Sunday, September 8, 2024

Latest Posts

ಅಡುಗೆ ಎಣ್ಣೆ ದರ ಲೀಟರ್ ಗೆ 15 ರೂ.ಇಳಿಕೆ!

- Advertisement -

ಅಂತರಾಷ್ಟ್ರೀಯ ಮಟ್ಟದಲ್ಲಿ ಖಾದ್ಯ ತೈಲ ದರಗಳು ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಬ್ರಾಂಡೆಡ್ ಖಾದ್ಯ ತೈಲಗಳ ಬೆಲೆ ಲೀಟರ್‌ ಗೆ 15 ರೂ. ತನಕ ಇಳಿಕೆಯಾಗಿವೆ. ಇದರಿಂದ ಗ್ರಾಹಕರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.

ಜನಪ್ರಿಯ ಬ್ರ್ಯಾಂಡ್ ಗಳ ಮೇಲೆ ಬೆಲೆ ಕುಸಿತದ ಪರಿಣಾಮವು ತಕ್ಷಣವೇ ಅನುಭವಕ್ಕೆ ಬರಲಿದೆ. ಪ್ರೀಮಿಯಂ ಬ್ರ್ಯಾಂಡ್ ಗಳು ಮಾತ್ರ ಬೆಲೆ ಇಳಿಕೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಸ್ಪಲ್ಪ ಸಮಯ ತೆಗೆದುಕೊಳ್ಳಲಿವೆ ಎಂದು ಭಾರತೀಯ ಖಾದ್ಯ ತೈಲ ಉತ್ಪಾದಕರ ಸಂಘದ ಅಧ್ಯಕ್ಷ ಸುಧಾಕರ ರಾವ್ ದೇಸಾಯಿ ಹೇಳಿದ್ದಾರೆ.

ಹೈದರಾಬಾದ್ ಮೂಲದ ಜೆಮಿನಿ ಎಡಿಬಲ್ಸ್ ಆಂಡ್ ಫ್ಯಾಟ್ಸ್ ತನ್ನ ಫ್ರೀಡಂ ಸನ್ ಫ್ಲವರ್ ಆಯಿಲ್ ನ ಎಂಆರ್ ಪಿಯನ್ನು ಕಳೆದ ವಾರದಲ್ಲಿ ಒಂದು ಲೀಟರ್‌ ಪೌಚ್ ಗೆ 15 ರೂ. ಇಳಿಕೆ ಮಾಡಿ 220 ರೂ.ಗೆ ಕಡಿತಗೊಳಿಸಿದೆ. ಈ ವಾರ ಅದನ್ನು ಇನ್ನೂ 20 ರೂ. ಇಳಿಕೆ ಮಾಡಿ 200ರೂ.ಗೆ ಇಳಿಸಲು ನಿರ್ಧರಿಸಿದೆ. ಖಾದ್ಯ ತೈಲ ಬೆಲೆಗಳಲ್ಲಿನ ಕುಸಿತವು ಆಹಾರ ಹಣದುಬ್ಬರದ ಮೇಲೆ ಪರಿಣಾಮ ಬೀರಲಿದೆ. ನಾವು ಸರ್ಕಾರದ ಕೋರಿಕೆ ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಖಾದ್ಯ ತೈಲಗಳ ಎಂಆರ್ ಪಿಯನ್ನು ಕಡಿಮೆ ಮಾಡುತ್ತಿವೆ. ಹೊಸ ಎಂಆರ್ ಪಿ ಹೊಂದಿರುವ ತೈಲಗಳು ಮುಂದಿನ ವಾರದ ವೇಳಗೆ ಮಾರುಕಟ್ಟೆಯನ್ನು ತಲುಪಲಿವೆ ಎಂದು ಅದಾನಿ ವಿಲ್ಮಾರ್ ವ್ಯವಸ್ಥಾಪಕ ನಿರ್ದೇಶಕ ಆಂಗ್ಮುಮಲಿಕ್ ಹೇಳಿದ್ದಾರೆ.

 

- Advertisement -

Latest Posts

Don't Miss