ಪುರಿ ಜಗನ್ನಾಥ ದೇವಾಲಯದ ಖಂಜನೆ ವಿಚಾರ ಬಂದಾಗಿನಿಂದ ನಮ್ಮ ಜನರಲ್ಲಿ ನಮ್ಮ ದೇವಸ್ಥಾನಗಳು ಅಷ್ಟು ಶ್ರೀಮಂತನಾ ಎಂಬ ಪ್ರಶ್ನೆ ಬಂದಿರುತ್ತೆ. ಅದಕ್ಕೆ ಇಂದು ನಾವು ನಮ್ಮ ಭಾರತದ 10 ಶ್ರೀಮಂತ ದೇವಸ್ಥಾನಗಳು ಯಾವುವು? ಅವರ ಆದಾಯ ಏನು? ಆ ದೇವಸ್ಥಾನ ಎಷ್ಟಯ ಫೇಮಸ್ ಅಂತ ಹೇಳತ್ತಾ ಹೋಗುತ್ತೇನೆ..
1. ತಿರುಮಲ ತಿರುಪತಿ ವೆಂಕಟೇಶ್ವರ ದೇವಸ್ಥಾನ, ಆಂಧ್ರಪ್ರದೇಶ
ಆಂಧ್ರಪ್ರದೇಶದಲ್ಲಿರುವ ತಿರುಮಲ ತಿರುಪತಿ ವೆಂಕಟೇಶ್ವರ ದೇವಸ್ಥಾನ ನಂಬರ್ ಒನ್ ಶ್ರೀಮಂತ ದೇವಾಲಯ.. ತಿರುಮಲ ಬೆಟ್ಟಗಳಲ್ಲಿ ನೆಲೆಗೊಂಡಿರುವ ಈ ದೇವಾಲಯವು ವಿಶ್ವದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ.. ಅಂದಾಜು ಈ ದೇವಾಲಯವು 3 ಲಕ್ಷ ಕೋಟಿ ಹಣವನ್ನು ಹೊಂದಿದೆ ಎನ್ನಲಾಗುತ್ತಿದೆ. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಪ್ರತಿದಿನ ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತರು ಬರುತ್ತಾರೆ ಎಂದು ಅಂದಾಜಿಸಲಾಗಿದೆ. ಕಾಣಿಕೆ ರೂಪದಲ್ಲಿ ಚಿನ್ನ, ಬೆಳ್ಳಿ, ಲಕ್ಷಾಂತರ ರೂಪಾಯಿ ಹಣವನ್ನು ಕೊಡಲಾಗುತ್ತೆ. ಒಟ್ಟಾರೆ ವಾರ್ಷಿಕವಾಗಿ ಈ ದೇವಸ್ಥಾನ 1,400 ಕೋಟಿ ರೂ. ಆದಾಯ ಬರುತ್ತೆ.
02. ಪದ್ಮನಾಭಸ್ವಾಮಿ ದೇವಾಲಯ, ಕೇರಳ
1 ಲಕ್ಷದ 20 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ಕೇರಳದ ಪದ್ಮನಾಭಸ್ವಾಮಿ ದೇವಾಲಯವು ಹೊಂದಿದೆ… ಈ ಮೂಲಕ ಈ ದೇವಸ್ಥಾನವು ಅತ್ಯಂತ ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.. 2015ರಲ್ಲಿ ದೇವಸ್ಥಾನದ ನೆಲಮಾಳಿಗೆಯಲ್ಲಿ ಗುಪ್ತನಿಧಿ ಪತ್ತೆಯಾಗಿದೆ.. ಈ ನಿಧಿಯಲ್ಲಿ ಚಿನ್ನ, ಪಚ್ಚೆಗಳು, ಪ್ರಾಚೀನ ಬೆಳ್ಳಿ ಮತ್ತು ವಜ್ರ ಕಂಡುಬಂದಿದೆ.. ಈ ನಿಧಿ ಮೂಲಕ ದೇವಾಲಯದ ಆಸ್ತಿ ಮತ್ತಷ್ಟು ಹೆಚ್ಚಿಗೆ ಆಯ್ತು.
03. ಗುರುವಾಯೂರು, ಕೇರಳ
ವಿಷ್ಣುವಿನ ಪ್ರಸಿದ್ಧ ದೇವಾಸ್ಥಾನ ಕೇರಳದ ಗುರುವಾಯೂರು ಸಹ ಶ್ರೀಮಂತ ದೇವಸ್ಥಾನಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.. ಈ ಪ್ರಾಚೀನ ದೇವಾಲಯದ ಬ್ಯಾಂಕ್ ಬೈಲೆಂಸ್ 1 ಸಾವಿರದ 737 ಕೋಟಿ ರೂ. ಹೊಂದಿದೆ.. ಜೊತೆಗೆ ಈ ದೇವಸ್ಥಾನ 271.05 ಎಕರೆ ಭೂಮಿ ಸಹ ಹೊಂದಿದೆ. ಜೊತೆಗೆ ಈ ದೇವಸ್ಥಾನದಲ್ಲಿ ಚಿನ್ನ, ಬೆಳ್ಳಿ ಮತ್ತು ಅಮೂಲ್ಯ ಸ್ಟಾನ್ ಗಳನ್ನ ಸಂಗ್ರಹ ಮಾಡಲಾಗಿದೆ…
4. ವೈಷ್ಣೋ ದೇವಿ ದೇವಸ್ಥಾನ, ಜಮ್ಮು
ಜಮ್ಮುವಿನಲ್ಲಿ ದುರ್ಗ ದೇವಸ್ಥಾನಕ್ಕೆ ಸಖತ್ ಫೇಮಸ್ ಆದ ವೈಷ್ಣೋ ದೇವಿ ದೇವಸ್ಥಾನ ಸಹ ಶ್ರೀಮಂತ ದೇವಸ್ಥಾನಗಳ ಪಟ್ಟಿಯಲ್ಲಿ ಸ್ಥಾನಪಡೆದು ಕೊಂಡಿದೆ… ಈ ದೇವಸ್ಥಾನವು ಸಮುದ್ರ ಮಟ್ಟದಿಂದ 5,200 ಅಡಿ ಎತ್ತರದಲ್ಲಿದ್ದು, ಭಕ್ತರನ್ನು ಹೆಚ್ಚು ಆಕರ್ಷಣೆ ಮಾಡುವ ದೇವಸ್ಥಾನಗಳಲ್ಲಿ ಇದು ಒಂದಾಗಿದೆ.. ಈ ದೇವಸ್ಥಾನದಲ್ಲಿ ದುರ್ಗಾ ದೇವಿಗೆ ಸಮರ್ಪಿತವಾದ ಈ ದೇವಾಲಯವು ಭಾರತದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. 2000ದಿಂದ 2020ರವರೆಗೂ ವೈಷ್ಣೋ ದೇವಿಗೆ ದೇಣಿಗೆಯಾಗಿ 1 ಸಾವಿರದ 800 ಕೆಜಿ ಚಿನ್ನ, 4 ಸಾವಿರದ 700 ಕೆಜಿ ಬೆಳ್ಳಿ ಮತ್ತು 2 ಸಾವಿರ ಕೋಟಿ ರೂಪಾಯಿ ಸ್ವೀಕರಿಸಲಾಗಿದೆ…
05. ಶಿರಡಿ ಸಾಯಿಬಾಬಾ, ಮಹಾರಾಷ್ಟ್ರ
ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ದೇವಸ್ಥಾನ ಸಹ ಶ್ರೀಮಂತ ದೇವಸ್ಥಾನದಲ್ಲಿ ಒಂದಾಗಿದೆ.. ಈ ದೇವಸ್ಥಾನವು ಮುಂಬೈನಿಂದ 296 ಕಿ.ಮೀ ದೂರದಲ್ಲಿರುವ ಈ ಜನಪ್ರಿಯ ದೇವಾಲಯವು ಪ್ರತಿದಿನ ಸುಮಾರು 25 ಸಾವಿರ ಭಕ್ತರು ಬಾಬಾನ ದರ್ಶನಕ್ಕೆ ಬರುತ್ತಾರೆ.. ಇನ್ನು ವೀಕೆಂಡ್ ಬಂದ್ರೆ 50 ಸಾವಿರ ದಾಟಿದ ದಾಖಲೆ ಸಹ ಇದೆ. ಈ ದೇವಸ್ಥಾನವನ್ನು 1922ರಲ್ಲಿ ನಿರ್ಮಿಸಲಾಗಿದೆ.. ಇನ್ನ 2022ರಲ್ಲಿ 400 ಕೋಟಿ ರೂಪಾಯಿ ದೇಣಿಗೆಯನ್ನು ಸ್ವೀಕರಿಸಲಾಯಿತು. ಜೊತೆಗೆ ಈ ದೇವಸ್ಥಾನ ಪ್ರತಿದಿನ ಸಾವಿರಾರು ಭಕ್ತರಿಗೆ ಉಚಿತ ಆಹಾರವನ್ನು ಒದಗಿಸುತ್ತದೆ.
06.ಗೋಲ್ಡನ್ ಟೆಂಪಲ್, ಅಮೃತಸರ
ಅಮೃತಸರದ ಗೋಲ್ಡನ್ ಟೆಂಪಲ್ ಅದ್ಭುತವಾದ ವಾಸ್ತುಶಿಲ್ಪ ಮತ್ತು ಚಿನ್ನದ ಲೇಪಿನಕ್ಕೆ ಎಲ್ಲರು ಬೆರಗಾಗುತ್ತಾರೆ.. ಈ ದೇವಸ್ಥಾನ ಸಿಖ್ ಧರ್ಮದ ಪ್ರತಿಬಿಂಬವಾಗಿದ್ದು, ಟುರಿಸ್ಟ್ ಜಾಗ ಸಹ ಆಗಿದೆ.. ಗೋಲ್ಡನ್ ಟೆಂಪಲ್ ಕೇಂದ್ರ ಸಿಖ್ ಧಾರ್ಮಿಕ ತಾಣವಾಗಿದೆ. ಇದು 1581ರಲ್ಲಿ ನಿರ್ಮಾಣವಾಗಿದ್ದು, ವಾರ್ಷಿಕವಾಗಿ 500 ಕೋಟಿ ರೂಪಾಯಿ ಆದಾಯ ಗಳಿಸುವುದಾಗಿ ವರದಿಯಾಗಿದೆ.
: 07. ಮೀನಾಕ್ಷಿ ದೇವಸ್ಥಾನ, ಮಧುರೈ
ಮಧುರೈಯ ಮೀನಾಕ್ಷಿ ದೇವಸ್ಥಾನ ಸಹ ಶ್ರೀಮಂತ ದೇವಸ್ಥಾನಗಳ ಪಟ್ಟಿಯಲ್ಲಿದೆ.. ಈ ದೇವಸ್ಥಾನದ ವಾಸ್ತುಶಿಲ್ಪ ಮತ್ತು ರೋಮಾಂಚಕ ಹಬ್ಬಗಳಿಗೆ ಹೆಸರುವಾಸಿಯಾಗಿದೆ.. ಮೀನಾಕ್ಷಿ ದೇವಾಲಯವು ಪ್ರತಿದಿನ 20 ಸಾವಿರಕ್ಕೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತೆ. ವಾರ್ಷಿಕವಾಗಿ ಸರಿಸುಮಾರು ೬೦ ಮಿಲಿಯನ್ ಆದಾಯ ಸಹ ಈ ದೇವಸ್ಥಾನಕ್ಕೆ ಇದೆ.
08.ಸಿದ್ಧಿವಿನಾಯಕ , ಮುಂಬೈ
ಮುಂಬೈನಲ್ಲಿ ಈಶ ಪುತ್ರ ಸಿದ್ಧಿವಿನಾಯಕ ಸಹ ಶ್ರೀಮಂತ ದೇವಸ್ಥಾನವಾಗಿದೆ.. ಮುಂಬೈನ ಪ್ರಭಾದೇವಿ ಪ್ರದೇಶದಲ್ಲಿರುವ ಈ ದೇವಾಲಯವು 125 ಕೋಟಿ ರೂ.ಗಳ net worth ಹೊಂದಿದೆ.. ಇದು ಪ್ರತಿದಿನ 30 ಲಕ್ಷ ರೂಪಾಯಿ ದೇಣಿಗೆಯನ್ನು ಸ್ವೀಕರಿಸುತ್ತದೆ. ಈ ದೇವಸ್ಥಾನದ ಸಿದ್ದಿವಿನಾಯಕನನ್ನು 4 ಕೆಜಿ ಚಿನ್ನದಿಂದ ಅಲಂಕರಿಸಲಾಗಿದೆ..
09. ಸೋಮನಾಥ ದೇವಾಲಯ, ಗುಜರಾತ್
ಗುಜರಾತ್ ನಲ್ಲಿರುವ ಸೋಮನಾಥ ದೇವಾಲಯ ಸಹ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾಗಿದೆ. ಈ ದೇವಸ್ಥಾನ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದ್ದು 12 ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದಾಗಿದೆ. ಈ ದೇವಾಲಯದ ಒಳಭಾಗ 130 ಕೆಜಿ ಚಿನ್ನ ಮತ್ತು ಶಿಖರದ ಮೇಲೆ 150 ಕೆಜಿ ಚಿನ್ನವನ್ನು ಹೊಂದಿದೆ.
10. ಶ್ರೀ ಜಗನ್ನಾಥ ದೇವಾಲಯ, ಒಡಿಶಾ
ಇನ್ನ ಒಡಿಶಾದ ಶ್ರೀ ಜಗನ್ನಾಥ ದೇವಾಲಯ 10ನೇ ಸ್ಥಾನದಲ್ಲಿದೆ.. 11 ನೇ ಶತಮಾನದಲ್ಲಿ ಸ್ಥಾಪಿತವಾದ ಜಗನ್ನಾಥ ದೇವಾಲಯವು ಪ್ರಮುಖ ಯಾತ್ರಾ ಸ್ಥಳವಾಗಿದೆ. ಈ ದೇವಾಲಯ ಚಾರ್ ಧಾಮ್ ಯಾತ್ರೆಯ ಭಾಗವಾಗಿದೆ. ಇದರ net worth 150 ಕೋಟಿ ರೂ ಎಂದು ಅಂದಾಜಿಸಲಾಗಿದ್ದು, ಇದು ಸುಮಾರು 30,000 ಎಕರೆ ಭೂಮಿಯನ್ನು ಹೊಂದಿದೆ.