Wednesday, December 3, 2025

Latest Posts

ಶಾಲೆಯಲ್ಲಿ ಕನಿಷ್ಠ ಶೌಚಾಲಯ ಒದಗಿಸಲೂ ಆಗದ ನಾಚಿಕೆಗೇಡಿನ ಪರಿಸ್ಥಿತಿಯೇ ಇವರ ಸಾಧನೆ: ವಿಜಯೇಂದ್ರ

- Advertisement -

Political News: ರಾಜ್ಯದಲ್ಲಿ ಸದ್ಯ ಸಿಎಂ ಯಾರಾಗ್ತಾರೆ ಅನ್ನೋ ಕುತೂಹಲ ಮೆನೆ ಮಾಡಿದೆ. ಅದೇ ರೀತಿ ದಿನ ಬೆಳಗಾದ್ರೆ ಬ್ರೇಕ್‌ಫಾಸ್ಟ್ ಮೀಟಿಂಗ್‌ದೇ ಸುದ್ದಿ. ಆದರೆ ಈ ಗದ್ದಲದ ನಡುವೆ ರಾಜ್ಯದಲ್ಲಿ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಯಾರೂ ಮಾತನಾಡದಿರುವುದೇ ಬೇಸರ ಅಂತಾ ಬಿಜೆಪಿ ನಾಯಕರು ದಿನೇ ದಿನೇ ನೆನಪಿಸಿಕ“ಡುತ್ತಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದಿದ್ದು, ಗುಣಮಟ್ಟದ ಶಿ7ಣ ನೀಡಲು ಸಾಧ್ಯವೇ ಅಂತಾ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಕಾರಣವೇನೆಂದರೆ, ಸರ್ಕಾರಿ ಶಾಲೆಯ“ಂದರಲ್ಲಿ ಕೇವಲ 4 ಶಿಕ್ಷರು ಮಾತ್ರವಿದ್ದು, ಅಲ್ಲಿನ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆಯಾಗುತ್ತಿದೆ. ಈ ಕಾರಣಕ್ಕೆ ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುರ್ಚಿ ಭಾಗ್ಯದ ಹಿಂದೆ ಬಿದ್ದಿರುವ ಈ ಜನವಿರೋಧಿ, ರೈತವಿರೋಧಿ ಕಾಂಗ್ರೆಸ್ ಸರ್ಕಾರ, ಆಡಳಿತದ ಕಡೆಯಾಗಲಿ, ಜನರ ಸಂಕಷ್ಟದ ಕಡೆಯಾಗಲಿ ನೋಡುತ್ತಲೇ ಇಲ್ಲ! ಅಭಿವೃದ್ಧಿ ದೂರದ ಮಾತು, ಇರುವುದನ್ನು ಉಳಿಸಿಕೊಳ್ಳುವುದೂ ಇವರಿಗೆ ಸಾಧ್ಯವಾಗುತ್ತಿಲ್ಲ. ಪ್ರತಿಯೊಂದು ಇಲಾಖೆಯಲ್ಲೂ ಕಾಂಗ್ರೆಸ್ ಸರ್ಕಾರದ ವೈಫಲ್ಯ, ದುರಾಡಳಿತದ ದುರಂತ ವರದಿಗಳು ದಿನವೂ ಹೊರಬರುತ್ತಿದೆ ಎಂದಿದ್ದಾರೆ ವಿಜಯೇಂದ್ರ.

ಕಾಂಗ್ರೆಸ್ ಸರ್ಕಾರದಲ್ಲಿ ಶಿಕ್ಷಣ ಕ್ಷೇತ್ರವಂತೂ ಸಂಪೂರ್ಣ ಕುಸಿದಿದೆ. ಮಕ್ಕಳಿಗೆ ಶಾಲೆಯಲ್ಲಿ ಕನಿಷ್ಠ ಶೌಚಾಲಯ ಒದಗಿಸಲೂ ಆಗದ ನಾಚಿಕೆಗೇಡಿನ ಪರಿಸ್ಥಿತಿಯೇ ಇವರ ಸಾಧನೆ! 441 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ, 378 ಮಕ್ಕಳಿಗೆ ಕೇವಲ ನಾಲ್ವರು ಶಿಕ್ಷಕರು ಮಾತ್ರ ಇರುವ ದುಸ್ಥಿತಿ ಇದೆ! ಮೂಲಭೂತ ಸೌಕರ್ಯವನ್ನೇ ಒದಗಿಸಲಾಗದ ಸರ್ಕಾರ, ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವೇ? ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಇನ್ನೊಂದೆಡೆ, ಉನ್ನತ ಶಿಕ್ಷಣ ಕ್ಷೇತ್ರವನ್ನೂ ಕೂಡ ಕಾಂಗ್ರೆಸ್ ಸರ್ಕಾರ ನಿರ್ಲಕ್ಷಿಸಿ, ಹಾಳುಗೆಡವಿದೆ. ಸಂಬಳ, ಪಿಂಚಣಿ ನೀಡಲು ಸಾಧ್ಯವಿಲ್ಲದಂಥ ಆರ್ಥಿಕ ದುಸ್ಥಿತಿಗೆ ವಿಶ್ವವಿದ್ಯಾಲಯಗಳನ್ನು ತಳ್ಳಲಾಗಿದೆ. ಸಿಬ್ಬಂದಿ ಕೊರತೆ, ಸಂಶೋಧನೆಗೆ ಇಲ್ಲದ ಬೆಂಬಲ – ಹೀಗೆ ಕಾಂಗ್ರೆಸ್ ವೈಫಲ್ಯಗಳಿಂದಾಗಿ ನಮ್ಮ ಮಕ್ಕಳ ಭವಿಷ್ಯವೇ ಮಸುಕಾಗಿದೆ. ಅತ್ತ ಮುಖ್ಯಮಂತ್ರಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ, ಇತ್ತ ಉತ್ತರ ಹೇಳಬೇಕಾದ ಸಚಿವರುಗಳು ಪತ್ತೆಯೇ ಇಲ್ಲ ಎಂದು ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
- Advertisement -

Latest Posts

Don't Miss