Friday, November 22, 2024

Latest Posts

Thejasvi Surya : ಸುಸಜ್ಜಿತ ಅಂಬ್ಯುಲೆನ್ಸ್ ಗಳನ್ನು ವಿಕ್ಟೋರಿಯಾ, ವಾಣಿ ವಿಲಾಸ ಆಸ್ಪತ್ರೆಗೆ ಒದಗಿಸಿದ ಸಂಸದ ತೇಜಸ್ವೀ ಸೂರ್ಯ

- Advertisement -

Banglore News : 77ನೇ ಸ್ವಾತಂತ್ರ್ಯೋತ್ಸವ ದಿನದ ಪ್ರಯುಕ್ತ, ನಗರದ ವಿಕ್ಟೋರಿಯಾ ಮತ್ತು ವಾಣಿ ವಿಲಾಸ ಆಸ್ಪತ್ರೆಗಳಿಗೆ 2 ಸುಸಜ್ಜಿತ ಅಂಬ್ಯುಲೆನ್ಸ್ ಗಳನ್ನು, ಬೆಂಗಳೂರು ದಕ್ಷಿಣ ಸಂಸದ ಶ್ರೀ ತೇಜಸ್ವೀ ಸೂರ್ಯ ರವರು ಒದಗಿಸಿದ್ದು,  ಅದರ ಹಸ್ತಾಂತರ ಕಾರ್ಯವನ್ನು ಸಂಸದರ ಕಚೇರಿ ಸಿಬ್ಬಂದಿ ಇಂದು ನೆರವೇರಿಸಿ, ಸಾರ್ವಜನಿಕ ಸೇವೆಗೆ ಅಂಬ್ಯುಲೆನ್ಸ್ ಗಳನ್ನು ಬಳಕೆಗೆ ಮುಕ್ತಗೊಳಿಸಿದ್ದು ಶ್ಲಾಘನೀಯ.

ಸಂಸದರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿ ಅಡಿಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆರೋಗ್ಯ , ಶಿಕ್ಷಣ ಕ್ಷೇತ್ರದ ಕಾರ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಆದ್ಯತೆಯ ಮೇರೆಗೆ ನಿಧಿ ಬಳಕೆ ಮಾಡಲಾಗಿದೆ ಎಂದು ಸಂಸದರ ಕಚೇರಿಯ ಪ್ರಕಟಣೆ ತಿಳಿಸಿದೆ.

ಆರ್ಥಿಕವಾಗಿ ಹಿಂದುಳಿದ, ಬಡ ಕುಟುಂಬಗಳಿಗೆ ಕಡಿಮೆ ದರದಲ್ಲಿ, ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುವುದು ಪ್ರಧಾನಿ ಶ್ರೀ ನರೇಂದ್ರ ಮೋದಿ ಸರ್ಕಾರದ ಆದ್ಯತೆಯಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಆರೋಗ್ಯ ಸೇವೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ.

ಕ್ಷೇತ್ರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಸೇವೆಗಳನ್ನು ಪೂರೈಸುವ ನಿಟ್ಟಿನಲ್ಲಿ , ಪ್ರತಿ ನಿತ್ಯ ಕಾರ್ಯ ನಿರ್ವಹಿಸುವ 2 ಮೊಬೈಲ್ ಕ್ಲಿನಿಕ್ ಗಳು ಈಗಾಗಲೇ ಸೇವೆಯಲ್ಲಿ ನಿರತವಾಗಿದ್ದು, ಉಚಿತ ಆರೋಗ್ಯ ಚೆಕ್ ಅಪ್, ವೈದ್ಯರೊಂದಿಗೆ ಸಮಾಲೋಚನೆ, ಲ್ಯಾಬ್ ಟೆಸ್ಟ್ ಗಳು, ಸಾಮಾನ್ಯ ಕಾಯಿಲೆಗಳಿಗೆ ಔಷಧಿ ಪೂರೈಕೆ ಸೇವೆ ಕೂಡ ಒದಗಿಸಲಾಗುತ್ತಿದ್ದು, 2 ಹೈಟೆಕ್‌, ಸುಸಜ್ಜಿತ ಅಂಬ್ಯೂಲನ್ಸ್‌ /ಮೊಬೈಲ್‌ ಕ್ಲಿನಿಕ್‌ ಗಳಿಗೆ ಇಂದು ಚಾಲನೆ ನೀಡಿದ್ದು ವಿಶೇಷ.

ಆರೋಗ್ಯ ಸೇವೆ ಸುಧಾರಣೆ ನಿಟ್ಟಿನಲ್ಲಿ, ಸಂಸದರ ನಿಧಿ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಸಹಕಾರದೊಂದಿಗೆ ಜಯನಗರದ ಕೆ.ಎಸ್.ಆರ್. ಟಿ.ಸಿ ಆಸ್ಪತ್ರೆಯಲ್ಲಿ ನರೇಂದ್ರ ಮೋದಿ ಡಯಾಲಿಸಿಸ್ ಕೇಂದ್ರ ಆರಂಭಿಸಲಾಗಿದ್ದು, ಸಂಪೂರ್ಣ ಉಚಿತ ಸೇವೆ ನೀಡಲು ನಮೋ ಡಯಾಲಿಸಿಸ್   ಕೇಂದ್ರ ಪ್ರಾರಂಭಿಸಿರುವುದು ಗಮನಾರ್ಹ.

ಕ್ಷೇತ್ರದ ಮೂಡಲಪಾಳ್ಯದಲ್ಲಿ  ಎರಡು ಅನಿಮಲ್ ಆಂಬ್ಯುಲೆನ್ಸ್ ಗಳಿಗೆ ಅನುದಾನ ಒದಗಿಸಲಾಗಿದ್ದು, ಶೀಘ್ರದಲ್ಲಿಯೇ ಸೇವೆಗೆ ಮುಕ್ತಗೊಳಿಸಲಾಗುವದು ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.

ಈ ಸಂದರ್ಭದಲ್ಲಿ ಡಾ. ಸವಿತಾ ಸಿ ( ಮೆಡಿಕಲ್‌ ಸೂಪರಿಂಟೆಂಡೆಂಟ್‌, ವಾಣಿವಿಲಾಸ ಆಸ್ಪತ್ರೆ ) ಡಾ. ಸಂತೋಷ್‌ ( ರೆಸಿಡೆಂಟ್‌ ಮೆಡಿಕಲ್‌ ಆಫೀಸರ್‌ ) ಹಾಗೂ ಸಂಸದರ ಕಛೇರಿಯ ಶ್ರೀ ಭಾನುಪ್ರಕಾಶ್‌, ಶ್ರೀ ವಿಶಾಲ್‌ ಬೋಹರಾ, ಶ್ರೀ ಅನಿಕೇತ್‌ ಜೆ, ಶ್ರೀ ಚೇತನ್‌ ಟಿ, ಶ್ರೀ ಶೇಖರ್‌ ರವರು ಉಪಸ್ಥಿತರಿದ್ದರು.

Basavaraj Bommai : ದೇಶ ವಿಭಜಿಸಿದವರು ಭಾರತ ಜೋಡೊ ಯಾತ್ರೆ ಮಾಡುತ್ತಿರುವುದು ವಿಪರ್ಯಾಸ : ಬೊಮ್ಮಾಯಿ

Basavaraj Bommai: ಕೇವಲ ರಾಜಕಾರಣಕ್ಕಾಗಿ ಎನ್‍ಇಪಿ ರದ್ದು ಮಾಡುವುದು ಅಕ್ಷಮ್ಯ ಅಪರಾಧ

Vidhanasoudha: ಸಭಾಪತಿ ಬಸವರಾಜ್ ಹೊರಟ್ಟಿ ಧ್ವಜಾರೋಹಣ…!

- Advertisement -

Latest Posts

Don't Miss