Monday, May 11, 2026

Gold Theft

ದೋಚಿದ್ರು… ಬೆಂಕಿ ಹಚ್ಚಿದ್ರು! ಕೋಲಾರದಲ್ಲಿ ಕಳ್ಳರ ವಿಕೃತಿ.

ಕೋಲಾರದಲ್ಲಿ ಮನೆಗೆ ನುಗ್ಗಿದ ಕಳ್ಳರ ಗುಂಪು ನಗದು ಮತ್ತು ಚಿನ್ನಾಭರಣ ದೋಚಿದ ಬಳಿಕ ಮನೆಗೆ ಬೆಂಕಿ ಹಚ್ಚಿ ಪರಾರಿಯಾದ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಮಲ್ಲಸಂದ್ರದಲ್ಲಿ ಭೀಕರ ಕಳ್ಳತನ ಮಾಡಿ ಬೆಂಕಿ ಹಚ್ಚಿದ್ದಾರೆ. ಮನೆಗೆ ನುಗ್ಗಿದ ಕಳ್ಳರು ನಗದು ಹಣ ಹಾಗೂ ಚಿನ್ನಾಭರಣ ದೋಚಿದ ಬಳಿಕ, ಮನೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆಯು ರಾತ್ರಿ ವೇಳೆಯಲ್ಲಿ...

ಕಳ್ಳರ ಹೊಸ ಹಾಟ್‌ ಸ್ಪಾಟ್‌ ? ಮಹಿಳೆಯರೇ ಇವರ ಟಾರ್ಗೇಟ್!

ಹುಬ್ಬಳ್ಳಿಯಲ್ಲಿ ಸಾರಿಗೆ ಬಸ್ ಗಳೇ ಈಗ ಕಳ್ಳರ ʼಟಾರ್ಗೆಟ್ ಜೋನ್ʼ ಆಗಿದೆ. KSRTC ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ತುಮಕೂರಿನ ಮಹಿಳೆಯೊಬ್ಬರಿಗೆ ದೊಡ್ಡ ಶಾಕ್ ಎದುರಾಗಿದೆ. ತುಮಕೂರು ವಾಲ್ಮೀಕಿ ನಗರದ ಗೀತಾ ಅವರು ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣದಿಂದ ಹೊಸೂರು ಬಸ್ ಟರ್ಮಿನಲ್ ಕಡೆ KSRTC ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಅವರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನ ಮತ್ತು...

ಸಂಬಂಧಿಕರ ಚಿನ್ನವೇ ಟಾರ್ಗೆಟ್: ಕೇರ್ ಟೇಕರ್ ಚಾಂದಿನಿ ಅರೆಸ್ಟ್!

ಬೆಂಗಳೂರಿನ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮನಹಳ್ಳಿ ಪ್ರದೇಶದಲ್ಲಿ, ವೃದ್ಧೆಯ ಆರೈಕೆಗೆ ನೇಮಕಗೊಂಡಿದ್ದ ಕೇರ್ ಟೇಕರ್ ಒಬ್ಬಳು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿದ ಘಟನೆ ಬೆಳಕಿಗೆ ಬಂದಿದೆ. ಸುಮಾರು ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿ ಬಿಹಾರ ಮೂಲದ ಚಾಂದಿನಿ ಬಂಧಿತೆಯಾಗಿದ್ದಾಳೆ. ಕಳೆದ ಎರಡು ವರ್ಷಗಳಿಂದ ವೃದ್ಧೆಯ ಕೇರ್ ಟೇಕರ್ ಆಗಿ ಕೆಲಸ...

ಡೇಟಿಂಗ್ ಆ್ಯಪ್ ಡೇಂಜರ್, ಲಾಡ್ಜ್‌ನಲ್ಲಿ ‘ಮಹಾ’ ಕುತಂತ್ರ!

ಹುಡ್ಗಿರ್ ಜೊತೆ ಡೇಟಿಂಗ್ ಮಾಡ್ತೀರಾ? ಡೇಟಿಂಗ್ ಆ್ಯಪ್‌ನಲ್ಲಿ ಚಾಟ್ ಮಾಡ್ತೀರಾ? ಹಾಗಾದ್ರೆ ಹುಷಾರ್. ಯಾಕಂದ್ರೆ ಇಲ್ಲೊಬ್ಬ ಯುವತಿ ಬೆಂಗಳೂರಿನಲ್ಲಿ ಡೇಟಿಂಗ್ ಆ್ಯಪ್‌ ಮೂಲಕ ಸ್ನೇಹ ಬೆಳೆಸಿಕೊಂಡ ಯುವಕನಿಗೆ ಲಾಡ್ಜ್‌ನಲ್ಲಿ ಬಲೆ ಬೀಸಿದ್ದಾಳೆ. 7 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ ಯುವತಿ ಬಂಧಿತೆಯಾಗಿರುವ ಪ್ರಕರಣ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಪೀಣ್ಯದ ನಾಗಸಂದ್ರದಲ್ಲಿರುವ...

ಶಬರಿಮಲೆ ಕಳುವಾದ ಚಿನ್ನಕ್ಕೂ ಬಳ್ಳಾರಿಗೂ ಇರೋ ಲಿಂಕ್ ಏನು?

ಶಬರಿಮಲೆ ಅಯ್ಯಪ್ಪ ದೇವಾಲಯದ ಚಿನ್ನ ಕಳ್ಳತನ ಪ್ರಕರಣದ ತನಿಖೆಯನ್ನ ಕೇರಳ SIT ವೇಗವಾಗಿ ಮುಂದುವರೆಸುತ್ತಿದೆ. ಸುಮಾರು 4 ಕಿಲೋ ಚಿನ್ನ ಕಳುವಾದ ಪ್ರಕರಣದಲ್ಲಿ, ತನಿಖಾಧಿಕಾರಿಗಳು ಬಳ್ಳಾರಿಯ ರೊದ್ದಂ ಜ್ಯುವೆಲ್ಲರಿ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲಿ ಚಿನ್ನದ ಅಂಗಡಿ ಮಾಲೀಕನು, ತಾನು ಆ ಚಿನ್ನವನ್ನು ಖರೀದಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ತನಿಖೆಯ ಹಿನ್ನಲೆಯಲ್ಲಿ, ಎಸ್‌ಐಟಿ ತಂಡವು ಚಿನ್ನ ಮಾರಾಟ ಮಾಡಿದ...

ಚಡಚಣ ಬ್ಯಾಂಕ್ ದರೋಡೆ ಪ್ರಕರಣ, ಪೊಲೀಸರ ಜಾಲಕ್ಕೆ ಸಿಕ್ಕಿ ಬಿದ್ದ ದರೋಡೆಕೋರರು!

ವಿಜಯಪುರ ಜಿಲ್ಲೆಯ ಭೀಮಾತೀರದ ಚಡಚಣ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಸೆಪ್ಟೆಂಬರ್ 16ರಂದು ನಡೆದಿದ್ದ ಬಹುಚರ್ಚಿತ ದರೋಡೆ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣ ಸಂಬಂಧ ಬಿಹಾರ ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ 9 ಕೆ.ಜಿ. ಚಿನ್ನ ಹಾಗೂ ₹86 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಬಿಹಾರದ 22 ವರ್ಷದ ರಾಕೇಶಕುಮಾರ್ ಸಹಾನಿ,...

ಅಯ್ಯಪ್ಪ ಸ್ವಾಮಿ ದೇವಸ್ಥಾನ ಕಳವು ಪ್ರಕರಣಕ್ಕೆ‌ ಬಿಗ್ ಟ್ವಿಸ್ಟ್!‌

ಶಬರಿಮಲೆ ಅಯ್ಯಪ್ಪ ದೇವಾಸ್ಥಾನದ ಚಿನ್ನದ ತಟ್ಟೆಗಳ ಕಳ್ಳತನ ಪ್ರಕರಣಕ್ಕೆ ಹೊಸ ಬೆಳಕು ಬಂದಿದೆ. ದೇವಸ್ಥಾನಕ್ಕೆ ನೀಡಿರುವ ಚಿನ್ನದ ತಟ್ಟೆಗಳನ್ನು ಪ್ರಾಯೋಜಕರು ತಮ್ಮ ಕುಟುಂಬದ ಮದುವೆ ಉದ್ದೇಶಕ್ಕಾಗಿ ಬಳಸಲು ಅನುಮತಿ ಕೇಳಿದ್ದರು ಎಂಬುದು ಇದೀಗ ಮುಂಗಡ ದಾಖಲೆಗಳಿಂದ ಹೊರಬಂದಿದೆ. ಪ್ರಾಯೋಜಕರಾದ ಉನ್ನಿಕೃಷ್ಣನ್ ಪೊಟ್ಟಿ ಡಿಸೆಂಬರ್ 9, 2019ರಂದು ತಿರುವಾಂಕೂರು ದೇವಸ್ವಂ ಮಂಡಳಿಗೆ ಪತ್ರ ಬರೆದು, ದೇವಾಲಯದ ಗರ್ಭಗುಡಿಯಲ್ಲಿ...

ಮಂಡ್ಯದಲ್ಲಿ ದರೋಡೆಕೋರರು ಅಡ್ಡ ಬಂದವನನ್ನೇ ಹತ್ಯೆ ಮಾಡಿದ್ರು!

ಜ್ಯುವೆಲರ್ಸ್ ಅಂಗಡಿಯಲ್ಲಿ ಕಳ್ಳತನ ಮಾಡಲು ಆಗಮಿಸಿದ್ದ ದರೋಡೆಕೋರರು ಚಿನ್ನಾಭರಣ ದೋಚಿ ಬಳಿಕ ವ್ಯಕ್ತಿಯೋರ್ವನನ್ನು ಕೊಲೆ ಮಾಡಿರುವ ಧಾರುಣ ಘಟನೆ ನಡೆದಿದೆ. ಸಕ್ಕರೆನಾಡು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ 72 ವರ್ಷದ ಮಾದಪ್ಪ ಮೃತಪಟ್ಟಿರುವ ವ್ಯಕ್ತಿಯಾಗಿದ್ದಾನೆ. ಕಿರುಗಾವಲು ಗ್ರಾಮದ ಮಹಾಲಕ್ಷ್ಮಿ ಜ್ಯೂವೆಲರ್ಸ್ ಆಂಡ್ ಬ್ಯಾಂಕರ್ಸ್ ನಲ್ಲಿ ಶನಿವಾರ ತಡರಾತ್ರಿ ದರೋಡೆ ನಡೆಸಲು ಸಂಚು ರೂಪಿಸಿದ್ದಾರೆ....

ಲಾಂಗು-ಮಚ್ಚು ಹಿಡಿದು ಬಂದ ಕಳ್ಳರ ಗ್ಯಾಂಗ್! ಚಿನ್ನ, ನಗದು ಲೂಟಿ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕುಗಳಲ್ಲಿ ಮತ್ತೆ ಮುಸುಕುದಾರಿ ಕಳ್ಳರ ದಾಳಿಯಿಂದ ಜನತೆ ಆತಂಕದಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಈ ಕಳ್ಳರ ಗ್ಯಾಂಗ್ ಚಟುವಟಿಕೆಗಳು ಹೆಚ್ಚಾಗಿದ್ದು, ಅದರಲ್ಲೂ ಗ್ರಾಮೀಣ ಭಾಗದಲ್ಲಿ ಲಾಂಗು, ಮಚ್ಚು ಹಿಡಿದು ಗ್ರಾಮಕ್ಕೆ ಎಂಟ್ರಿ ಕೊಡುತ್ತಿರುವ ಗ್ಯಾಂಗ್ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿರೋದ್ರಿಂದ ಜನರ ನಿದ್ದೆಗೆಡಿಸುವ ಪರಿಸ್ಥಿತಿ...

ಚಾಲಾಕಿ ಅಂತರಾಜ್ಯ ಕಳ್ಳನನ್ನು ಲಾಕ್‌ ಮಾಡಿ ಜೈಲಿಗಟ್ಟಿದ ಹುಬ್ಬಳ್ಳಿ ಶಹರ ಠಾಣೆ ಪೊಲೀಸರು

Hubballi News: ಹುಬ್ಬಳ್ಳಿ: ಹುಬ್ಬಳ್ಳಿಯ ಕೋಯಿನ್ ರೋಡ್ ಮಲಬಾರ್ ಗೋಲ್ಡ್ ಅಂಗಡಿಯಲ್ಲಿ ತನ್ವೀರ್‌ ಪಾಷಾ ಎಂಬಾತ ಚಿನ್ನನದಂಗಡಿಯಲ್ಲಿ ಕಳ್ಳತನ ಮಾಡಿದ ಘಟನೆ ನಡೆದಿದೆ. ಗ್ರಾಹಕರ ಸೋಗಿನಲ್ಲಿ ಬಂದು, ಅಂಗಡಿಯ ಸೇಲ್ಸಮನ್‌ ಗಮನ ಬೇರೆ ಕಡೆ ಸೆಳೆದು, 1 ಲಕ್ಷ ರೂ ಮೌಲ್ಯದ 14.21 ಗ್ರಾಂ ತೂಕದ ಬಂಗಾರದ ಉಂಗುರವನ್ನು ಕಳ್ಳತನ ಮಾಡಿ ಎಸ್ಕೆಪ್ ಆಗಿದ್ದ. ಇನ್ನು...
- Advertisement -spot_img

Latest News

Political News: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಸಚಿವ ಡಿ.ಸುಧಾಕರ್(65) ಚಿಕಿತ್ಸೆ ಫಲಿಸದೇ ನಿಧನ

Political News: ಡಿ.ಸುಧಾಕರ್(65) ಕಳೆದ 1 ತಿಂಗಳನಿಂದ ಅನಾರೋಗ್ಯದಿಂದ ಬಳಲಿ ಆಸ್ಪತ್ರೆ ಸೇರಿದ್ದರು. ಮೊಣಕಾಲು ನೋವು ಎಂದು ಆಸ್ಪತ್ರೆ ಸೇರಿದ್ದು, ಇನ್‌ಫೆಕ್ಷನ್‌ ಆಗಿ ಐಸಿಯುನಲ್ಲಿದ್ದರು. ಕೆಲ...
- Advertisement -spot_img