Hubli News: ಹುಬ್ಬಳ್ಳಿ: ಸ್ವಾಭಿಮಾನಿ ಸಮಾವೇಶ ಮಾಡೋದ್ರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಪರ-ವಿರೋಧ ಅವರ ವೈಯಕ್ತಿಕ ಅಭಿಪ್ರಾಯಗಳಾಗಿವೆ ಎಂದು ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಸ್ವಾಭಿಮಾನಿ ಸಮಾವೇಶಕ್ಕೆ ಯಾವುದೇ ವಿರೋಧವಿಲ್ಲ. ಸಮಾವೇಶದ ಮೂಲಕ ಸ್ವಾಭಿಮಾನಿಗಳಿಗೆ ಸನ್ಮಾನ ಮಾಡಲಾಗುತ್ತಿದೆ ಎಂದರು.
ಸಂಪುಟ ಪುನರ್ ರಚನೆ ಬಗ್ಗೆ ನನಗೆ ಮಾಹಿತಿಯಿಲ‌್ಲ. ಸಚಿವರ ಮೌಲ್ಯ ಮಾಪನ ನಡೆಯಲೇಬೇಕು. ಉತ್ತಮ ಆಡಳಿತ ಕೊಡುವಾಗ ಯಾರು ಚೆನ್ನಾಗಿ ಕೆಲಸ ಮಾಡತ್ತಾ ಇದ್ದಾರೆ ಎನ್ನುವುದನ್ನು ನೋಡಲೇಬೇಕು ಎಂದು ತಿಳಿಸಿದರು.
ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿ, ಈವರೆಗೆ ಯಾವುದೇ ಚರ್ಚೆ ನಡೆದಿಲ್ಲ. ಸಿಎಂ ಬದಲಾವಣೆ ಶಕ್ತಿ ಇರೋದು ಸಿಎಲ್’ಪಿ, ಮತ್ತು ಎಐಸಿಸಿಗೆ ಹೀಗಾಗಿ ಯಾವುದೇ ಸೂಚನೆ ಬಾರದೇ ಸುಖಾಸುಮ್ಮನೆ ಹೇಳಿಕೆ ಕೊಡುವುದು ಸರಿಯಲ್ಲ ಎಂದರು.
ಅಧಿಕಾರ ಶಾಶ್ವತವಲ್ಲ. ವ್ಯಕ್ತಿ 100 ವರ್ಷ ಬದಕತ್ತಾನೆ ಎನ್ನುವುದು ಗೊತ್ತಿಲ್ಲ. ಹೀಗಾಗಿ ಅಧಿಕಾರದ ಬಗ್ಗೆ ಬಹಳ ಯೋಚನೆ ಮಾಡಬಾರದು. ಯಾವುದೇ ರೀತಿಯಲ್ಲಿ ಹಿರಿಯರು ಅಧಿಕಾರ ತ್ಯಾಗ ಮಾಡಬೇಕೆಂಬ ಸೂಚನೆ ಸಹ ಬಂದಿಲ್ಲ ಎಂದು ಸಚಿವರು ತಿಳಿಸಿದರು.
ಬಿಜೆಪಿ ಒಡೆದು ಮೂರಾಬಟ್ಟೆಯಾಗಿದೆ. ಅದನ್ನು ಮೊದಲು ಸುಧಾರಣೆ ಮಾಡಿಕೊಳ್ಳಲಿ, ಯತ್ನಾಳ ಬಿಜೆಪಿ ತಪ್ಪಿನ ಬಗ್ಗೆ ಮಾತನಾಡತ್ತಾರೆ. ಹಾಗೇ ಮಾತನಾಡಿದ್ರೆ ಅವರು ಕಾಂಗ್ರೆಸ್ ಮುಖವಾಣಿಯಾಗುವುದಿಲ್ಲ. ಅವರೊಬ್ಬ ಬಿಜೆಪಿಯ ನಾಯಕರು ಎಂದರು.