Friday, November 21, 2025

Latest Posts

ರಂಗಭೂಮಿ ಅಮ್ಮನ ಮಡಿಲು ಸಿನಿಮಾ ದುಃಸ್ವಪ್ನ! : Bheema Priya Podcast

- Advertisement -

Sandalwood: ಸಿನಿಮಾ ಮತ್ತು ರಂಗಭೂಮಿ ಮಧ್ಯದ ಅಂತರದ ಬಗ್ಗೆ ನಟಿ ಪ್ರಿಯಾ ಅವರನ್ನು ಪ್ರಶ್ನಿಸಿದಾಗ, ಅವರು ರಂಗಭೂಮಿ ಅಮ್ಮನ ಮಡಿಲು ಇದ್ದ ಹಾಗೆ. ಆದರೆ ಸಿನಿಮಾ ದುಸ್ವಪ್ನ ಎಂದಿದ್ದಾರೆ. ಹಾಗಾದ್ರೆ ಈ ಅನಿಸಿಕೆ ಹೇಳಿದ್ದೇಕೆ ಅಂತಾ ಅವರೇ ವಿವರಿಸಿದ್ದಾರೆ ನೋಡಿ.

ಸಿನಿಮಾದಲ್ಲಿ ನೀವು ಸ್ಥಿರವಾಗಿ ಇರ್ತೀರಾ ಅಂತಾ ಕೇಳಿದ್ದಕ್ಕೆ ಉತ್ತರಿಸಿರುವ ಪ್ರಿಯಾ, ಖಂಡಿತವಾಗಿಯೂ ನಾನು ಸ್ಥಿರವಾಗಿರುತ್ತೇನೆ ಅಂತಾ ನನಗೆ ಕಾನ್ಫಿಡೆನ್ಸ್ ಇದೆ. ಇದರಲ್ಲಿ ನಾನು ಯಾವ ರೀತಿಯ ಕಥೆಯನ್ನು ಆಯ್ಕೆ ಮಾಡಿಕ“ಳ್ಳುತ್ತೇನೆ ಅನ್ನೋದು ತುಂಬಾ ಮುಖ್ಯವಾಗುತ್ತದೆ. ಆ ಥರಹದ್ದೇ ಪಾತ್ರ ನನಗೆ ಸಿಗಲಿ ಅಂತಾನೇ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಅಂತಾರೆ ಪ್ರಿಯಾ.

ಸಿನಿಮಾ ಮತ್ತು ರಂಗಭೂಮಿ ಮಧ್ಯದ ಅಂತರದ ಬಗ್ಗೆ ನಟಿ ಪ್ರಿಯಾ ಅವರನ್ನು ಪ್ರಶ್ನಿಸಿದಾಗ, ಅವರು ರಂಗಭೂಮಿ ಅಮ್ಮನ ಮಡಿಲು ಇದ್ದ ಹಾಗೆ. ಆದರೆ ಸಿನಿಮಾ ದುಸ್ವಪ್ನ ಎಂದಿದ್ದಾರೆ. ಏಕೆಂದರೆ ರಂಗಭೂಮಿಯಲ್ಲಿ ಹೆಚ್ಚು ಟೆನ್ಶನ್ ಇರುವುದಿಲ್ಲ. ನಿರಾಳ, ನೆಮ್ಮದಿ ಸಿಗುವ ಜಾಗ. ಅಲ್ಲಿನ ಹಣಕಾಸಿನ ತಲೆನೋವು ಇರಲ್ಲ. ಗೆಲುವು-ಸೋಲಿನ ತಲೆನೋವು ಇರಲ್ಲ. ಕಲಿಕೆ ಇರುತ್ತದೆ. ಓಟ ಇರುವುದಿಲ್ಲ. ಮಡಿಕೆ ಮಾಡುವ ಮುನ್ನ ಮಣ್ಣನ್ನು ಹದ ಮಾಡುವ ಸ್ಥಳ ರಂಗಭೂಮಿ.

ಇನ್ನು ಸಿನಿಮಾ ಅಂದ್ರೆ ದುಃಸ್ವಪ್ನ. ನಟಿಸಿದ ಬಳಿಕ ಪೇಮೆಂಟ್ ಬಗ್ಗೆ ತಲೆನೋವಿರುತ್ತದೆ. ಸಿನಿಮಾದಲ್ಲಿ ನನ್ನ ಪಾತ್ರ ಗೆಲ್ಲುತ್ತೋ ಇಲ್ಲವೋ..? ಅನ್ನೋ ರೀತಿ ಇರುತ್ತದೆ. ತೃಪ್ತಿಯಾಗಿ ಕೆಲಸ ಮಾಡಿದರೂ ಬರುವ ಫಲಿತಾಂಶಕ್ಕಾಗಿ ಕಾಯುವಿಕೆಯ ದಿನಗಳಲ್ಲೇ ನಮ್ಮ ಆಯುಷ್ಯ ಮುಗಿದಿರುತ್ತದೆ. ಅದರಲ್ಲೇ ನಾನು ದುಡಿಯುತ್ತಿದ್ದೇನೆ. ಆದರೆ ಅಲ್ಲಿ ಸ್ಪರ್ಧೆ ಇದೆ ಎಂದು ಪ್ರಿಯಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇವರ ತಂಗಿ ದುಬೈನಲ್ಲಿ ಉತ್ತಮ ಸಂಬಳಕ್ಕೆ ಕೆಲಸ ಮಾಡುತ್ತಿದ್ದ ಕಾರಣ, ಇವರನ್ನು ಕಂಪೇರ್ ಮಾಡಿ ಮಾತನಾಡುತ್ತಿದ್ದರು. ರಂಗಭೂಮಿಯಲ್ಲಿ ದುಡಿಮೆ ಇಲ್ಲದ ಕಾರಣ, ಸಂಬಂಧಿಕರು ನಿರ್ಲಕ್ಷ್ಯದಿಂದ ನೋಡುತ್ತಿದ್ದರು. ಆದರೆ ಈಗ ಪ್ರಿಯಾ ಅವರು ಸಿನಿಮಾ ರಂಗದ ಮುಂದಿನ ಮಾಲಾಶ್ರೀ ರೇಂಜಿಗೆ ಬೆಳೆದಿದ್ದಾರೆ. ಅವರ ಸಿನಿ ಜರ್ನಿಯ ಇನ್ನೂ ಹೆಚ್ಚಿನ ಕುತೂಹಲಕಾರಿ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss