Friday, November 22, 2024

Latest Posts

ಮನೆಯಲ್ಲಿ ಪೂಜೆ ಮಾಡುವಾಗ ಅನುಸರಿಸಬೇಕಾದ ನಿಯಮಗಳು ನಿಮಗಾಗಿ..!

- Advertisement -

Daily puja:

ಜೀವನದಲ್ಲಿ ಬಯಸಿದ ಆಸೆಗಳನ್ನು ಪೂರೈಸಲು, ದೇವರಿಗೆ ಸಂಬಂಧಿಸಿದ ಪೂಜಾ ನಿಯಮಗಳ ಬಗ್ಗೆ ತಿಳಿದಿರಬೇಕು ಹಾಗೂ ಅನುಸರಿಸಬೇಕು. ಹೀಗೆ ಮಾಡುವುದರಿಂದ ದೇವರ ಆಶೀರ್ವಾದ ಸಿಗುತ್ತದೆ.

ಹಿಂದೂ ಸಂಪ್ರದಾಯದಲ್ಲಿ ದೇವತಾರಾಧನೆಗೆ ಪ್ರಮುಖ ಸ್ಥಾನವಿದೆ. ಮನೆಯಲ್ಲಿ ಪೂಜಾ ಕೊಠಡಿಯನ್ನು ಏರ್ಪಾಟು ಮಾಡಿಕೊಂಡು ತಮ್ಮಇಷ್ಟದೈವವನ್ನು ಪೂಜಿಸುತ್ತಾರೆ. ಇನ್ನು ಕೆಲವರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಆದರೆ, ಎಷ್ಟೋ ಮಂದಿ ದೇವರನ್ನು ಪೂಜಿಸಿದರೂ ಕೃಪೆ ಸಿಗುತ್ತಿಲ್ಲ ಎಂಬ ಬೇಸರವಿದೆ. ಆದರೆ ಜೀವನದಲ್ಲಿ ಬಯಸಿದ ಬಯಕೆಗಳನ್ನು ಪೂರೈಸಲು, ದೇವರಿಗೆ ಸಂಬಂಧಿಸಿದ ಪೂಜಾ ನಿಯಮಗಳ ಬಗ್ಗೆ ತಿಳಿದಿರಬೇಕು ಹಾಗೂ ಅನುಸರಿಸಬೇಕು. ಹೀಗೆ ಮಾಡುವುದರಿಂದ ದೇವರ ಆಶೀರ್ವಾದ ನಿಮಗೆ ಸಿಗುತ್ತದೆ. ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಸಂಬಂಧಿಸಿದ ಎಲ್ಲಾ ಪ್ರಮುಖ ನಿಯಮಗಳ ಬಗ್ಗೆ ನಾವು ವಿವರವಾಗಿ ತಿಳಿದುಕೊಳ್ಳೋಣ.

1.ದೇವರ ಪೂಜೆಯನ್ನು ಯಾವಾಗಲೂ ಈಶಾನ್ಯ, ಪೂರ್ವ ಅಥವಾ ಉತ್ತರ ದಿಕ್ಕಿಗೆ ಅಭಿಮುಖವಾಗಿ ಭಕ್ತಿ ಮತ್ತು ಶ್ರದ್ಧೆಯಿಂದ ಮಾಡಬೇಕು.

2.ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ.. ಪೂಜೆ ಮಾಡುವ ಮೊದಲ ನಿಯಮ ಗಣಪತಿಯನ್ನು ಪೂಜಿಸುವುದು. ಹೀಗೆ ಮಾಡುವುದರಿಂದ ಯಾವುದೇ ಅಡೆತಡೆಗಳಿಲ್ಲದೆ ಕೈಗೊಂಡ ಕಾರ್ಯಗಳು ಪೂರ್ಣಗೊಳ್ಳುತ್ತವೆ ಮತ್ತು ಯಶಸ್ವಿಯಾಗುತ್ತವೆ.

3.ಸನಾತನ ಸಂಪ್ರದಾಯದ ಪ್ರಕಾರ.. ಕಪ್ಪು ಬಟ್ಟೆ ಧರಿಸಿ ಯಾವುದೇ ದೇವರನ್ನು ಪೂಜಿಸಬಾರದು. ಕಪ್ಪು ಬಟ್ಟೆಗಳನ್ನು ಧರಿಸುವುದರಿಂದ ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಗಳು ಬರುತ್ತವೆ ಎಂದು ನಂಬಲಾಗಿದೆ.

4.ಹಿಂದೂ ಧರ್ಮದಲ್ಲಿ ದೇವರ ಪೂಜೆಯಲ್ಲಿ ದೀಪವನ್ನು ಹಚ್ಚಲು ಕೆಲವು ನಿಯಮಗಳಿವೆ. ಉದಾಹರಣೆಗೆ, ಮುರಿದ ದೀಪವನ್ನು ಎಂದಿಗೂ ಬೆಳಗಿಸಬೇಡಿ. ಹಾಗೆಯೇ ಪೂಜೆಯ ಸಮಯದಲ್ಲಿ ಒಂದು ದೀಪದಿಂದ ಇನ್ನೊಂದು ದೀಪಕ್ಕೆ ಹಚ್ಚಬಾರದು. ಎಣ್ಣೆ ಮತ್ತು ತುಪ್ಪದ ದೀಪಗಳನ್ನು ಅಪ್ಪಿತಪ್ಪಿಯೂ ಮಿಶ್ರಣ ಮಾಡಿ ಹಚ್ಚಬಾರದು.

5.ನೈವೇದ್ಯದ ಸಮಯದಲ್ಲಿ ತುಳಸಿ ದಳವನ್ನು ಯಾವಾಗಲೂ ವಿಷ್ಣುವಿಗೆ, ಕೃಷ್ಣನಿಗೆ ಮತ್ತು ಹನುಮಂತನಿಗೆ ಅರ್ಪಿಸಬೇಕು. ಆದರೆ ತುಳಸಿ ದಳವನ್ನು ಸಂಜೆ, ಭಾನುವಾರ, ಮಂಗಳವಾರ, ಏಕಾದಶಿಯಲ್ಲಿ ಎಂದಿಗೂ ಕೀಳಬಾರದು ಅಂತಹ ಪರಿಸ್ಥಿತಿ ಎದುರಾದರೆ, ತುಳಸಿ ದಳವನ್ನು ಒಂದು ದಿನ ಮುಂಚಿತವಾಗಿ ಕತ್ತರಿಸಿ ಇಡಬೇಕು.

6.ದೇವಸ್ಥಾನದಲ್ಲಿ ಅಥವಾ ಮನೆಯಲ್ಲಿ ಪೂಜೆ ಮಾಡುವಾಗ ದೇವರಿಗೆ ಪ್ರದಕ್ಷಿಣೆ ಹಾಕಬಾರದು. ಶಿವನಿಗೆ ಅರ್ಧ ಪ್ರದಕ್ಷಿಣೆಯನ್ನು ಮಾತ್ರ ಮಾಡಬೇಕು. ಅರ್ಧ ಪ್ರದಕ್ಷಿಣೆ ಮಾಡಿದ ನಂತರ.. ಮರಳಿ ಬರಬೇಕು.

7.ಹನುಮಂತನನ್ನು ಪೂಜಿಸುವಾಗ, ಮಹಿಳೆಯರು ಅವನ ಮೂರ್ತಿಯನ್ನು ಮುಟ್ಟಬಾರದು. ಮಹಿಳೆಯರು ಅರ್ಚಕ ಅಥವಾ ಪುರುಷರ ಮೂಲಕ ಹನುಮಂತನಿಗೆ ಸಿಂಧೂರವನ್ನು ಅರ್ಪಿಸಬೇಕು.

8.ಹಿಂದೂ ನಂಬಿಕೆಯ ಪ್ರಕಾರ, ರಾತ್ರಿಯಲ್ಲಿ ದೇವರ ಪೂಜೆ ಮಾಡುವಾಗ, ಪೂಜೆಯಲ್ಲಿ ಗಂಟೆಗಳು ಮತ್ತು ಶಂಖಗಳನ್ನು ಬಾರಿಸಬಾರದು.

9.ಧಾರ್ಮಿಕ ನಂಬಿಕೆಯ ಪ್ರಕಾರ, ಮನೆಯಲ್ಲಿ ಅಥವಾ ದೇವಾಲಯದಲ್ಲಿ ಸಂಜೆ ಪೂಜೆಯ ನಂತರ, ಪೂಜಾ ಸ್ಥಳದ ಮೇಲೆ ಮುಸುಕು ಹಾಕಬೇಕು. ಬೆಳಿಗ್ಗೆ ಸ್ನಾನ ಮತ್ತು ಧ್ಯಾನದ ನಂತರ, ದೇವರ ಪೂಜೆಯ ಸಮಯದಲ್ಲಿ ಮುಸುಕು ತೆಗೆಯಬೇಕು.

10.ದೇವರ ಆರಾಧನೆಯ ಸಂಪೂರ್ಣ ಫಲವನ್ನು ಪಡೆಯಲು, ಯಾವಾಗಲೂ ಸಂಪೂರ್ಣ ಶ್ರದ್ಧೆಯಿಂದ ನಂಬಿಕೆ ಮತ್ತು ಸಮರ್ಪಣೆಯಿಂದ ಪೂಜಿಸಬೇಕು.

2023 ಈ 5 ರಾಶಿಯವರಿಗೆ ಮರೆಯಲಾಗದ ವರ್ಷ…ಮುಟ್ಟಿದೆಲ್ಲಾ ಚಿನ್ನ..!

ಭೋಜನದ ನಂತರ ತಟ್ಟೆಯಲ್ಲಿ ಕೈ ತೊಳೆಯುವುದು ಒಳ್ಳೆಯದೋ ಕೆಟ್ಟದ್ದೋ..?

ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ಪೂಜಿಸುತ್ತಿದ್ದೀರಾ..ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ..!

- Advertisement -

Latest Posts

Don't Miss