ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪಟ್ಟಿಯಲ್ಲಿರುವ ಪ್ರಶ್ನೆಗಳ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಾತಿ ಗಣತಿಯಲ್ಲಿ ಹೆಚ್ಚು ಪ್ರಶ್ನೆಗಳಿವೆ. 60 ಪ್ರಶ್ನೆಗಳಿಗೆ ಉತ್ತರ ಕೇಳೋದು ಕಷ್ಟದ ಕೆಲಸ.
ಪ್ರಶ್ನೆಗಳು ಹೆಚ್ಚಾದವು ಅನ್ನೋದು ಎಲ್ಲರ ಅಭಿಪ್ರಾಯವಾಗಿದೆ. ಡಿಸಿಎಂ ಡಿಕೆಶಿ ಹೇಳಿಕೆಗೆ ನನ್ನ ಸಹಮತ ಇದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಗಣತಿಯ ಪ್ರಶ್ನೆಗಳನ್ನು ತಯಾರಿಸಲು, ಹಿಂದುಳಿದ ವರ್ಗದ ಆಯೋಗ ಇದೆ. ಅವರೇ ಈ ನಿರ್ಧಾರ ಮಾಡುತ್ತಾರೆ. ಆದ್ರೆ , ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಅಂತಿಲ್ಲ. ಹತ್ತು ಪ್ರಶ್ನೆಗೆ ಉತ್ತರ ನೀಡಿದ್ರೂ ಓಕೆ. ನೀಡಲ್ಲ ಅಂದ್ರೂ ಓಕೆ.
ಎಲ್ಲವೂ ಸರ್ಕಾರದ ಮಟ್ಟದಲ್ಲಿ ಚರ್ಚೆ ಆಗಲ್ಲ ಅಂತಾ ಹೇಳಿದ್ರು. ಇನ್ನೂ ಲಿಂಗಾಯತ ಧರ್ಮ ಬರೆಸುವುದು ಬಿಡೋದು ಜನರಿಗೆ ಬಿಟ್ಟ ವಿಚಾರ. ಇದರಲ್ಲಿ ನಮ್ಮ ಪಕ್ಷ ಭಾಗಿಯಾಗಿಲ್ಲ. ಕಳೆದ ಬಾರಿ ಒತ್ತಡ ಇತ್ತು. ಆದರೆ ಈ ಬಾರಿ ಯಾವುದೇ ಸಚಿವರು, ಶಾಸಕರು ಒತ್ತಾಯ ಮಾಡಿಲ್ಲ.
ನವೆಂಬರ್ ಕ್ರಾಂತಿ, ಬದಲಾವಣೆಯ ಬಗ್ಗೆಯೂ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಬದಲಾವಣೆ ನಮ್ಮ ಕೈಯಲ್ಲಿ ಇಲ್ಲ. ಕೆಪಿಸಿಸಿ ಅಧ್ಯಕ್ಷ ಮತ್ತು ಸಿಎಂ ಎರಡೂ ಸಮಾನ ಸ್ಥಾನಗಳು. ಅವುಗಳ ಬದಲಾವಣೆ ಬಗ್ಗೆ ನಮಗೆ ಗೊತ್ತಿಲ್ಲ. ಆಕಾಂಕ್ಷಿಗಳು ಇದ್ದಾರೆ ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡಬೇಕೆಂದು ಹೇಳಿದ್ದಾರೆ.