Belagavi News: ಬೆಳಗಾವಿ : ಬೆಳಗಾವಿಯಲ್ಲಿ ಧ್ವಜಾರೋಹಣ ಮಾಡಿದ ಬಳಿಕ, ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ್ದು, ಹಲವು ವಿಷಯಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಬೆಳಗಾವಿ ಜಿಲ್ಲೆ ಅಭಿವೃದ್ಧಿಗೆ ವಿಶೇಷ ಆದ್ಯತೆ ಕೊಡ್ತಿದ್ದೇವೆ. ಮಳೆಯಿಂದ ಹಾಳಾಗಿರೋ ರಸ್ತೆಗಳನ್ನ ಡಿಸೆಂಬರ್ ಒಳಗಾಗಿ ಸರಿ ಮಾಡ್ತೀವಿ.ಬೆಳಗಾವಿ ಜಿಲ್ಲೆ ವಿಭಜನೆ ಸಮಯ ಬಂದೇ ಬರುತ್ತದೆ. ಸಮಯ ಬರುವವರೆಗೂ ನಾವು ಕಾಯಿಲೆಬೇಕು. ಕೇಂದ್ರ ಸರ್ಕಾರದಿಂದ ಕೊಟ್ಟಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು. ಸೂಪರ್ ಸ್ಪೆಷಲ್ ಆಸ್ಪತ್ರೆ ಆರಂಭಕ್ಕೆ ಸಿಬ್ಬಂದಿ ಬೇಕಾಗಿದೆ. ಆದಷ್ಟು ಬೇಗ ಆಸ್ಪತ್ರೆ ಆರಂಭ ಮಾಡ್ತೀವಿ. ಕ್ಯಾನ್ಸರ್ ಆಸ್ಪತ್ರೆ ಮಂಜೂರು ಆಗಿದೆ, ಆದ್ರೆ ಸೂಕ್ತ ಜಾಗ ಹುಡುಕಾಟ ಮಾಡ್ತಿದ್ದೇವೆ. ಗ್ಯಾರಂಟಿ ಯೋಜನೆ ಸ್ಥಗಿತಗೊಳಿಸುವ ಚಿಂತನೆ ಆಗ್ತಿಲ್ಲ. ಜನರ ಅಭಿಪ್ರಾಯ ಏನಿದೆ ಅನ್ನೋದು ಚರ್ಚೆ ಮಾಡ್ತೀವಿ. ನಾನು ಪದೇ ಪದೇ ಗ್ಯಾರಂಟಿ ಬಗ್ಗೆ ಹೇಳಿದ್ದೇವೆ. ಆದ್ರೆ ನಾನು ಹೇಳಿದ್ದೇ ಬೇರೆ ತೋರಿಸುತ್ತಿದ್ದಾರೆ ಎಂದು ಸತೀಶ್ ಹೇಳಿದ್ದಾರೆ.
ಸ್ನೇಹಂ ಕಾರ್ಖಾನೆ ಅಗ್ನಿ ಅವಘಡ ಪ್ರಕರಣದ ಬಗ್ಗೆ ಮಾತನಾಡಿದ ಜಾರಕಿಹೊಳಿ, ಪ್ರಕರಣ ತನಿಖೆ ನಡೆಯುತ್ತಿದೆ ಎಂದಿದ್ದಾರೆ. ಇನ್ನು ಸಿಎಂ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಅವರೇ ಈಗ ಸಿಎಂ ಇದ್ದಾರೆ, ಅವರೇ ಇರ್ತಾರೆ. ಅದೆಲ್ಲವೂ ಹೈಕಮಾಂಡಗೆ ಬಿಟ್ಟಿದ್ದು. ನಾನು ನಿನ್ನೆ ಹೇಳಿರುವೆ ಸಿದ್ಧರಾಮಯ್ಯ ಅವರೇ ಸಿಎಂ ಅಂತಾ. ಅದನ್ನ ಯಾರೂ ತೋರಿಸುತ್ತಿಲ್ಲ ಎಂದ ಸತೀಶ್ ಜಾರಕಿಹೊಳಿ ಬೇಸರ ವ್ಯಕ್ತಪಡಿಸಿದರು.