳಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಈ ಘಟನೆ ನಡೆದಿದ್ದು, ನಿಪ್ಪಾಣಿ ಪೊಲೀಸರಿಂದ ತಮಿಳನಾಡು ಮೂಲದ ಲಾರಿ ಚಾಲಕನ ರಕ್ಷಣೆ ಮಾಡಲಾಗಿದೆ. ಪೊಲೀಸರು ಲಾರಿಯನ್ನು ನಡು ರಸ್ತೆಯಲ್ಲೇ ಬಿಟ್ಟು ಚಾಲಕನ ಜೀವ ಉಳಿಸಿದ್ದಾರೆ.

ಹಾಗಾಗಿ ಬೆಳಗಾವಿಯಲ್ಲಿ ಮಳೆರಾಯಣ ಆರ್ಭಟದಿಂದ ಸಾಕಷ್ಟು ಅನಾಹುತಗಳು ಆಗುವ ಸಂಭವ ಕಂಡು ಬಂದಿದೆ.ಪ್ರವಾಹ ಬರುವ ಮುನ್ಸೂಚನೆ ಕಂಡು ಬಂದಿದ್ದು ನದಿಯ ಅಕ್ಕ ಪಕ್ಕದ ಸ್ಥಳೀಯರನ್ನು ಬೇರೆ ಕಡೆ ಸ್ಥಳಾಂತರಿಸಲು ಜಿಲ್ಲಾಡಳಿತ ಸಕಲ ಸಿದ್ದವಾಗಿದೆ.