Saturday, September 21, 2024

Latest Posts

ನಿಮ್ಮ ದಾಂಪತ್ಯದ ಗುಟ್ಟನ್ನು ನಿಮ್ಮ ಮದುವೆ ದಿನಾಂಕದಿಂದ ತಿಳಿಯಬಹುದು….!

- Advertisement -

asterology:

ಸಾಮಾನ್ಯವಾಗಿ ಎಲ್ಲರು ಮದುವೆಗೆ ಮುಂಚೆ ಜಾತಕ ನೋಡಿ ಮದುವೆಯಾಗುತ್ತಾರೆ ಆದರೆ ಜಾತಕ ಮಾತ್ರವಲ್ಲ ಮದುವೆ ದಿನಾಂಕ ಕೂಡ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮದುವೆಗೆ ಮುನ್ನ ಮದುವೆಯ ದಿನಾಂಕದ ಬಗ್ಗೆಯೂ ಗಮನ ನೀಡಬೇಕು ಎನ್ನುತ್ತದೆ ಸಂಖ್ಯಾಶಾಸ್ತ್ರ.ಮದುವೆಯ ದಿನಾಂಕ ನಿಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ನೀವು ಯಾವ ದಿನಾಂಕದಂದು ಮದುವೆಯಾಗಿದ್ದೀರಿ ಎಂಬುದನ್ನು ನೋಡಿ, ನಿಮ್ಮ ದಾಂಪತ್ಯ ಜೀವನ ಹೇಗಿರುತ್ತದೆ ಎಂಬುದನ್ನು ಹೇಳಬಹುದು. ಹಾಗಾದರೆ ನಿಮ್ಮ ಮದುವೆ ದಿನಾಂಕದಿಂದ ನಿಮ್ಮ ದಾಂಪತ್ಯ ಜೀವನದ ಗುಟ್ಟನ್ನು ತಿಳಿದು ಕೊಳ್ಳೋಣ ಬನ್ನಿ .

ಯಾವುದೇ ತಿಂಗಳ 1,10,19 ಮತ್ತು 28 ನೇ ದಿನಾಂಕ ನಿಮ್ಮ ಮದುವೆಯಾಗಿದ್ದರೆ ಸಂಖ್ಯಾಶಾಸ್ತ್ರದ ಪ್ರಕಾರ, 2, 3, 4, 5, 7, 8, 9 ಸಂಖ್ಯೆಗಳು ನಿಮಗೆ ಬಹಳ ಒಳ್ಳೆಯದು. ಈ ದಿನಾಂಕದಂದು ಮದುವೆಯಾದ ದಂಪತಿಗಳು ತಮ್ಮ ಮದುವೆಯ ಬಗ್ಗೆ ಗಂಭೀರವಾಗಿರುತ್ತಾರೆ. ಇವರು ಅತ್ಯಂತ ಕ್ರಿಯಾಶೀಲವಾಗಿರುತ್ತಾರೆ ಹಾಗೂ ತಮ್ಮ ಜೀವನದ ಬಗ್ಗೆ ಹೆಚ್ಚು ಕಾಳಜಿ ವಹಿಸಲು ಇಷ್ಟ ಪಡುತ್ತಾರೆ ಆದರೆ ಸ್ವಲ್ಪ ಅಹಂಕಾರ ಇವರಿಗಿರುತ್ತದೆ ಇದರಿಂದ ದಾಂಪತ್ಯದಲ್ಲಿ ಸಣ್ಣ ಪುಟ್ಟ ಗಲಾಟೆಗಳು ನಡೆಯುತ್ತದೆ.

ಯಾರು ೨, ೧೧, ೨೦ನೇ ದಿನಾಂಕದಂದು ಮದುವೆಯಾಗಿರುತ್ತಾರೋ ಅವರು ಜೀವನದಲ್ಲಿ ಬಹಳ ನಿಷ್ಠೆಯಿಂದ ಇರುತಾರೆ ಹಾಗೂ ದಂಪತಿಗಳ ಮಧ್ಯೆ ಬಾಂಧವ್ಯ ಚ್ಛನ್ನಾಗಿರುತ್ತದೆ .ಹಾಗೂ ಇವರು ಪರಸ್ಪರ ಕಾಳಜಿ ವಹಿಸುವ ಸ್ವಭಾವ ಹೊಂದಿರುತ್ತಾರೆ ಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ನೆರವಾಗಿರುತ್ತಾರೆ ಆದರೆ ಇವರ ಜೀವನದಲ್ಲಿ ಮೂರನೇ ವ್ಯಕ್ತಿಯಿಂದಾಗಿ ದಾಂಪತ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ.

೩, ೩೦ ಅಥವಾ 12ನೇ ತಾರೀಖಿನಂದು ಮದುವೆಯಾದ ಜೋಡಿ ಯಶಸ್ವಿಯಾಗ್ತಾರೆ ಅವರ ಜೀವನದಲ್ಲಿ ಸದಾ ಸುಖ, ಸಮೃದ್ಧಿ ಇರುತ್ತದೆ ಈ ದಂಪತಿಗಳು ತಮ್ಮ ಜೀವನದಲ್ಲಿ ಶಿಸ್ತು ಮತ್ತು ಉತ್ತಮ ಜೀವನ ನಡೆಸಲು ಇಷ್ಟಪಡುತ್ತಾರೆ.

ಯಾವುದೇ ತಿಂಗಳ 4, 13 ಅಥವಾ 22ನೇ ತಾರೀಖಿನಂದು ಮದುವೆಯಾದ ಜೋಡಿಯ ವೈವಾಹಿಕ ಜೀವನ ಐಷಾರಾಮಿಯಿಂದ ಕೂಡಿರುತ್ತದೆ. ಅವರು ತಮ್ಮ ಸಂಬಂಧದಲ್ಲಿ ತೃಪ್ತರಾಗಿರುತ್ತಾರೆ. ತಮ್ಮ ಸಂಗಾತಿಯಿಂದ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿರುತ್ತಾರೆ.

೫,14 ಅಥವಾ 23 ರಂದು ಮದುವೆಯಾದ ಜೋಡಿ ಹಠಮಾರಿ ಸ್ವಭಾವದವರಾಗಿರುತ್ತಾರೆ. ಇವರು ತ್ವರಿತ ನಿರ್ಧಾರ ತೆಗೆದುಕೊಳ್ಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಇಬ್ಬರ ಹಠ, ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ.

6, 15 ಅಥವಾ 24 ರಂದು ಮದುವೆಯಾದ ದಂಪತಿಗಳು ಸ್ನೇಹಿತರಂತೆ ಇರುತ್ತಾರೆ ಹಾಗೂ ಜನರಲ್ಲಿ ಅತಿ ಬೇಗ ಬೆರೆಯುವ ಸ್ವಭಾವ ಇವರದಾಗಿರುತ್ತದೆ .

ಯಾವುದೇ ತಿಂಗಳ 7, 16, 25ನೇ ದಿನಾಂಕದಂದು ವಿವಾಹವಾಗುವ ಜನರು, ವೈವಾಹಿಕ ಜೀವನದಲ್ಲಿ ಯಶಸ್ವಿಯಾಗುತ್ತಾರೆ ಇವರು ಪ್ರವಾಸವನ್ನು ಹೆಚ್ಚು ಇಷ್ಟಪಡ್ತಾರೆ ಹಾಗೂ ಅತ್ಯಂತ ಆಕರ್ಷಕವಾದ ಜೀವನ ಅವರದ್ದಾಗಿರುತ್ತದೆ.

8, 17 ಅಥವಾ 26ನೇ ದಿನಾಂಕದಂದು ಮದುವೆಯಾದ ದಂಪತಿಗಳ ವೈವಾಹಿಕ ಜೀವನ ಯಶಸ್ವಿಯಾಗುತ್ತದೆ. ಯಾವ ಸಂದರ್ಭದಲ್ಲೂ ಇವರು ಸಂಗಾತಿಯನ್ನು ಬಿಟ್ಟುಕೊಡುವುದಿಲ್ಲ ಕಷ್ಟದ ಸಂದರ್ಭದಲ್ಲೂ ಸಂಗಾತಿಯನ್ನು ಬೆಂಬಲಿಸುವ ಮೂಲಕ ಗೆಲುವಿಗೆ ನೆರವಾಗುತ್ತಾರೆ .

9, 18 ಅಥವಾ 27ನೇ ದಿನಾಂಕದಂದು ಮದುವೆಯಾದ ದಂಪತಿಗಳ ಮಧ್ಯೆ ಕೆಲವು ಭಿನ್ನಾಭಿಪ್ರಾಯಗಳು ಕಂಡು ಬರುತ್ತದೆ . ಆದರೆ ಇದು ದೀರ್ಘಕಾಲ ಇರುವುದಿಲ್ಲ ಜಗಳ ಇದ್ದರೂನು ಪ್ರೀತಿಗೆ ಎಂದೂ ಕೊರತೆಯಿರುವುದಿಲ್ಲ ಈ ದಂಪತಿಗಳ ಮಧ್ಯೆ ನಂಬಿಕೆ ಹೆಚ್ಚಾಗಿರುತ್ತದೆ ಹಾಗಾಗಿ ಭಿನ್ನಾಭಿಪ್ರಾಯ ದೂರವಾಗುತ್ತದೆ.

ನಿಮಗೆ ಮದುವೆ ಬೇಗ ಆಗ್ತಿಲ್ವ ಹೀಗೆ ಮಾಡಿ ಖಂಡಿತ ಮದುವೆ ಯೋಗ ಕೂಡಿಬರುತ್ತದೆ :

 

ಜನರ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳದಿರಲು ಹೀಗೆ ಮಾಡಿ …!

ದೀಪಾವಳಿಯ ಮುಂಚೆ ಈ ಒಂದು ಕೆಲಸ ಮಾಡಿದರೆ ನಿಮಗೆ ಹಣದ ಕೊರತೆ ಉಂಟಾಗುವುದಿಲ್ಲ …!

 

- Advertisement -

Latest Posts

Don't Miss