Saturday, January 18, 2025

Latest Posts

ಹಂಪಿ ಭೂ ಕಂಪನದ ಅಸಲಿ ಸತ್ಯ..!

- Advertisement -

ಕರ್ನಾಟಕ ಟಿವಿ :  ರಾಜ್ಯದಲ್ಲಿ ಕೊರೊನಾ ಹೆಚ್ಚಳವಾಗಿದ್ದು ಭಾರೀ ಆತಂಕಕ್ಕೆ ಕಾರಣವಾಗಿದ್ರೆ, ಹಂಪಿಯಲ್ಲಿ ಭೂಕಂಪನದ ಸುದ್ದಿ ಮತ್ತಷ್ಟು ಭಯ ಹುಟ್ಟಿಸಿತ್ತು.. ರಾಷ್ಟ್ರೀಯ  ಭೂಕಂಪನ ಮಾಪನ ಇಲಾಖೆ ರಾಯಚೂರು ಹಾಗೂ ಹಂಪಿಯಲ್ಲಿ ರಿಕ್ಟರ್ ಮಾಪಕದಲ್ಲಿ 4 ರಷ್ಟು ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ ಎಂದು ವರದಿ ಮಾಡಿತ್ತು.. ಈ ಕುರಿತು, ಕರ್ನಾಟಕ ಭೂಕಂಪನ ಮಾಪನ  ಇಲಾಖೆಯ ವಿಜ್ಞಾನಿ ಜಗದೀಶ್ ಮಾತನಾಡಿದ್ದು ಸಾಫ್ಟ್ ವೇರ್ ಸಮಸ್ಯೆ ಇಂದ ಈ ರೀತಿ ಆಗಿದೆ ಎಂದು ಹೇಳಿದ್ದಾರೆ.. ತುಂಗಭದ್ರಾ ಡ್ಯಾಂ ಬಳಿ ಭೂಕಂಪನ ಮಾಪಕವಿದ್ದು ಇಲ್ಲಿ ಯಾವುದೇ ರೀತಿಯ ಕಂಪನ ದಾಗಿಲ್ಲ.. ರಾಷ್ಟ್ರೀಯ ಭೂಕಂಪನ ಮಾಪಕ ಇಲಾಖೆಯ ಸಾಫ್ಟ್ ವೇರ್ ಸಮಸ್ಯೆಯಿಂದ ಈ ರೀತಿ ವರದಿ ಬಂದಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇತ್ತ ಹರಿಯಾಣದಲ್ಲಿ ನಿಜವಾಗಿಯೂ ಭೂಮಿ ಕಂಪಿಸಿದೆ. ಇದರ ತೀವ್ರ 4.6 ರಷ್ಟು ದಾಖಲಾಗಿದೆ. ಕಳೆದ ಎರಡು ವಾರಗಳಿಂದ ದೆಹಲಿಯಲ್ಲಿ 6 ಬಾರಿ ಲಘು ಭೂಕಂಪನ ಸಂಭವಿಸಿದೆ.

https://www.youtube.com/watch?v=gWwJQ4ZUrS8

ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ

- Advertisement -

Latest Posts

Don't Miss