Wednesday, May 29, 2024

Latest Posts

ಬರುವ 10 ವರ್ಷದಲ್ಲಿ ಬಡತನ ನಿರ್ಮೂಲನೆ ಮಾಡುವ ಪಿಚ್ಚರ್ ಇರುತ್ತೆ: ಪ್ರಹ್ಲಾದ್ ಜೋಶಿ

- Advertisement -

Dharwad News: ಧಾರವಾಡ: ಧಾರವಾಡದಲ್ಲಿಂದು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮುಂದಿನ 10 ವರ್ಷ ಮೋದಿ ಅವರ ಆಡಳಿತ ಇರುತ್ತೆ. ಬರುವ 10 ವರ್ಷದಲ್ಲಿ ಬಡತನ ನಿರ್ಮೂಲನೆ ಮಾಡುವ ಪಿಚ್ಚರ ಇರುತ್ತೆ. ಅನೇಕ ಯೋಜನೆಗಳ ತಯಾರಾಗಿವೆ. ದೇಶದಲ್ಲಿ ಆರ್ಥಿಕ ಪರಿಸ್ತಿತಿ ಸರಿ ಇರಬೇಕಂದರೆ ಶಾಂತಿ ವ್ಯವಸ್ಥೆ ಆಗಬೇಕು. ಟೆರರಿಸ್ಟ ಬಂದು ಹೊಡೆದು ಹೋದ್ರೆ ಇವರು ಪಾಕಿಸ್ತಾನಕ್ಕೆ ನುಗ್ಗಿ ಹೊಡಿತಾರೆ ಅಂತ ಜನರಲ್ಲಿ ನಂಬಿಕೆ ಇತ್ತು. ಆದರೆ ಇವರು ಕಸಾಬ್ ನನ್ನ ಇಟ್ಟುಕ್ಕೊಂಡು ಬಿರಿಯಾನಿ ತಿನ್ನಿಸಿದರು. ಭ್ರಷ್ಟ ಪಕ್ಷ ಕಾಂಗ್ರೆಸ್ ಪಕ್ಷ ಎಂದು ಪ್ರಹ್ಲಾದ್ ಜೋಶಿ ಹರಿಹಾಯ್ದಿದ್ದಾರೆ.

ಭಾರತದಲ್ಲಿ ಏನಾದರೂ ದಬ್ಬಾಳಿಕೆ ಮಾಡಿದ ನೆರೆ ರಾಷ್ಡ್ರಗಳ ಮನೆ ಹೊಕ್ಕು ಹೊಡೆಯುತ್ತೇವೆ. ಪಾಕಿಸ್ತಾನ ಬಾಲವನ್ನ ಮುಚ್ಚಿಕ್ಕೊಂಡಿದೆ. ಚೀನಾ ದೇಶಕ್ಕೂ ನಾವು ವಾರ್ನ್ ಮಾಡಿದ್ದೇವೆ ಎಂದು ಧಾರವಾಡದ ಯರಿಕೊಪ್ಪ ಗ್ರಾಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಜನರ ಪ್ರತಿಕ್ರಿಯೆ ಉತ್ತಮವಾಗಿದೆ. ಇವತ್ತು ನಾನು ಮೂರು ಗ್ರಾಮಗಳಲ್ಲಿ ಪ್ರಚಾರ ಮಾಡಿದ್ದೇನೆ. ಮೋದಿ ಅವರ ಮೆಲೆ ಇರುವ ವಿಶ್ವಾಸ್ ಕಳೆದ 10 ವರ್ಷದಿಂದ ಅಭಿವೃದ್ಧಿ ಆಗಿದೆ. ಕಾಂಗ್ರೆಸ್ ಪಕ್ಷಕ್ಕೆ ಜನರು ಬೇಸತ್ತಿದ್ದಾರೆ. ಗ‌್ಯಾರಂಟಿ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಜೋಶಿ ಹೇಳಿದ್ದಾರೆ.

ಬೆಂಗಳೂರು ಬ್ಲಾಸ್ಟ್ ವಿಚಾರವಾಗಿ ಮಾತನಾಡಿದ ಜೋಶಿ, ಈ ಘಟನೆ ಸಿಲೆಂಡರ್ ಸ್ಪೋಟ ಅಂದ್ರು, ಗೃಹ ಮಂತ್ರಿ ಸೇಡಿನಿಂದ ಆಗಿದೆ ಎಂದರು. ಕಾಂಗ್ರೆಸ್ ನವರು ಬ್ಲಾಸ್ಟ ವಿಚಾರವನ್ನ ಮುಚ್ಚಿ ಹಾಕುತ್ತಿದ್ದಾರೆ. ರಾಜ್ಯದ ಸರಕಾರದ ನಡತೆ ಸರಿ ಇಲ್ಲ. ಮತ ಬ್ಯಾಂಕ್ ಗಾಗಿ ಟೆರರಿಸ್ಟಗಳಿಗೆ ಕಾಂಗ್ರೆಸ್ ಪಕ್ಷ ಅನುಕಂಪ ತೋರಿಸುತ್ತಾರೆ. ಗ‌್ಯಾರಂಟಿಗಳು ಲೋಕಸಭಾ ಚುಣಾವಣೆಯ ನಂತರ ಇರಲ್ಲ. 60 ವರ್ಷದಲ್ಲಿ ಕಾಂಗ್ರೆಸ್ ಎನ್ ಮಾಡಿದೆ. ಮೋದಿ ಸರಕಾರ ಸ್ಟ್ರಾಂಗ್ ಆದ ಮೆಲೆ‌ ಹಿಗೆ ಮಾತನಾಡುತ್ತಿದ್ದಾರೆ ಎಂದು ಜೋಶಿ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಶ್ರೀನಿವಾಸ್ ಪ್ರಸಾದ್ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಜೋಶಿ, ಅವರಿಗೆ ಸ್ವ ಕ್ಷೆತ್ರದಲ್ಲಿ ಭಯ ಶುರುವಾಗಿದೆ. ಹಿರಿಯ ದಲಿತ ನಾಯಕನನ್ನ ಹಿನಾಯವಾಗಿ ಕೆಟ್ಟದಾಗಿ ನಡೆಸಿಕ್ಕೊಂಡಿದ್ದಾರೆ. ಇವತ್ತು ಅವರ ಮನೆಗೆ ಹೋಗ್ತಾರೆ ಅಂದ್ರೆ ಎನಿದು. ಸ್ವಕ್ಷೆತ್ರ ಮೈಸೂರಿನಲ್ಲಿ ಭಯ ಶುರುವಾಗಿದೆ ಅಂದ್ರೆ ರಾಜ್ಯದಲ್ಲಿ ಎನಿರಬಹುದು ಹೇಳಿ ನೋಡೋಣ ಎಂದು ಜೋಶಿ ಹೇಳಿದ್ದಾರೆ.

ಧೋನಿಯನ್ನು ನೋಡಲು 64 ಸಾವಿರ ರೂ. ಖರ್ಚು ಮಾಡಿದ ಅಭಿಮಾನಿ, ಆದರೆ ಮಕ್ಕಳ ಫೀಸ್‌ ಕಟ್ಟಲು ದುಡ್ಡಿಲ್ಲ

200 ಕೋಟಿ ಆಸ್ತಿ ದಾನ ಮಾಡಿ ಜೈನ ಮುನಿಯಾದ ಗುಜರಾತ್‌ನ ಉದ್ಯಮಿ..

ನನ್ನ ಮಿತ್ರನ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ: ಜೋಶಿ ಪರ ಮತಯಾಚನೆಗೆ ಧಾರವಾಡಕ್ಕೆ ಬಂದ ಕೋರೆ..

- Advertisement -

Latest Posts

Don't Miss