Sandalwood: ಸಿನಿಮಾದಲ್ಲಿ ಮಾಡುವ ದೊಡ್ಡ ಪಾತ್ರಗಳಿಗೆ ದುಡ್ಡು ನೀಡದ ಉದಾಹರಣೆಗಳ ಬಗ್ಗೆ ಬಾಲ್ ರಜ್ವಾಡಿ ಮಾತನಾಡಿದ್ದಾರೆ. ಅಲ್ಲದೇ, ಪಾತ್ರಗಳನ್ನು ನಿಭಾಯಿಸುವ ಬಗ್ಗೆಯೂ ವಿವರಿಸಿದ್ದಾರೆ.
ಪಾತ್ರದ ಬಗ್ಗೆ ಮಾತನಾಡಿರುವ ಬಲ್‌ರಾಜ್, ಅದೆಲ್ಲ ನಿರ್ದೇಶಕರ ಮೇಲೆ ಡಿಪೆಂಡ್ ಆಗಿರುತ್ತದೆ. ಯಾವುದೇ ಪಾತ್ರ ಆದರೂ ನಾವು ಮಾಡಲು ಸಿದ್ಧರಿರುತ್ತೇವೆ. ಆದರೆ ಆ ಪಾತ್ರಕ್ಕೆ ಜೀವ ನೀಡುವುದು ನಿರ್ದೇಶಕರು. ನೀಡಿದ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುತ್ತೇನೆ ಅಂತಾರೆ ಬಲ್‌ರಾಜ್.
ನಿರ್ದೇಶಕರನ್ನು ನಾನು ನನ್ನ ತಂದೆ ಅಂತಲೇ ಹೇಳ್ತೇನೆ. ಮಕ್ಕಳಿಗೆ ಚೆಂದದ ವಸ್ತ್ರ ಹಾಕಿ ಖುಷಿ ಪಡುವವರು ತಂದೆ ತಾಯಿ ಮಾತ್ರ. ಅವರನ್ನು ಬಿಟ್ಟರೆ ನಿರ್ದೇಶಕರೇ ನಮಗೆ ಉತ್ತಮ ಉಡುಪನ್ನು ಹಾಕಿ ಖುಷಿ ಪಡುತ್ತಾರೆ. ಹಾಗಾಗಿ ನಾನು ಅವರನ್ನು ಪೋಷಕರು ಅಂತಲೇ ಹೇಳುತ್ತೇನೆ ಅಂತಾರೆ ಬಲ್‌ರಾಜ್.
ಇನ್ನು ಬಲ್‌ರಾಜ್ ಮಾಡಿರುವ ಸಿನಿಮಾ ಆಗಿರುವ ಅನ್ನ ಸಿನಿಮಾವನ್ನು ಸಿಎಂ ಕೂಡ ನೋಡಿದ್ದರು. ಬಳಿಕ ಅವರು ಅನ್ನಭಾಗ್ಯ ಯೋಜನೆ ಬಗ್ಗೆಯೂ ಮಾತನಾಡಿದ್ದರು. ಅಷ್ಟು ಅದ್ಭುತವಾಗಿತ್ತು ಸಿನಿಮಾ. ಇನ್ನೂ ಹೆಚ್ಚಿನ ಕುತೂಹಲಕಾರಿ ಮಾಹಿತಿಗಾಗಿ ವೀಡಿಯೋ ನೋಡಿ.

