Tuesday, October 15, 2024

Latest Posts

ಸಮಯಕ್ಕೆ ಸರಿಯಾಗಿ ನಿದ್ದೆ ಮಾಡದಿದ್ದಲ್ಲಿ ಆರೋಗ್ಯಕ್ಕೆ ಎಷ್ಟೆಲ್ಲ ನಷ್ಟವಾಗಬಹುದು ಯೋಚಿಸಿದ್ದೀರಾ..?

- Advertisement -

Health Tips: ಮೊದಲೆಲ್ಲಾ ಹಿರಿಯರು ರಾತ್ರಿ 10ಗಂಟೆಯೊಳಗೆ ಮಲಗಿ, ಬೆಳಗ್ಗಿನ ಜಾವ 5 ಗಂಟೆಗೆಲ್ಲ ಏಳುತ್ತಿದ್ದರು. ಹಾಗಾಗಿ ಅವರ ಆರೋಗ್ಯ ಕೂಡ ಅತ್ಯುತ್ತಮವಾಗಿತ್ತು. ಆಯುಷ್ಯ ಕೂಡ ಹೆಚ್ಚಾಗಿತ್ತು. ಆದರೆ ಈಗಿನ ಕಾಲದಲ್ಲಿ ಮಲಗಲು 12 ಗಂಟೆ ದಾಟಲೇಬೇಕು. ಏಕೆಂದರೆ, ಕೈಯಲ್ಲಿ ಮೊಬೈಲ್ ಹಿಡಿದರೆ, ಸಮಯ ಹೋಗಿದ್ದೂ ಗೊತ್ತಾಗುವುದಿಲ್ಲ. ಅಕ್ಕಪಕ್ಕದಲ್ಲಿ ಏನಾಗುತ್ತಿರಬಹುದು ಎಂಬುದರ ಅರಿವೇ ಇರುವುದಿಲ್ಲ. ಹಾಗಾಗಿ ಬೆಳಿಗೆ ಬೇಗ ಎಚ್ಚರಾಗುವುದಿಲ್ಲ. ಇನ್ನು ಬೇಗ ಏಳಲೇಬೇಕು ಎನ್ನುವ ಅನಿವಾರ್ಯತೆ ಇದ್ದರೆ, ನಿದ್ದೆ ಪೂರ್ಣವಾಗುವುದಿಲ್ಲ. ಆದರೆ ವೈದ್ಯರು ಹೇಳುವ ಪ್ರಕಾರ, ರಾತ್ರಿ ಬೇಗ ಮಲಗಿ, ಬೇಗ ಏಳದಿದ್ದಲ್ಲಿ, ಹಲವು ಆರೋಗ್ಯ ಸಮಸ್ಯೆ ಉದ್ಭವಿಸುತ್ತದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಮನುಷ್ಯ ಸರಿಯಾಗಿ 8 ಗಂಟೆಗಳ ಕಾಲ ನಿದ್ದೆ ಮಾಡಿದಾಗ ಮಾತ್ರ, ಆರೋಗ್ಯವಾಗಿರುತ್ತಾನೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದರೆ ನಿಮಗೆ 8 ಗಂಟೆಗಳ ಕಾಲ ನಿದ್ರಿಸಲು ಸಾಧ್ಯವಾಗದೇ ಇದ್ದಲ್ಲಿ, 7 ಗಂಟೆಗಳ ಕಾಲವಾದ್ರೂ ನೀವು ಚೆನ್ನಾಗಿ ನಿದ್ದೆ ಮಾಡಬೇಕು. ಹಾಗಾಗಬೇಕು ಅಂದ್ರೆ, ರಾತ್ರಿ ಬೇಗ ಮಲಗಿ ಬೇಗ ಏಳಬೇಕು. ಇದು ನಿಮ್ಮ ನಿದ್ರೆಯನ್ನು ಪೂರ್ಣಗೊಳಿಸುವುದಲ್ಲದೇ, ನಿಮ್ಮ ಆರೋಗ್ಯವನ್ನೂ ಚೆನ್ನಾಗಿ ಇಟ್ಟಿರುತ್ತದೆ.

ಇನ್ನು ಕೆಲವರಿಗೆ ಎಷ್ಟೇ ಬೇಗ ಮಲಗಿದರೂ, ಲೇಟಾಗಿ ಮಲಗಿದರೂ ನಿದ್ದೆ ಬರುವುದಿಲ್ಲ. ಇದನ್ನು ನಿದ್ರಾಹೀನತೆ ಸಮಸ್ಯೆ ಎನ್ನಲಾಗುತ್ತದೆ. ಮಲಗುವ ಹೊತ್ತಿಗೆ ಹೆಚ್ಚು ಮೊಬೈಲ್, ಲ್ಯಾಪ್‌ಟಾಪ್ ಸೇರಿ ಬೇರೆ ಬೇರೆ ಗ್ಯಾಜೇಟ್ ಬಳಸಿದಾಗ, ನಿದ್ರೆ ಬೇಗ ಬರುವುದಿಲ್ಲ. ಅಲ್ಲದೇ, ಸರಿಯಾಗಿ ಊಟ ಮಾಡದಿದ್ದಾಗಲೂ ನಿದ್ರೆ ಬರುವುದಿಲ್ಲ. ನೀವು ಮೊಬೈಲ್ ಬಳಕೆ ಮಾಡಲಿಲ್ಲ. ಸರಿಯಾಗಿ ಊಟವೂ ಮಾಡಿದ್ದೀರಿ. ಆದರೂ ನಿಮಗೆ ನಿದ್ರೆ ಬರಲಿಲ್ಲವೆಂದಲ್ಲಿ, ಅದು ನಿದ್ರಾಹೀನತೆ ಸಮಸ್ಯೆ.

ನೀವು ಹೆಚ್ಚು ಕಾಫಿ, ಟೀ ಸೇವನೆ ಮಾಡಿದರೂ ನಿಮಗೆ ನಿದ್ರಾಹೀನತೆ ಸಮಸ್ಯೆ ಕಾಡುತ್ತದೆ. ಏಕೆೆಂದರೆ ಕಾಫಿ, ಟೀ ಸೇವನೆಯಿಂದ ಮಾನಸಿಕ ಮಮತ್ತು ದೈಹಿಕ ಆರೋಗ್ಯವೆರಡೂ ಹಾಳಾಗುತ್ತದೆ. ನಿದ್ದೆ ಸರಿಯಾಗಿ ಆಗದಿದ್ದಾಗ, ತಲೆನೋವು, ಮಾನಸಿಕ ಹಿಂಸೆ, ಕೋಪ ಇತ್ಯಾದಿ ಸಮಸ್ಯೆ ಉದ್ಭವಿಸುತ್ತದೆ. ಹಾಗಾದ್ರೆ ಇದಕ್ಕೆ ಪರಿಹಾರವೇನು ಅಂತಾ ತಿಳಿಯಲು ಈ ವೀಡಿಯೋ ನೋಡಿ.

- Advertisement -

Latest Posts

Don't Miss