Sunday, October 27, 2024

Latest Posts

2021-22ನೇ ಸಾಲಿನ ನೀಟ್​-ಪಿಜಿ ಪ್ರವೇಶಕ್ಕೆ ಅನುಮತಿ ನೀಡಿದ ಸುಪ್ರೀಂಕೋರ್ಟ್.

- Advertisement -

ನವದೆಹಲಿ: 2021-22ನೇ ಸಾಲಿನ ನೀಟ್​-ಪಿಜಿ ಪ್ರವೇಶಾತಿ ವಿಚಾರದಲ್ಲಿ ಆಕಾಂಕ್ಷಿಗಳಿಗೆ ಬಿಗ್​ ರಿಲೀಫ್​ ನೀಡಿರುವ ಸುಪ್ರೀಂಕೋರ್ಟ್​, ಈ ವರ್ಷದ ವೈದ್ಯಕೀಯ ಕೋರ್ಸ್‌ಗಳ ಪ್ರವೇಶದಲ್ಲಿ ಹಿಂದುಳಿದ ವರ್ಗಗಳ ಶೇ. 27 ಮತ್ತು ಆರ್ಥಿಕವಾಗಿ ದುರ್ಬಲ ವರ್ಗ (EWS​)ಗಳ ಶೇ. 10ರ ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿಯವ ಮೂಲಕ ನೀಟ್​-ಪಿಜಿ ಕೌನ್ಸೆಲಿಂಗ್ ಅನ್ನು ಪುನರಾರಂಭಿಸಲು ಸುಪ್ರೀಂಕೋರ್ಟ್​ ಅವಕಾಶ ಮಾಡಿಕೊಟ್ಟಿದೆ.

ಆರ್ಥಿಕವಾಗಿ ದುರ್ಬಲ ವರ್ಗಗಳ ಫಲಾನುಭವಿಗಳನ್ನು ಗುರುತಿಸಲು ಈ ವರ್ಷವೂ 8 ಲಕ್ಷ ರೂ. ಆದಾಯದ ಮಾನದಂಡವನ್ನು ಸುಪ್ರೀಂಕೋರ್ಟ್​ ಅನುಮತಿಸಿದೆ. ಇಡಬ್ಲ್ಯೂಎಸ್​( EWS) ಮೀಸಲಾತಿ ಮತ್ತು ಗುರುತಿಸುವ ಮಾನದಂಡಗಳ ಕುರಿತು ವಿವರಣಾತ್ಮಕ ವಿಚಾರಣೆಯನ್ನು ಮಾರ್ಚ್​ ಮೂರನೇ ವಾರದಲ್ಲಿ ನಡೆಸಲಾಗುವುದು ಎಂದು ಕೋರ್ಟ್​ ಹೇಳಿದ್ದು, ಆ ಸಮಯದಲ್ಲಿ ಇಡಬ್ಲ್ಯೂಎಸ್​ ಕೋಟಾಗಳ ಸಿಂಧುತ್ವವನ್ನು ಕೋರ್ಟ್​ ಪರಿಗಣಿಸಲಿದೆ. ಈ ಪ್ರವೇಶಗಳು ಸುಪ್ರೀಂಕೋರ್ಟ್‌ನ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತವೆ.

ಕೋರ್ಟ್​ ತೀರ್ಪಿನಿಂದಾಗಿ 45,000 ಕ್ಕೂ ಹೆಚ್ಚು ಕಿರಿಯ ವೈದ್ಯರು ಕೆಲಸಕ್ಕೆ ಸೇರಬಹುದಾಗಿದೆ.  ಕಳೆದ ವಾರ ನಡೆದ ವಿಚಾರಣೆಯಲ್ಲಿ, ಇಡಬ್ಲ್ಯೂಎಸ್ (EWS) ಫಲಾನುಭವಿಗಳನ್ನು ಗುರುತಿಸಲು ಅಸ್ತಿತ್ವದಲ್ಲಿರುವ ಮಾನದಂಡಗಳನ್ನು ಈ ಶೈಕ್ಷಣಿಕ ವರ್ಷಕ್ಕೆ ಉಳಿಸಿಕೊಳ್ಳಲಾಗುವುದು ಎಂದು ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿತ್ತು. ನೀಟ್​ (National Eligibility Come Entrance Test) ವಿದ್ಯಾರ್ಥಿಗಳಿಗೆ ಪ್ರವೇಶ ಮತ್ತು ಕಾಲೇಜುಗಳ ಹಂಚಿಕೆ ನಡೆಯುತ್ತಿರುವ ಈ ಸಮಯದಲ್ಲಿ ನಿಯಮಗಳ ಬದಲಾವಣೆಯು ಗೊಂದಲಗಳಿಗೆ ಕಾರಣವಾಗುತ್ತದೆ ಎಂದು ಸರ್ಕಾರ ಹೇಳಿತ್ತು. ಮುಂದಿನ ವರ್ಷದಿಂದ ಪರಿಷ್ಕೃತ ಮಾನದಂಡಗಳನ್ನು ಅನ್ವಯಿಸಬಹುದು ಎಂದು ಸರ್ಕಾರ ಹೇಳಿದೆ.

- Advertisement -

Latest Posts

Don't Miss