Political News: ರಾಜಕಾರಣಿ ಯೋಗಿಶ್ವರ್ ಅವರ ಪುತ್ರಿ ನಿಶಾ ಯೋಗಿಶ್ವರ್ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಬೇಕು ಎಂದುಕ“ಂಡಿದ್ದರು. ಆದರೆ ಅವರೇ ಹೇಳುವ ಪ್ರಕಾರ, ತನ್ನ ಅಪ್ಪನೇ ತನ್ನ ಸೋಲಿಗೆ ಕಾರಣ. ಅಮ್ಮ, ತಮ್ಮನ ನೋವಿಗೂ ಅವರೇ ಕಾರಣ ಅಂತಾ ಈ ಮುನ್ನ ಆರೋಪಿಸಿದ್ದರು. ಇದೀಗ ನಿಶಾ ಯೋಗಿಶ್ವರ್, ನನ್ನ ಕಷ್ಟದ ಕಾಲ ಮುಗೀತು.. ನನ್ ಟೈಂ ಶುರುವಾಯ್ತು ಎನ್ನುತ್ತಿದ್ದಾರೆ. ಕರ್ನಾಟಕ ಟಿವಿಯ ಜತೆ ನಿಶಾ ಈ ಬಗ್ಗೆ ಮಾತನಾಡಿದ್ದಾರೆ.
ನಿಶಾ ಯೋಗಿಶ್ವರ್ ಹೇಳುವ ಪ್ರಕಾರ, ಈ ಪ್ರಪಂಚವೇ ಮಹಾಭಾರತ ಮತ್ತು ಇಲ್ಲಿ ವಾಸಿಸುವ ಜನರೆಲ್ಲ ಕೌರವರು, ಪಾಂಡವರಿದ್ದ ಹಾಗೆ. ಕೆಲವು ಸಮಯ ನಿಮ್ಮನ್ನು ಕೆಲವು ಪಾತ್ರಗಳನ್ನು ನಿಭಾಯಿಸುವಂತೆ ಮಾಡುತ್ತದೆ ಅನ್ನೋದು ನಿಶಾ ಮಾತು.
ನಿಶಾಗೆ ನಿಮ್ಮ ನೆಚ್ಚಿನ ದೇವರು ಯಾವುದು ಅಂತಾ ಕೇಳಿದಾಗ, ಅವರು ಹೇಳಿದ್ದು, ನಾನು ಎಲ್ಲ ದೇವರನ್ನೂ ನಂಬುತ್ತೇನೆ. ಮುಂಬೈನಲ್ಲಿದ್ದಾಗ, 2014ರಲ್ಲಿ ನನಗೆ ಆರೋಗ್ಯ ಸರಿ ಇರಲಿಲ್ಲ. ಆಗ 1 ದಿನ ನನಗೆ ಬೆಡ್‌ನಿಂದ ಎದ್ದೇಳಲು ಸಹ ಆಗುತ್ತಿದ್ದಿಲ್ಲ. ಆದರೆ ಅದರ ಮರುದಿನ ನನ್ನ ಕನಸಿನಲ್ಲಿ ಗಣೇಶ ಬಂದು ನನ್ನ ಕೈ ಹಿಡಿದು ಎಲೆಯ ಮೇಲೆ ಏನನ್ನೋ ಬರೆಸುತ್ತಿದ್ದ. ಅದ“ಂದು ಉತ್ತಮ ಸೂಚನೆಯಾಗಿತ್ತು. ಈ ರೀತಿಯ ಕನಸುಗಳು ನನಗೆ ಆಗಾಗ ಬೀಳುತ್ತದೆ. ಮತ್ತು ಅದು ಏನನ್ನೋ ಸೂಚಿಸುತ್ತದೆ ಅಂತಾರೆ ನಿಶಾ.
ನನಗೆ ಸರಿಯಾಗಿ ನಿದ್ದೆ ಬಾರದ ಸಮಯದಲ್ಲಿ ನರಸಿಂಹ ದೇವರನ್ನು ಸ್ಮರಿಸಿ, ಮಲಗುತ್ತೇನೆ. ಏಕೆಂದರೆ ನಾನು ನನ್ನನ್ನು ಪ್ರಹ್ಲಾದ್ ಎಂದುಕ“ಂಡಿದ್ದೇನೆ. ಕಷ್ಟದ ಸಮಯದಲ್ಲಿ ಪ್ರಹ್ಲಾದ್‌ನನ್ನು ಕಾಪಾಡಲು, ನರಸಿಂಹ ಕಂಬದಿಂದ ಎದ್ದು ಬಂದಿರುವ ಹಾಗೆ, ದೇವರು ನನ್ನನ್ನು ಕಾಪಾಡಲು ನನ್ನ ಜತೆ ಇದ್ದಾನೆಂದೇ ನಾನು ಭಾವಿಸಿದ್ದೇನೆ ಎಂದು ಹೇಳುತ್ತಾರೆ ನಿಶಾ. ಇನ್ನಷ್ಟು ಕುತೂಹಲಕಾರಿ ಮಾಹಿತಿಗಾಗಿ ವೀಡಿಯೋ ನೋಡಿ.