ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿ ಆವರಣದಲ್ಲೇ ನಡೆದಿದೆ ಎಂದು ನಂಬಲು ಕಷ್ಟವಾಗುವಂತಹ ಘಟನೆ ಒಂದೊಂದು ಬೆಳಕಿಗೆ ಬಂದಿದೆ. ಹಣವಿದ್ದ ಬ್ಯಾಗ್ ಕಳುವಾದ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಯೇ ಆರೋಪಿ ಎಂಬ ಸುದ್ದಿ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.
ಮಾಹಿತಿಯ ಪ್ರಕಾರ, ಕಮೀಷನರ್ ಕಚೇರಿಯ ಆವರಣದಲ್ಲಿದ್ದ ಹಣವಿರುವ ಬ್ಯಾಗ್ ಕಳುವಾದ ಹಿನ್ನೆಲೆಯಲ್ಲಿ ಅವಕಾಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ಗಂಭೀರ ಅನುಮಾನ ವ್ಯಕ್ತವಾಗಿದೆ.
ಈ ಪ್ರಕರಣದ ಬಗ್ಗೆ ಪೊಲೀಸ್ ಅಧಿಕಾರಿ ಉಮೇಶ್ ಕುಮಾರ್ ಅವರು ದೂರು ನೀಡಿದ್ದು, ತಮ್ಮ ಹಣವಿದ್ದ ಬ್ಯಾಗ್ ಅನ್ನು ಪೊಲೀಸ್ ಸಿಬ್ಬಂದಿ ಜಬೀವುಲ್ಲಾ ಕದ್ದಿರುವುದಾಗಿ ಸ್ಪಷ್ಟವಾಗಿ ಆರೋಪಿಸಿದ್ದಾರೆ. ಉಮೇಶ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ, ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಜಬೀವುಲ್ಲಾ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪೊಲೀಸ್ ಇಲಾಖೆಯ ಆವರಣದಲ್ಲೇ ಅಧಿಕಾರಿಯೊಬ್ಬರ ಹಣ ಕಳುವಾಗಿರುವುದು ಹಾಗೂ ಆರೋಪಿ ಪೊಲೀಸ್ ಸಿಬ್ಬಂದಿಯೇ ಆಗಿರುವುದು ಇಲಾಖೆ ಮೇಲೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಪ್ರಕರಣದ ತನಿಖೆ ಈಗ ವೇಗವಾಗಿ ಮುಂದುವರಿಯುತ್ತಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ



