National News: ಇಂದಿನ ಕಾಲದಲ್ಲಿ ಸುಲಭವಾಗಿ ಶುರು ಮಾಡಬಹುದಾದ ಸ್ವಂತ ಕೆಲಸ ಅಂದ್ರೆ ಯುಟ್ಯೂಬ್. ಆದ್ರೆ ಆ ಕೆಲಸದಲ್ಲಿ ಎಲ್ಲರೂ ಸಕ್ಸಸ್ ಆಗೋಕ್ಕೆ ಸಾಧ್ಯಾನೇ ಇಲ್ಲ. ಕೆಲವರು ಹಲವು ವರ್ಷಗಳ ಕಾಲ ಎಷ್ಟು ಕಷ್ಟಪಟ್ಟರೂ ಅವರಿಗೆ ಸಕ್ಸಸ್ ಸಿಗುವುದಿಲ್ಲ. ಇನ್ನು ಕೆಲವರು ಕೆಲವೇ ತಿಂಗಳಲ್ಲಿ ಯಶಸ್ಸು ಕಾಣುತ್ತಾರೆ.
ಈ ರೀತಿ ಯೂಟ್ಯೂಬ್ ಮಾಡಿದಾಗ, ಕೆಲವರು ವ್ಲಾಗ್ ಮಾಡುತ್ತಾರೆ, ಮತ್ತೆ ಕೆಲವರು ಎಂಟರ್‌ಟೇನ್‌ಮೆಂಟ್, ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ, ಹೀಗೆ ಹಲವು ಮಾಹಿತಿ ನೀಡುತ್ತಾರೆ. ಅದೇ ರೀತಿ ಓರ್ವ ಯೂಟ್ಯೂಬರ್ ಹಳ್ಳಿಗೆ ಹೋಗಿ, ಅಲ್ಲಿನ ಜನರ ಜೀವನದ ಬಗ್ಗೆ ವ್ಲಾಗ್ ಮಾಡುವಾಗ, ಆತ ಕಪ್ಪು ಬಣ್ಣದ ಬ್ಯಾಗ್ ಧರಿಸಿದ್ದಾನೆ. ಅದನ್ನು ನೋಡಿ ಹಳ್ಳಿಜನ ಆತ ಟೆರರಿಸ್ಟ್ ಎಂದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸರಿಗೆ ದೂರು ನೀಡಿದ್ದಾರೆ.
ಸೂರಜ್ ಶರ್ಮಾ ಎಂಬ ಯೂಟ್ಯೂಬರ್ ಕಪ್ಪು ಬಣ್ಣದ ಭಾರದ ಬ್ಯಾಗ್ ಧರಿಸಿ, ಹಳ್ಳಿಯೊಂದಕ್ಕೆ ಹೋಗಿದ್ದಾನೆ, ಅಲ್ಲಿ ಆತನ ಬ್ಯಾಗ್ ಓಪನ್ ಮಾಡಿ ತೋರಿಸು ಎಂದು ಹಳ್ಳಿಗರು ಕೇಳಿದ್ದಾರೆ. ಆದರೆ ಆತ ತಾನು ಬ್ಯಾಗ್ ಓಪನ್ ಮಾಡುವುದಿಲ್ಲವೆಂದು ಹೇಳಿದ್ದಾನೆ. ಬಳಿಕ ಹಳ್ಳಿಗರು ಇವರು ಟೆರರಿಸ್ಟ್ ಇರಬೇಕು ಎಂದು ತಿಳಿದು ಪೊಲೀಸರಿಗೆ ಫೋನ್ ಮಾಡಿ, ದೂರು ನೀಡಿದ್ದಾರೆ.
ಇನ್ನು ಈ ವೀಡಿಯೋ ವೈರಲ್ ಆಗಿದ್ದು, ಇದರಲ್ಲಿ ಹಳ್ಳಿಗರು ಬ್ಯಾಗ್ ಓಪನ್ ಮಾಡಿ ತೋರಿಸಲು ಹೇಳಿದ್ದು, ನನಗೆ ಇದರಲ್ಲಿರುವ ವಸ್ತುಗಳನ್ನು ಓಪನ್ ಮಾಡಿ ತೋರಿಸಲು ಮತ್ತು ಅದನ್ನು ಪುನಃ ತೆಗೆದು ಒಳಗಿಡಲು ಸಮಯ ಹಿಡಿಯುತ್ತದೆ. ಹಾಗಾಗಿ ನಾನು ನನ್ನ ಬ್ಯಾಗ್ ಓಪನ್ ಮಾಡಿ ತೋರಿಸುವುದಿಲ್ಲ. ನೀವು ಬೇಕಾದರೆ, ಪೊಲೀಸರಿಗೆ ಫೋನ್ ಮಾಡಿ ಹೇಳಬಹುದು ಎಂದು ಯೂಟ್ಯೂಬರ್ ಹೇಳಿದ್ದಾರೆ. ಈತನ ಮಾತನ್ನು ನಂಬದ ಹಳ್ಳಿಗರು ಪೊಲೀಸರಿಗೆ ಫೋನ್ ಮಾಡಿದ್ದಾರೆ. ಬಳಿಕ ಮಾತುಕತೆಯ ಮೂಲಕ ಎಲ್ಲವೂ ಸರಿಯಾಗಿದೆ.
Vlogger confused as atankwadi in Village pic.twitter.com/giACdgZOob
— Ghar Ke Kalesh (@gharkekalesh) September 7, 2024