Friday, November 28, 2025

Latest Posts

ನವಜೋಡಿಗೆ ಶುಭ ಹಾರೈಸಿ ಫೋಟೋ ತೆಗೆದುಕೊಳ್ಳುವಾಗಲೇ ಕುಸಿದು ಬಿದ್ದ ವೇದಿಕೆ..

- Advertisement -

Uttara Pradesh: ನವಜೋಡಿಗೆ ಶುಭ ಹಾರೈಸಿ ಫೋಟೋ ತೆಗೆದುಕೊಳ್ಳುವಾಗಲೇ ವೇದಿಕೆ ಕುಸಿದು ಬಿದ್ದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಬಿಲ್ಲಿಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವೇದಿಕೆ ಮೇಲಿದ್ದ ವಧು-ವರ, ಬಿಜೆಪಿ ನಾಯಕರೆಲ್ಲ ಬಿದ್ದು, ಗಾಯವಾಗಿದೆ.

ಬಿಜೆಪಿಯ ಮುಖಂಡ ಅಭಿಷೇಕ್ ಸಿಂಗ್ ಎಂಜಿನಿಯರ್ ಸಹೋದರನ ಮದುವೆಯಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಬಿಜೆಪಿ ನಾಯಕರು ಕೂಡ ಮದುವೆಗೆ ಆಗಮಿಸಿದ್ದರು. ವಧು-ವರರಿಗೆ ಶುಭಕೋರಿ, ವೇದಿಕೆ ಮೇಲೆ ಫೋಟೋ ತೆಗೆಸಿಕ“ಳ್ಳುತ್ತಿದ್ದ ಸಂದರ್ಭದಲ್ಲಿ ವೇದಿಕೆ ಕುಸಿದು ಬಿದ್ದಿದೆ. ಈ ವೇಳೆ ಹಿರಿಯ ಬಿಜೆಪಿ ನಾಯಕರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಅಲ್ಲದೇ ವಧು-ವರನಿಗೂ ಸಣ್ಣ ಗಾಯಗಳಾಗಿದ್ದು, ಆಸ್ಪತ್ರೆಗೆ ಹೋಗುವುದು ಬೇಡವೆಂದು ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಬಳಿಕ ಕಾರ್ಯಕ್ರಮದ ಉಸ್ತುವಾರಿ ವಹಿಸಿಕ“ಂಡವರಿಗೆ ತರಾಟೆಗೆ ತೆಗೆದುಕ“ಳ್ಳಲಾಗಿದೆ.

- Advertisement -

Latest Posts

Don't Miss