Friday, August 29, 2025

Latest Posts

ಅ.17ರಂದು ತೀರ್ಥೋದ್ಭವ…!

- Advertisement -

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತಲಕಾವೇರಿಯಲ್ಲಿ ಈ ಬಾರಿ ಅಕ್ಟೋಬರ್ 17 ರಂದು ತೀರ್ಥೋದ್ಭವ ನಡೆಯಲಿದೆ. ಮಧ್ಯಾಹ್ನ 1.11ರ ಮಕರ ಲಗ್ನದಲ್ಲಿ ತೀರ್ಥೋದ್ಭವ ಆಗಲಿದ್ದು, ಭಾಗಮಂಡಲದ ಕೊಡೆ ಪಂಚಾಂಗ ಭಟ್ಟರು ತೀರ್ಥೋದ್ಭವದ ಮೂಹೂರ್ತ ನಿಗದಿಪಡಿಸಿದ್ದಾರೆ.

ಈಗಾಗಲೇ ಕೊಡಗು ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದ್ದು, ತೀರ್ಥರೂಪಿಣಿಯಾಗಿ ಕಾವೇರಿತಾಯಿ ಭಕ್ತರಿಗೆ ದರ್ಶನ ನೀಡಲಿದ್ದಾರೆ. ತೀರ್ಥೋದ್ಬದ ವೇಳೆ ಯಾರೂ ಹೊಂಡದಲ್ಲಿ ಸ್ನಾನವನ್ನು ಮಾಡುವಂತಿಲ್ಲ, ಕೊರೊನಾ ಹಿನ್ನಲೆ ಅನ್ನ ಪ್ರಸಾದವನ್ನು ಕೂಡಾ ನಿಷೇಧಿಸಲಾಗಿದೆ ಎಂದು ಅರ್ಚಕರು ತಿಳಿಸಿದ್ದಾರೆ.

ಹಿಂದಿನ ವರ್ಷವು ಕೂಡಾ ಕೊರೊನಾ ಇದ್ದ ಕಾರಣ ಯಾರನ್ನು ಬರಮಾಡಿಕೊಂಡಿರಲಿಲ್ಲ. ಆಚರಣೆಯ ವೇಳೆ ಜಿಲ್ಲಾಡಳಿತ ಅರ್ಚಕರು, ದೇವಾಲಯ ಸಮಿತಿ ಮುಖಂಡರು ಮತ್ತು ಸ್ವಯಂ ಸೇವಕರನ್ನು  ಹೊರತುಪಡಿಸಿ ಉಳಿದ ಯಾರಿಗೂ ತೀರ್ಥೋದ್ಬವದ ವೇಳೆ ಪ್ರವೇಶವಿಲ್ಲ. 72 ಗಂಟೆಯೊಳಗೆ ಕೋವಿಡ್ ಟೆಸ್ಟ್ ಮಾಡಿಸಿ ನೆಗೆಟಿವ್ ವರದಿ ಇದ್ದರೆ ಮಾತ್ರ ಈ ಸಂದರ್ಭದಲ್ಲಿ ಕೆಲಸ ಮಾಡಲು ಅನುಮತಿಯನ್ನು ಕೊಡಲಾಗುವುದು ಎಂದು ತಿಳಿಸಿದ್ದಾರೆ.

- Advertisement -

Latest Posts

Don't Miss