Friday, November 14, 2025

Latest Posts

ಮಕರ ಸಂಕ್ರಾತಿ ಹಬ್ಬದ ಮಹತ್ವ ;(Makar Sankranti)

- Advertisement -

ಮಕರ ಸಂಕ್ರಾoತಿ ಭಾರತದ ಶ್ರೇಷ್ಟ ಹಬ್ಬ, ಹಿಂದೂ ಧರ್ಮದ ಸಂಸ್ಕೃತಿ, ಸಂಪ್ರದಾಯ ಎಲ್ಲವೂ ಸಹ ಈ ಹಬ್ಬದಲ್ಲಿ ಪೂರಕವಾಗಿವೆ ಹಾಗಾಗಿ ಜನವರಿ 15 ರಂದು ಸಮಸ್ತ ಹಿಂದು ಸಮುದಾಯ ಈ ಹಬ್ಬವನ್ನು ಆಚರಿಸುತ್ತದೆ.
ಅಂದ ಹಾಗೆ ಗ್ರಾಮೀಣ ಪ್ರದೇಶದಲ್ಲಿ ಇದು ಸುಗ್ಗಿಯ ಕಾಲ, ರೈತರು ವರ್ಷಪೂರ್ತಿ ಕೆಲಸ ಮಾಡಿ ಇಂದು
ಸುಗ್ಗಿಯ ರೂಪದಲ್ಲಿ ಸಂಭ್ರಮದಿoದ ಆಚರಿಸುವ ಹಬ್ಬ, ಪ್ರಮುಖವಾಗಿ ಸೂರ್ಯ ತನ್ನ ಪಥವನ್ನು ಬದಲಿಸಿದಕ್ಷಿಣಾಯನದಿಂದ ಉತ್ತರಾಯಣಕ್ಕೆ ಚಲಿಸುವ ಪವಿತ್ರ ದಿನವನ್ನು ಮಕರ ಸಂಕ್ರಾತಿಯಾಗಿ ಆಚರಿಸುತ್ತೇವೆ.

ಇನ್ನು ಸಂಪ್ರದಾಯದ ಪ್ರಕಾರ ಸೂರ್ಯ ತನ್ನ ಮಗ, ಮಕರ ರಾಶಿಯ ಅಧಿಪತಿ ಶನಿಯ ಮನೆಗೆ ಹೋಗುತ್ತಾನೆ ಎನ್ನುವುದು ನಂಬಿಕೆ. ಈಗಾಗಿ ಈ ದಿನವನ್ನು ಮಕರ ಸಂಕ್ರಾoತಿ ಎಂದು ಕರೆಯುತ್ತಾರೆ.
ಇನ್ನು ಪುರಾಣದ ಪ್ರಕಾರ ಸಂಕ್ರಾತಿಯನ್ನು ದೇವತೆ ಎಂದು ನಂಬಲಾಗಿದೆ. ಸಂಕ್ರಾoತಿಯು ಸಂಕರಾಸುರನೆoಬ ದೈತ್ಯನ ವಧೆ ಮಾಡಿದ್ದಾಳೆ ಎಂಬ ಕಥೆಯಿದೆ.

- Advertisement -

Latest Posts

Don't Miss