Saturday, July 5, 2025

Latest Posts

ಲಾಂಗು-ಮಚ್ಚು ಹಿಡಿದು ಬಂದ ಕಳ್ಳರ ಗ್ಯಾಂಗ್! ಚಿನ್ನ, ನಗದು ಲೂಟಿ

- Advertisement -

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕುಗಳಲ್ಲಿ ಮತ್ತೆ ಮುಸುಕುದಾರಿ ಕಳ್ಳರ ದಾಳಿಯಿಂದ ಜನತೆ ಆತಂಕದಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಈ ಕಳ್ಳರ ಗ್ಯಾಂಗ್ ಚಟುವಟಿಕೆಗಳು ಹೆಚ್ಚಾಗಿದ್ದು, ಅದರಲ್ಲೂ ಗ್ರಾಮೀಣ ಭಾಗದಲ್ಲಿ ಲಾಂಗು, ಮಚ್ಚು ಹಿಡಿದು ಗ್ರಾಮಕ್ಕೆ ಎಂಟ್ರಿ ಕೊಡುತ್ತಿರುವ ಗ್ಯಾಂಗ್ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿರೋದ್ರಿಂದ ಜನರ ನಿದ್ದೆಗೆಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇತ್ತೀಚೆಗಷ್ಟೇ ಶಿರಹಟ್ಟಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಮುಸುಕುದಾರಿ ಕಳ್ಳರ ಗ್ಯಾಂಗ್ ಕೃಷ್ಣ ಲಮಾಣಿ ಅವರ ಮನೆಯಲ್ಲಿ ಕಳ್ಳತನ ನಡೆಸಿದೆ. ಈ ಕಳ್ಳರು ಸುಮಾರು 40 ಗ್ರಾಂ ಚಿನ್ನಾಭರಣ ಮತ್ತು ಆರು ಸಾವಿರ ನಗದು ಕದ್ದೊಯ್ದಿದ್ದಾರೆ. ಇಷ್ಟೇ ಅಲ್ಲ, ಬೆಳ್ಳಟ್ಟಿ ಗ್ರಾಮದಲ್ಲೂ ರಾಜಣ್ಣ ಗೋಪಾಳಿ ಮತ್ತು ಮಂಗೇಶಪ್ಪ ಲಮಾಣಿ ಅವರ ಮನೆಗಳ ಮೇಲೂ ದಾಳಿ ನಡೆದಿದೆ.

ಗ್ರಾಮ ಒನ್ ಕೇಂದ್ರವನ್ನೂ ನಿಗೇಟು ಮಾಡಿರುವ ಈ ಕಳ್ಳರ ಧೈರ್ಯ ಜನರನ್ನ ಬೆಚ್ಚಿಬೀಳಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ಜನಜೀವನ ಹಾಳಾಗದಂತೆ ನೋಡಿಕೊಳ್ಳಲು ಪೊಲೀಸರು ತಕ್ಷಣವೇ ತಕ್ಕ ಕ್ರಮ ಕೈಗೊಂಡು ಮುಸುಕುದಾರಿ ಕಳ್ಳರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.

ಈ ಹಿಂದೆ ಗದಗ ಬೆಟಗೇರಿ ಅವಳಿ ನಗರದಲ್ಲಿ ಕೂಡ ಇಂತಹ ಮುಸುಕುದಾರಿ ಕಳ್ಳರ ಹಾವಳಿ ಕಂಡುಬಂದಿತ್ತು. ಆಗ ಪೊಲೀಸರು ತಕ್ಷಣ ಕ್ರಮ ತೆಗೆದುಕೊಂಡು ಕೆಲವು ಆರೋಪಿಗಳನ್ನು ಬಂಧಿಸಿದ್ದರು. ಆದರೆ ಇದೀಗ ಹಳ್ಳಿಹಳ್ಳಿಯಲ್ಲೂ ಈ ಕಳ್ಳರ ಕಣ್ಗಾವಲು ಶುರುವಾಗಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು, ಸರ್ಕಾರ ಮತ್ತು ಪೊಲೀಸ್ ಇಲಾಖೆ ಶೀಘ್ರದಲ್ಲಿ ಕ್ರಮ ಕೈಗೊಂಡು ಸಾರ್ವಜನಿಕರಲ್ಲಿ ನಂಬಿಕೆ ಹೆಚ್ಚಿಸಬೇಕಾಗಿದೆ.

ಇನ್ನಷ್ಟು ಸಮಯ ಈ ಮುಸುಕುದಾರಿ ಗ್ಯಾಂಗ್ ಅಧಿಕಾರಿಗಳ ಕೈಗೆ ಬಿದ್ದರೆ ಮಾತ್ರ, ಗ್ರಾಮೀಣ ಜನತೆ ನೆಮ್ಮದಿಯಿಂದ ಜೀವನ ನಡೆಸುವ ಅವಕಾಶ ಸಿಗಲಿದೆ.

ವರದಿ : ಲಾವಣ್ಯಾ ಅನಿಗೋಳ

- Advertisement -

Latest Posts

Don't Miss