Political News: ಜಮೀನಿಗೆ ರಸ್ತೆ ನಿರ್ಮಿಸಿ ಎಂದು ರೈತನೋರ್ವ ಅಧಿಕಾರಿಗಳನ್ನು ಕೇಳಿದ್ದು, ಅವರು ಲಂಚ ಕೇಳಿದ್ದಾರೆ, ತನ್ನ ಬಳಿ ನೀಡಲು ಲಂಚವಿಲ್ಲ. ನಾನು ಮೂಲಂಗಿ ಮಾರಿ ಜೀವನ ನಡೆಸುತ್ತಿದ್ದೇನೆ. ನನ್ನ ಬಳಿ ನೀಡಲು ಹಣವಿಲ್ಲ. ಹಾಗಾಗಿ ಅಧಿಕಾರಿಗಳಿಗಾಗಿ ಮೂಲಂಗಿಯೇ ತಂದಿದ್ದೇನೆ ಎಂದು ವೃದ್ಧ ರೈತ ತಿಳಿಸಿದ್ದಾರೆ.
ಈತನ ಹೇಳಿಕೆ ವೈರಲ್ ಆಗಿದ್ದು, ಮಾಜಿ ಶಾಸಕ ಪ್ರೀತಂ ಗೌಡ ಈ ಹೇಳಿಕೆ ಶೇರ್ ಮಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನ್ನ ಜಮೀನಿಗೆ ರಸ್ತೆ ನಿರ್ಮಿಸಲು ಕೇಳಿದ ರೈತನ ಬಳಿ ಅಧಿಕಾರಿಗಳು ರಾಜಾರೋಷವಾಗಿ ಲಂಚ ಕೇಳುತ್ತಾರೆಂದರೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಷ್ಟರ ಮಟ್ಟಿಗೆ ಲಂಚಗುಳಿತನ ಬೆಳೆದು ಹೆಮ್ಮರವಾಗಿದೆ ಎಂಬುದು ತಿಳಿಯುತ್ತದೆ. ಅಧಿಕಾರಿಗಳಿಗೆ ಲಂಚ ನೀಡಲಾಗದ ರೈತ, ತಾನು ಬೆಳೆದ ಮೂಲಂಗಿಯನ್ನು ತಂದು ಕೊಟ್ಟಿದ್ದಾನೆ.
ಭ್ರಷ್ಟಾಚಾರದಲ್ಲಿಯೇ ದಿನನಿತ್ಯ ಮಿಂದೇಳುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ಸರ್ಕಾರ ಆ ಮೂಲಂಗಿಯನ್ನು ಮಾರುವುದಕ್ಕೂ ಹೇಸುವುದಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಪ್ರೀತಂ ಗುಡುಗಿದ್ದಾರೆ.
ಇನ್ನು ಈ ವೀಡಿಯೋದಲ್ಲಿ ರೈತ, ನನ್ನ ಮನೆಗೆ ರಸ್ತೆ ನಿರ್ಮಿಸದಿದ್ದಲ್ಲಿ, ಇದೇ ವಾರದಲ್ಲಿ ಇಲ್ಲೇ ಬಂದು ನೇಣಿಗೆ ಶರಣಾಗುತ್ತೇನೆ. ನನ್ನ ಹತ್ರ ಲಂಚ ನೀಡಲು ಹಣವಿಲ್ಲ. ನಾನು ಬೆಳೆಯುವ ಜಾಗವನ್ನೇ ಬರೆದುಕ“ಡುತ್ತೇನೆ. ಬೇಕಾದ್ರೆ ಮನೆ ನಿರ್ಮಿಸಲಿ. ಆದರೆ ನನ್ನ ಮನೆಗೆ ರಸ್ತೆ ನಿರ್ಮಿಸಿ, ದಾರಿ ಬಿಡಿಸಿಕ“ಡಿ ಎಂದು ರೈತ ಮನವಿ ಮಾಡಿದ್ದಾರೆ.
ಆಡು ಮುಟ್ಟದ ಸೊಪ್ಪಿಲ್ಲ, ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮಾಡದ ವಲಯವಿಲ್ಲ!!
ತನ್ನ ಜಮೀನಿಗೆ ರಸ್ತೆ ನಿರ್ಮಿಸಲು ಕೇಳಿದ ರೈತನ ಬಳಿ ಅಧಿಕಾರಿಗಳು ರಾಜಾರೋಷವಾಗಿ ಲಂಚ ಕೇಳುತ್ತಾರೆಂದರೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಷ್ಟರ ಮಟ್ಟಿಗೆ ಲಂಚಗುಳಿತನ ಬೆಳೆದು ಹೆಮ್ಮರವಾಗಿದೆ ಎಂಬುದು ತಿಳಿಯುತ್ತದೆ. ಅಧಿಕಾರಿಗಳಿಗೆ ಲಂಚ ನೀಡಲಾಗದ ರೈತ,… pic.twitter.com/InkFMvG8JQ
— Preetham J Gowda (@preethamgowda_j) February 6, 2026




