ಈ-ಖಾತೆ ಮಾಡಿಸಲು ಇರೋದು 50 ರೂ. ಫೀಸ್. ಆದ್ರೆ ಇಲ್ಲಿ 5 ಸಾವಿರ ರೂ. ಕೊಡಲೇಬೇಕು..!

Political News: ಈ-ಖಾತೆ ಮಾಡಿಸಲು ಸರ್ಕಾರಿ ಫೀಸ್ ಕೇವಲ 50 ರೂಪಾಯಿ ಇದ್ದರೂ ಕೂಡ ಅಲ್ಲಿ ಕೆಲಸ ಮಾಡುವವರು ಹೆಚ್ಚು ಹಣ ಪಡೆಯುತ್ತಿದ್ದಾರೆಂದು ಮಾಜಿ ಶಾಸಕ ಪ್ರೀತಂ ಗೌಡ ಆರೋಪಿಸಿದ್ದಾರೆ. ಈ ಬಗ್ಗೆ ವೀಡಿಯೋ ಸಹ ನೀಡಿರುವ ಅವರು, ಸಾಕ್ಷಿ ಸಮೇತವಾಗಿ ಈ ಆರೋಪ ಸಾಬೀತು ಮಾಡಿದ್ದಾರೆ.

ಓರ್ವ ವ್ಯಕ್ತಿ ಈ-ಖಾತೆ ಮಾಡಿಸಲು ಫೀಸ್ ಕೇಳಿದ್ದಕ್ಕೆ, ಸರ್ಕಾರಿ ಆಫೀಸಿನಲ್ಲಿ ಕೆಲಸ ಮಾಡುವ ಮಹಿಳೆ 5 ಸಾವಿರ ರೂಪಾಯಿ ಕೇಳಿದ್ದಾಳೆ. ಅದಕ್ಕೆ ಆ ವ್ಯಕ್ತಿ ಆನ್‌ಲೈನ್ ಫೀಸ್ ಎಷ್ಟು ಎಂದು ಕೇಳಿದ್ದಾನೆ. ಅದಕ್ೆ ಆಕೆ, ಎಲ್ಲ ಕಡೆ ಸೇಮ್ ಫೀಸ್ ಇದೆ. ನೀನ“ಬ್ಬನೇ ಅಲ್ಲ, ಎಲ್ಲರೂ ಅಷ್ಟೇ ಹಣ ನೀಡುತ್ತಿದ್ದಾರೆಂದು ಹೇಳಿದ್ದಾಳೆ.

ಅಲ್ಲದೇ, ಆನ್‌ಲೈನ್ ಫೀಸ್ 50 ರೂಪಾಯಿ ಇದ್ದು, ಇಲ್ಲಿ ನನಗೆ ಅಷ್ಟು ಹಣ ನೀಡಲೇಬೇಕು. ನಾನು ಅಷ್ಟೇ ಕೆಲಸ ಮಾಡುತ್ತಿಲ್ಲ. ಇಲ್ಲಿ ನನ್ನ ಜತೆ ಬಾಡಿ ಐತೇ ಎಂದು ತನ್ನ ಮಾತನ್ನು ಆ ಮಹಿಳಾ ಸಿಬ್ಬಂದಿ ಸಮರ್ಥಿಸಿಕ“ಂಡಿದ್ದಾಳೆ. ಹೀಗೆ 100 ಪಟ್ಟು ಲಂಚ ಕೇಳುವ ವೀಡಿಯೋ ವೈರಲ್ ಆಗಿದ್ದು,  ಇ -ಖಾತೆ ಮಾಡಿಸಲು ಸರ್ಕಾರೀ ಫೀಸ್ 50 ರೂಪಾಯಿ, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಕ್ಕೆ 5,000 ರೂಪಾಯಿ ಕೊಡಬೇಕಿದೆ. ಅಂದರೆ 100 ಪಟ್ಟು ಹೆಚ್ಚು ಹಣ ನೀಡಬೇಕಾದ ದಯನೀಯ ಸ್ಥಿತಿ ಕರ್ನಾಟಕದಲ್ಲಿದೆ. ಈ ಹಗಲು ದರೋಡೆಯೇ ಭ್ರಷ್ಟ ಕಾಂಗ್ರೆಸ್ ಸರ್ಕಾರದ ‘1000 ದಿನಗಳ ಸಾಧನೆಯಾಗಿದೆ ಎಂದು ಮಾಜಿ ಶಾಸಕ ಪ್ರೀತಂ ಗೌಡ ವ್ಯಂಗ್ಯವಾಡಿದ್ದಾರೆ.

About The Author