Hubli News: ಹುಬ್ಬಳ್ಳಿಯ ಗಬ್ಬೂರು ಬಳಿಯ ದಾದಾವಾಡಿ ಶ್ರೀ ಆದಿನಾಥ ಜೈನ ಮಂದಿರದಲ್ಲಿ ಮತ್ತೆ ಕಳ್ಳತನ ನಡೆದಿದೆ..! ಮೂರು ಮುಸುಕುಧಾರಿ ಕಳ್ಳರು ಮಂದಿರದ ಬಾಗಿಲು ಮುರಿದು ಒಳನುಗ್ಗಿ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ..! ಕಳವಾದ ವಸ್ತುಗಳ ಮೌಲ್ಯ ಸುಮಾರು 50 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ..! ಕಳ್ಳತನದ ವೇಳೆ ದೇವರ ಮೂರ್ತಿಗೂ ಹಾನಿಯಾಗಿದೆ ಎನ್ನಲಾಗಿದ್ದು, ಪದೇ ಪದೇ ಕಳ್ಳತನ ನಡೆಯುತ್ತಿರುವುದು ಭಕ್ತರಲ್ಲಿ ಆತಂಕ ಮೂಡಿಸಿದೆ..! ಈ ಕುರಿತು ಉದ್ಯಮಿ ಹಾಗೂ ಪಾಲಿಕೆ ಸದಸ್ಯ ನಿರಂಜನ್ ಹಿರೇಮಠ್ ಮಾತನಾಡಿದ್ದಾರೆ..!
ಹುಬ್ಬಳ್ಳಿ ಗಬ್ಬೂರು ಬಳಿಯ ದಾದಾವಾಡಿ ಶ್ರೀ ಆದಿನಾಥ ಜೈನ ಮಂದಿರ..!
ಭಕ್ತರ ಆರಾಧನಾ ಕೇಂದ್ರವಾಗಿರುವ ಈ ಮಂದಿರ ಇದೀಗ ಕಳ್ಳರ ಕೃತ್ಯದಿಂದ ಸುದ್ದಿಯಾಗಿದೆ..! ರಾತ್ರಿ ವೇಳೆ ಮೂರು ಮುಸುಕುಧಾರಿ ಕಳ್ಳರು ರಾಡ್ ಬಳಸಿ ಮಂದಿರದ ಬಾಗಿಲು ಮುರಿದು ಒಳನುಗ್ಗಿದ್ದಾರೆ ಎನ್ನಲಾಗಿದೆ..! ಬಳಿಕ ದೇವರ ಮೂರ್ತಿಯ ಮೇಲಿದ್ದ ಕಿರೀಟ, ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ..!
ಕಳುವಾಗಿರುವ ವಸ್ತುಗಳ ಮೌಲ್ಯ ಸುಮಾರು 50 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ..! ಕಳ್ಳತನದ ವೇಳೆ ದೇವರ ಮೂರ್ತಿಗೂ ಹಾನಿಯಾಗಿರುವುದು ತಿಳಿದುಬಂದಿದೆ..! ಈ ಘಟನೆಯಿಂದ ಭಕ್ತರಲ್ಲಿ ತೀವ್ರ ಬೇಸರ ಹಾಗೂ ಆತಂಕ ಮನೆಮಾಡಿದೆ..!
ಇನ್ನು ಇದೇ ಮಂದಿರದಲ್ಲಿ ಕಳ್ಳತನ ನಡೆದಿರುವುದು ಇದೇ ಮೊದಲೇನಲ್ಲ..! 2025ರಲ್ಲೂ ಇದೇ ಮಂದಿರದಲ್ಲಿ ದರೋಡೆ ನಡೆದಿತ್ತು ಎನ್ನಲಾಗಿದೆ..! ಹಿಂದಿನ ಪ್ರಕರಣದಲ್ಲಿ ಗುಜರಾತ್ ಮೂಲದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು ಎಂಬ ಮಾಹಿತಿ ಇದೆ..! ಆದರೆ ಹಿಂದಿನ ಘಟನೆಯ ಬಳಿಕವೂ ಮತ್ತೆ ಕಳ್ಳತನ ನಡೆದಿರುವುದು ಮಂದಿರದ ಭದ್ರತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ..!
ಮಂದಿರದಲ್ಲಿ ಸಮರ್ಪಕ ಭದ್ರತಾ ಸಿಬ್ಬಂದಿ ಇದ್ದಾರಾ..? ರಾತ್ರಿ ವೇಳೆ ಕಾವಲು ವ್ಯವಸ್ಥೆ ಹೇಗಿದೆ..? ಬೆಲೆಬಾಳುವ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆಯಾ..? ಎಂಬ ಪ್ರಶ್ನೆಗಳು ಇದೀಗ ಎದುರಾಗಿವೆ..! ಧಾರ್ಮಿಕ ಕೇಂದ್ರಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ..!
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಗಳು ಸೇರಿದಂತೆ ಲಭ್ಯವಿರುವ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ..! ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ..!
ಒಟ್ಟಿನಲ್ಲಿ, ಗಬ್ಬೂರು ಜೈನ ಮಂದಿರದಲ್ಲಿ ಮತ್ತೆ ಕಳ್ಳತನ ನಡೆದಿರುವುದು ಭಕ್ತರಲ್ಲಿ ಆತಂಕ ಮೂಡಿಸಿದೆ..! ಹಿಂದಿನ ಪ್ರಕರಣದ ಬಳಿಕವೂ ಇಂತಹ ಘಟನೆ ಮರುಕಳಿಸಿರುವ ಹಿನ್ನೆಲೆಯಲ್ಲಿ, ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ಕಳವಾದ ವಸ್ತುಗಳನ್ನು ವಶಪಡಿಸಿಕೊಳ್ಳುವುದರ ಜೊತೆಗೆ ಮಂದಿರದ ಭದ್ರತೆಯನ್ನು ಬಲಪಡಿಸಬೇಕಿದೆ..!
ಕ್ಯಾಮೆರ ಪರ್ಸನ ಹೇಮಂತ್ ಜೊತೆ ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ




