- Advertisement -
Dharwad News: ಧಾರವಾಡ: ಸತತ 10 ದಿನಗಳಿಂದ ಧಾರವಾಡದಲ್ಲಿ ಭಾಾರಿ ಮಳೆ ಸುರಿಯುತ್ತಿದ್ದು, ಮಳೆಯ ರಭಸಕ್ಕೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹನಸಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಳೆಗೆ ಮೇಲ್ಛಾವಣಿ ನೆನೆದು ನೆನೆದು, ಕೊನೆಗೆ ಕುಸಿದು ಬಿದ್ದಿದೆ. ಮನೆ ಬಿದ್ದ ಪರಿಣಾಮ ಅತ್ತೆ ಸೊಸೆಗೆ ಗಂಭೀರ ಗಾಯವಾಗಿದ್ದು, ಇಬ್ಬರನ್ನೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುವರ್ಣ ಪಾಟೀಲ, ಮಂಗಳಾ ಪಾಟೀಲ ಇಬ್ಬರಿಗೂ ಕಿಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ನವಲಗುಂದ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
- Advertisement -