Movie News: ಕನ್ನಡ ಚಿತ್ರರಂಗದಲ್ಲಿ ತಮ್ಮ ಲಕ್ ಪರೀಕ್ಷಿಸಿಕೊಳ್ಳಲು ಹೊಸ ತಂಡವೊಂದು ಬರುತ್ತಿದ್ದು, ಸಂಭವಾಮಿ ಯುಗೇ ಯುಗೇ ಎನ್ನುವ ಚಿತ್ರ ಜೂನ್ 21ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ.
ಕರ್ನಾಟಕ ಟಿವಿ ಫಿಲ್ಮ್ ಬ್ಯೂರೋ ಹೆಡ್ ವಿಜಯ್ ಭರಮಸಾಗರ ಅವರು ಸಂಭವಾಮಿ ಯುಗೇ ಯುಗೇ ಸಿನಿಮಾ ತಂಡದೊಂದಿಗೆ ಸಂದರ್ಶನ ನಡೆಸಿದ್ದು, ಸಿನಿಮಾ ಬಗ್ಗೆ ಒಂದಿಷ್ಟು ವಿಚಾರ ಚರ್ಚಿಸಿದ್ದಾರೆ. ಈ ಸಂದರ್ಶನದಲ್ಲಿ ಚಿತ್ರದ ನಾಕ ಜಯ್ ಶೆಟ್ಟಿ, ನಟಿ ನಿಶಾ ರಜಪೂತ್, ನಟ ಅಶೋಕ್, ವಿಲನ್ ಪಾತ್ರಧಾರಿ ಭಜರಂಗಿ ಪ್ರಸನ್ನ ಅವರು ಭಾಗವಹಿಸಿದ್ದರು.
ನಟ ಜಯ್ ಶೆಟ್ಟಿ ಅವರಿಗೆ ನಿರ್ದೇಶಕರು ಬಂದು ಕೆಲ ಕಥೆ ಹೇಳಿದಾಗ, ಜಯ್ ಅವರಿಗೆ ಸಂಭವಾಮಿ ಯುಗೇ ಯುಗೇ ಕಥೆಯೇ ಇಷ್ಟವಾಗಿತ್ತಂತೆ. ಓರ್ವ ಕುರುಡಿ ತಾಯಿಗೆ ಓರ್ವ ಮಗ. ಆತನ ತಂದೆ ತಾಯಿಗೆ ಮೋಸ ಮಾಡಿ, ಬೇರೆ ಊರಿಗೆ ಹೋಗಿರುತ್ತಾನೆ. ಆ ಊರಿಗೆ ತಂದೆಯನ್ನು ಹುಡುಕಿಕೊಂಡು ಆ ತಾಯಿ, ಮಗ ಬರುತ್ತಾರೆ. ಸತ್ಯ ಗೊತ್ತಾಗಿ, ಇವರಿಬ್ಬರು, ಅದೇ ಊರಿನಲ್ಲಿ ಬೇರೆಯಾಗಿ ವಾಸಿಸುತ್ತಾರೆ. ಮಗ ದೊಡ್ಡವನಾದ ಮೇಲೆ ಕೆಲಸದ ಚಿಂತೆಯಲ್ಲಿರುವಾಗ, ನೀನು ಪಂಚಾಯ್ತಿ ಪ್ರೆಸಿಡೆಂಟ್ ಆಗಿ, ಕೆಲಸ ಮಾಡಿ, ಸಮಾಜ ಸೇವೆ ಮಾಡು ಎಂದು ತಾಯಿ ಸಲಹೆ ನೀಡುತ್ತಾಳೆ. ಆಕೆಯ ಸಲಹೆಯಂತೆ ಮಗ ಪಂಚಾಯ್ತಿ ಪ್ರೆಸಿಡೆಂಟ್ ಆಗಲು ಒಪ್ಪುತ್‌ತಾನೆ. ಇದರ ಮುಂದಿನ ಕಥೆಯೇ ಸಂಭವಾಮಿ ಯುಗೇ ಯುಗೇ.
ಇನ್ನು ನಟಿ ನಿಶಾ ಸ್ವಾತಿ ಎನ್ನುವ ಪಾತ್ರ ಮಾಡಿದ್ದು, ಸಿಟಿಯಿಂದ ಹಳ್ಳಿಗೆ ಬಂದು ಸೆಟಲ್ ಆಗಿರುವ ಕುಟುಂಬದ ಹುಡುಗಿ. ಆಕೆ ಹಳ್ಳಿಗೆ ಬಂದ ಮೇಲೆ ಏನೇನಾಗತ್ತೆ ಅನ್ನೋದನ್ನು ನೀವು ಥಿಯೇಟರ್‌ಗೆ ಹೋಗಿಯೇ ನೋಡಬೇಕು. ಸಿನಿಮಾ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ.

