ಹೆಸರು ಬೆಳೆ ಸಮೀಕ್ಷೆಗೆ ಬಂದ ಅಧಿಕಾರಗಳ ತಂಡ: ಶೀಘ್ರವೇ ಬೆಳೆ ಪರಿಹಾರಕ್ಕೆ ಆಗ್ರಹ..!

Hubli News: ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ವಿಪರೀತ ಮಳೆಯಾಗಿರುವ ಹಿನ್ನೆಲೆಯಲ್ಲಿ ಬೆಳೆಗಳಿಗೆ ರೋಗದ ಭೀತಿ ಎದುರಾಗಿದ್ದು, ಒಂದೆಡೆಯಾದರೇ ಹೆಸರು ಬೆಳೆಗಳು ಮೊಳಕೆ ಒಡೆಯುತ್ತಿವೆ. ಈ ನಿಟ್ಟಿನಲ್ಲಿ ನಿಮ್ಮ ಕರ್ನಾಟಕ ಟಿವಿ ವಿಸ್ತೃತ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಕೃಷಿ ಇಲಾಖೆಯ ಅಧಿಕಾರಿಗಳು ಹುಬ್ಬಳ್ಳಿಯ ಗೋಪನಕೊಪ್ಪದ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗೋಪನಕೊಪ್ಪ ಗ್ರಾಮಕ್ಕೆ ಬೆಳೆ ಸಮೀಕ್ಷೆ ಮಾಡಲು ಹುಬ್ಬಳ್ಳಿ ತಾಲ್ಲೂಕಿನ ದಂಡಾಧಿಕಾರಿಗಳಾದ ಮಹೇಶ್ ಗಸ್ತಿ. ಕೃಷಿ ಇಲಾಖೆ ಅಧಿಕಾರಿಗಳಾದ ಮಂಜುಳಾ ತೆಂಬೆದ ಹಾಗೂ ಕಂದಾಯ ಇಲಾಖೆ ಅಧಿಕಾರಿ ರವಿ ಬೆನ್ನೂರ, ಗ್ರಾಮ ಲೆಕ್ಕಾಧಿಕಾರಿ ಆನಂದ ದೊಡ್ಡಮನಿ ಹಾಗೂ ಕೃಷಿ ಇಲಾಖೆ ಸಿಬ್ಬಂದಿ ಗೋಪನಕೊಪ್ದ ಗ್ರಾಮದ ಜಮೀನಿನಲ್ಲಿ ಹೆಸರು ಬೆಳೆ ಪರಿಶೀಲನೆ ನಡೆಸಿದರು.

ಇನ್ನೂ ಅಧಿಕಾರಿಗಳ ಜೊತೆ ಮಹಾನಗರ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಈಶ್ವರಗೌಡ ಪಾಟೀಲ್ ಅವರು, ಅತಿವೃಷ್ಟಿ ಮಳೆಯಿಂದಾಗಿ ಹೆಸರು ಹಾಗೂ ಉದ್ದು ಬೆಳೆಗಳು ಸಂಪೂರ್ಣ ಹಾಳಾಗಿದ್ದು ಫಸಲು ರೈತರ ಕೈಗೆ ಸೇರದ ಪರಿಸ್ಥಿತಿ ಬಂದಿರುವ ಕಾರಣ, ಅತೀ ಶೀಘ್ರದಲ್ಲಿ ಹು-ಧಾ ಮಹಾನಗರ ಜಿಲ್ಲೆ, ಧಾರವಾಡ ಗ್ರಾಮಾಂತರ ಜಲ್ಲಾ, ರೈತರಿಗೆ ಸರ್ಕಾರದ ವತಿಯಿಂದ ಪರಿಹಾರವನ್ನು ಬೇಗನೆ ಒದಗಿಸಿಕೊಡಬೇಕೆಂದು ಗ್ರಾಮದ ರೈತರ ಪರವಾಗಿ ಆಗ್ರಹಿಸಿದರು.

ಸಂಗಮೇಶ್ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

About The Author