www.karnatakatv.net : ದೆಹಲಿ :ದೇಶಾದ್ಯಂತ ಕೋರೊನಾ ಹಾವಳಿ ಹೆಚ್ಚಾಗುತ್ತಲೆ ಇದೆ ಹಾಗೆ ಬ್ಲಾಕ್ ಫಂಗಸ್, ಡೆಲ್ಟಾ ಪ್ಲಸ್ ಹೀಗೆ ಅನೇಕ ರೀತಿಯ ವೈರಸ್ ಗಳು ಹರಡುತ್ತಲೆ ಇವೆ. ಅದರ ಜೋತೆ ಈಗ ದೇಶದಲ್ಲಿ ಮೂರನೇ ಅಲೆಯು ಅಗಸ್ಟ್ ಅಂತ್ಯದ ವೇಳೆಗೆ ಬರುವ ಸಾಧ್ಯತೆಗಳು ತುಂಬಾ ಇದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಎಚ್ಚರಿಸಿದೆ. ಈ ಮೂರನೇ ಅಲೆಯು ದೇಶಾದ್ಯಂತ ಇರಲಿದ್ದು ಆದರೆ ಎರಡನೇ ಅಲೆಯಷ್ಟು ತೀವ್ರವಾಗಿ ಇರುವುದಿಲ್ಲ ಎಂದು ಐಸಿಎಂಆರ್ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸಮೀರನ್ ಪಂಡಾ ಹೇಳಿದ್ದಾರೆ. ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 38,949 ಹೊಸ ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ 542 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇದರೊಂದಿಗೆ ದೇಶದಲ್ಲಿ ಪತ್ತೆಯಾದ ಒಟ್ಟು ಪ್ರಕರಣಗಳ ಸಂಖ್ಯೆ 3,10,26,829ಗೆ ತಲುಪಿದ್ದು, ಸಾವಿನ ಸಂಖ್ಯೆ 4,12,531ಕ್ಕೆ ತಲುಪಿದೆ.