Friday, July 11, 2025

Latest Posts

ಪ್ರೇಮಿ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ!!

- Advertisement -

ಪ್ರೇಮಿ ಜೊತೆ ಸೇರಿ ಪತಿಯನ್ನೇ ಕೊಂದಿದ್ದ ಪತ್ನಿ, ಕೊನೆಗೂ ಅಂದರ್ ಆಗಿದ್ದಾಳೆ. ಜುಲೈ 5ರಂದು ಹಾಸನದ ಹೂವಿನಹಳ್ಳಿ ಬಳಿ, ರಾಷ್ಟ್ರೀಯ ಹೆದ್ದಾರಿ 375ರಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿತ್ತು. ತನಿಖೆಗಿಳಿದ ಪೊಲೀಸರು, ಮರ್ಡರ್ ಮಿಸ್ಟ್ರಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

36 ವರ್ಷದ ಮಧು ಕೆಲ ವರ್ಷಗಳ ಹಿಂದೆ ಭವ್ಯಾಳನ್ನು ಮದುವೆಯಾಗಿದ್ದ. ಆದ್ರೆ ಕೆಲಸ ಕಾರ್ಯ ಮಾಡದೇ ದಿನಬೆಳಗಾದ್ರೆ ಕಂಠ ಪೂರ್ತಿ ಕುಡಿದು ತಿರುಗುತ್ತಿದ್ದ. ದಿನಕಳೆದಂತೆ ಭವ್ಯಾಳಿಗೆ ಪತಿ ಮೇಲಿನ ಆಸಕ್ತಿ ಕಡಿಮೆಯಾಗಿತ್ತು. ಇದೇ ಸಮಯದಲ್ಲಿ ಆಲೂರಿನ ಆಟೋ ಡ್ರೈವರ್ ಮೋಹನ್ ಎಂಬಾತನ ಪರಿಚಯವಾಗುತ್ತೆ. ಮೊದಲು ಸ್ನೇಹಿತರಂತೆ ಇದ್ದವರು ಬಳಿಕ ಪ್ರೇಮಿಗಳಾಗಿ ಬದಲಾಗಿದ್ರು.

ಆರೋಪಿಗಳಾದ ಭವ್ಯಾ, ಮೋಹನ್

ಸತತ 2 ವರ್ಷದಿಂದ ಪದೇ ಪದೇ ಮೀಟ್ ಮಾಡುತ್ತಾ, ಹೊರಗೆ ಸುತ್ತಾಡ್ತಿದ್ರು. ಭವ್ಯಾ ಕೇಳಿದ್ದನ್ನೆಲ್ಲಾ ಕೊಡಿಸೋದೇ ಮೋಹನ್ ಕೆಲಸವಾಗಿತ್ತು. ಭವ್ಯ ಲವ್ವರ್ ಜೊತೆ ಸುತ್ತಾಡುವುದನ್ನು ಮಧು ಅಕ್ಕ ನೋಡಿದ್ದಾರೆ. ಮನೆಗೆ ತಾಯಿ, ತಮ್ಮನಿಗೆ ಹೇಳಿದ್ರೂ ನಂಬಿರಲಿಲ್ಲ. ಬಳಿಕ ಮಧುಗೆ ನಿಜಾಂಶ ಗೊತ್ತಾಗಿದೆ. ಪತ್ನಿಗೆ ಬುದ್ಧಿ ಹೇಳಿ ಮೋಹನ್ ಜೊತೆ ಓಡಾಡದಂತೆ ಎಚ್ಚರಿಸಿದ್ದ.

ಮೋಹನ್ ಪ್ರೀತಿಯಲ್ಲಿ ಮುಳುಗಿದ್ದ ಭವ್ಯಾ, ಪತಿಯ ಮಾತುಗಳಿಂದ ಕೆರಳಿದ್ಲು. ಪ್ರೇಮಿ ಜೊತೆ ಸೇರಿ ಪತಿಯನ್ನೇ ಮುಗಿಸಲು ಸ್ಕೆಚ್ ಹಾಕಿದ್ಲು. ಅತ್ತೆ ರುಕ್ಮಿಣಿ ಮಗಳ ಮನೆಗೆ ಹೋಗೋದನ್ನೇ ಕಾಯುತ್ತಿದ್ಲು. ಆ ವೇಳೆ ಪತಿ ಮಧು ಮನೆಯಲ್ಲಿ ಒಬ್ಬನೇ ಇದ್ದಾಗ, ಫೋನ್ ಮಾಡಿ ಲವ್ವರ್​ ನನ್ನ ಕರೆಸಿಕೊಂಡಿದ್ದಾಳೆ. ಇಬ್ಬರು ಪುಸಲಾಯಿಸಿ ಮಧುಗೆ ಕಂಠ ಪೂರ್ತಿ ಕುಡಿಸಿದ್ದಾರೆ. ಮೈಮೇಲೆ ಎಚ್ಚರ ಕಳೆದುಕೊಂಡಾಗ ಉಸಿರುಗಟ್ಟಿಸಿ ಕೊಂದು ಹಾಕಿದ್ರು..

ಕೊಲೆಯಾದ ಮಧು

ಯಾರಿಗೂ ಅನುಮಾನ ಬರದಂತೆ ಮಧು ಮೃತದೇಹವನ್ನ, ಆಟೋದಲ್ಲಿ ಹಾಕಿಕೊಂಡು ರಾಷ್ಟ್ರೀಯ ಹೆದ್ದಾರಿಯತ್ತ ಬರ್ತಾರೆ. ಆಕ್ಸಿಡೆಂಟ್ ಆಗಿದೆ ಅಂತಾ ಬಿಂಬಿಸಲು ರಸ್ತೆ ಮಧ್ಯೆ ಎಸೆದು ಮನೆಗೆ ಹೋಗಿದ್ರು. ಬೆಳಗ್ಗೆ ಎದ್ದ ತಕ್ಷಣ ಭವ್ಯ, ನನ್ನ ಗಂಡ ಬಂದಿಲ್ಲ ಅಂತಾ ಗೋಳಾಡೋಕೆ ಶುರು ಮಾಡಿದ್ಲು. ಶವ ಸಿಕ್ಕಿದ ಬಳಿಕವೂ, ಕಣ್ಣೀರಾಕುತ್ತಾ ಡ್ರಾಮಾ ಮಾಡಿದ್ಲು. ಸೊಸೆ ನಡವಳಿಕೆಯಿಂದ ಅನುಮಾನಗೊಂಡ ಅತ್ತೆ, ಹಾಸನ ಗ್ರಾಮಾಂತರ ಠಾಣೆಗೆ ದೂರು ಕೊಡ್ತಾರೆ.

ತನಿಖೆಗಿಳಿದ ಪೊಲೀಸರು ಮೃತ ಮಧು ಮನೆಗೆ ಎಂಟ್ರಿ ಕೊಟ್ಟಿದ್ರು. ಭವ್ಯಾ ಮತ್ತು ಆಕೆಯ ಪ್ರೇಮಿ, ತಾಯಿಯನ್ನು ವಿಚಾರಣೆ ನಡೆಸಿದಾಗ ನಿಜಾಂಶ ಬೆಳಕಿಗೆ ಬಂದಿದೆ. ಸದ್ಯ ಮೂವರನ್ನು ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ.

ಆರೋಪಿ ಭವ್ಯಾ ತಾಯಿ ಜಯಂತಿ

ವೀಕ್ಷಕರೇ… ಮದುವೆಯಾದ ಮೇಲೆ ಮನೆ, ಮಕ್ಕಳು, ಕೆಲಸ ಅಂತಾ ಇರೋದ್ ಬಿಟ್ಟು ಬೇರೆಯವರ ಸಹವಾಸ ಬೇಕಿತ್ತಾ..? ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನ ಕಾಮೆಂಟ್ ಮಾಡಿ ತಿಳಿಸಿ.

- Advertisement -

Latest Posts

Don't Miss