ಸಂಸದರು ಅಂದ್ರೆ ಅವ್ರಿಗೆ ಕೋಟಿ ಲೆಕ್ಕದಲ್ಲಿ ಆಸ್ತಿ ಪಾಸ್ತಿ, ಐಶಾರಾಮಿ ಜೀವನ ಎಲ್ಲವೂ ಇರೋದನ್ನ ನೋಡಿದ್ದೀರ. ಆದ್ರೆ ಇಲ್ಲೊಬ್ಬರು ಸಂಸದರು ಮಾತ್ರ ಇದಕ್ಕೆಲ್ಲ ಅಪವಾದದಂತೆ ಇದ್ದಾರೆ. ಅವರೇ ಒಡಿಶಾದ ಬಾಲಸೋರ್ ನಿಂದ ಆಯ್ಕೆಯಾಗಿರೋ ಸಂಸದ ಪ್ರತಾಪ್ ಸಾರಂಗಿ.
ಪ್ರತಾಪ್ ಸಾರಂಗಿ ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ಸಂಸದರು. ಇವರ ವಾಸ ಕೇವಲ ಒಂದು ಪುಟ್ಟ ಗುಡಿಸಿಲಿನಲ್ಲಿ. ಇವರ ಮನೆಯಲ್ಲಿ ಫ್ರಿಡ್ಜ್ , ವಾಷಿಂಗ್ ಮೆಷಿನ್ ನಂತಹ ಯಾವುದೇ ವಸ್ತು ಬಿಡಿ. ದಾಖಲೆ ಪತ್ರಗಳನ್ನಿಡೋದಕ್ಕೆ ತಿಜೋರಿ ಕೂಡ ಇಲ್ಲ. ಅಷ್ಟು ಸರಳ ವ್ಯಕ್ತಿತ್ವದ ಮನುಷ್ಯ ಈ ಪ್ರತಾಪ್ ಸಾರಂಗಿ. ಸಾರಂಗಿಯವರ ಬಳಿ ಇರೋದು ಒಂದು ಸೈಕಲ್ ಮಾತ್ರ. ಇದರಲ್ಲೇ ಮೊನ್ನೆಯ ಚುನಾವಣಾ ಪ್ರಚಾರ ಮುಗಿಸಿದ್ದಾರೆ. ಪ್ರತಿ ಹಳ್ಳಿಗೂ ಸೈಕಲ್ ಮೂಲಕವೇ ತೆರಳಿ ಪ್ರಚಾರ ಮಾಡಿ ಜನರ ವಿಶ್ವಾಸ ಗಿಟ್ಟಿಸಿಕೊಂಡಿದ್ದಾರೆ.
ಅಂದಹಾಗೆ ಸಾರಂಗಿ ಒಬ್ಬರು ಅವಿವಾಹಿತ, ತಾಯಿಯೇ ಸರ್ವಸ್ವವಾಗಿದ್ದರು, ಆದ್ರೆ ಅವರ ತಾಯಿ ಕಳೆದ ವರ್ಷ ನಿಧನರಾಗಿದ್ದಾರೆ. ಹೀಗಾಗಿ ಒಂಟಿ ಜೀವನ ಸಾಗಿಸ್ತಿದ್ದಾರೆ ಸಾರಂಗಿ. ಬಾಲ್ಯದಿಂದಲೇ ಸದಾ ಆಧ್ಯಾತ್ಮದೆಡೆ ಇವರು ಆಸಕ್ತಿ ಹೊಂದಿದ್ದರಿಂದ ಮಠಕ್ಕೆ ತೆರಳುತ್ತಿದ್ದರು. ಹಾಗೆಯೇ ಸನ್ಯಾಸತ್ವ ಸ್ವೀಕರಿಸೋದಕ್ಕೂ ರೆಡಿಯಾಗಿದ್ರು. ಆದ್ರೆ ಮಠದ ಸ್ವಾಮೀಜಿ ನೀನು ಸಮಾಜಸೇವೆ ಮಾಡು ಅಂತ ಬಾಲಾಸೋರ್ ಗೆ ಕಳುಹಿಕೊಟ್ಟರಂತೆ. ಅಂದಿನಿಂದ ಇಂದಿನವರೆಗೂ ಜನರ ಮಧ್ಯೆ ಸಾಮಾನ್ಯರಲ್ಲಿ ಸಾಮಾನ್ಯನಂತೆ ಜೀವನ ನಡೆಸುತ್ತಿದ್ದ ಸಾರಂಗಿ, ರಾಜಕೀಯ ಪ್ರವೇಶಿದ್ರು.
ಇನ್ನು ಸಾರಂಗಿ 2004 ಹಾಗೂ 2009ರಲ್ಲಿ ನೀಲಗಿರಿ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದರು. ಇದೀಗ ಸಂಸದರಾಗಿ ಆಯ್ಕೆಯಾದರೂ ಅವರ ಜೀವನ ಶೈಲಿ, ಸರಳತೆ ಹಾಗೆಯೇ ಕಾಪಾಡಿಕೊಂಡಿದ್ದಾರೆ. ಹಾಗೆಯೇ ಅತ್ಯುತ್ತಮ ಸಂಸ್ಕೃತ ಪಂಡಿತರೂ ಆಗಿರೋ ಪ್ರತಾಪ್ ಸಾರಂಗಿ ಒಡಿಶಾದ ಬುಡಕಟ್ಟು ಪ್ರದೇಶವನ್ನೇ ಹೆಚ್ಚಾಗಿ ಹೊಂದಿರುವ ಮಯೂರ್ ಗಂಜ್ , ಬಾಲ್ ಸೋರ್ ಭಾಗದಲ್ಲಿ ಹಲವು ಶಿಕ್ಷಣಾಲಯಗಳ ಮೂಲಕ ಶೈಕ್ಷಣಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಲ್ಲದೆ ತಮ್ಮ ಪಬಿಡುವಿನ ಸಮಯದಲ್ಲಿ ಓದುವ ಹವ್ಯಾಸ ಹಾಗೂ ಮಂಗ, ಶ್ವಾನ ಮತ್ತಿತರ ಪ್ರಾಣಿಗಳಿಗೆ ಆಹಾರ ನೀಡೋ ಕೆಲಸವನ್ನು ತಪ್ಪದೇ ಮಾಡ್ತಾರೆ.
ಒಟ್ಟಾರೆ ಸಾಮ್ಯಾನ್ಯರಲ್ಲಿ ಅತಿ ಸಾಮಾನ್ಯರಾಗಿ ಜೀವನ ಸಾಗಿಸಿಕೊಂಡು ಸಂಸತ್ ಪ್ರವೇಶಿಸ್ತಾ ಇರೋ ಪ್ರತಾಪ್ ಸಾರಂಗಿ ಬೇರೆಲ್ಲಾ ಸಂಸದರ ನಡುವೆ ವಿಶೇಷವಾಗಿ ನಿಲ್ಲುತ್ತಾರೆ. ಜನರ ಸಮಸ್ಯೆ ಅರ್ಥ ಮಾಡಿಕೊಂಡು ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸೋ ಇಂತಹವರ ಸಂಖ್ಯೆ ನೂರ್ಮಡಿಯಾಗಲಿ ಅನ್ನೋದು ಪ್ರತಿ ಪ್ರಜಾಪ್ರಭುತ್ವವಾದಿಯ ಆಶಯ.
ಅಂಬಿಗೆ ಶುಭಕೋರಿದ ನಿಖಿಲ್ ಮತ್ತೆ ಟ್ರಾಲ್- ನಿಖಿಲ್ ಎಲ್ಲಿದ್ದೀಯಪ್ಪಾ ಅಂತಿದ್ದಾರೆ ಜನ…!ತಪ್ಪದೇ ಈ ವಿಡಿಯೋ ನೋಡಿ