Friday, December 27, 2024

Latest Posts

ಇರುವ ವಿಷಯವನ್ನು ಒಪ್ಪಿಕೊಳ್ಳಲು ನಿರಾಕರಿಸುವ ಸ್ವಭಾವದವರು ಇವರು

- Advertisement -

Horoscope: ಒಂದೊಂದು ರಾಶಿಯ ಜನರಿಗೆ ಒಂದೊಂದು ರೀತಿಯ ಸ್ವಭಾವವಿರುತ್ತದೆ. ಅದೇ ರೀತಿ ನಾವಿಂದು ಇರುವ ವಿಷಯವನ್ನು ಒಪ್ಪಿಕೊಳ್ಳಲು ನಿರಾಕರಿಸುವ ಸ್ವಭಾವದವರ ಬಗ್ಗೆ ಹೇಳಲಿದ್ದೇವೆ.

ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರು ಭಾವನಾತ್ಮಕ ಜೀವಿಯಾಗಿರುವ ಕಾರಣ, ಇವರು ತಮ್ಮವರನ್ನು ಹೆಚ್ಚು ಪ್ರೀತಿಸುತ್ತಾರೆ. ಅದು ವಸ್ತುವೇ ಆಗಲಿ, ಜನರೇ ಆಗಲಿ. ತಮ್ಮಿಷ್ಟದ ವಸ್ತುಗಳು ಕಳೆದು ಹೋದರೆ, ಅಥವಾ ಸಂಬಂಧಗಳು ದೂರವಾದರೆ, ಆ ವಿಷಯವನ್ನು ಒಪ್ಪಿಕೊಳ್ಳಲು ನಿರಾಕರಿಸುವ ಸ್ವಭಾವದವರು ಇವರು.

ತುಲಾ ರಾಶಿ: ಈ ರಾಶಿಯವರು ಯಾವುದೇ ಕಾರಣಕ್ಕೂ ತಾವು ಮಾಡಿದ ತಪ್ಪನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಈ ಹುಂಬತನದಿಂದಲೇ, ಸಂಬಂಧಗಳು ಹಾಳಾಗುತ್ತದೆ. ಆದರೂ ಕೂಡ ತಾನೇ ಸರಿ ಅನ್ನುವ ಅಹಂ ಇವರದ್ದಾಗಿರುತ್ತದೆ. ಅಷ್ಟೇ ಅಲ್ಲದೇ, ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವಲ್ಲಿಯೂ ಇವರು ನಿಸ್ಸೀಮರು. ಜವಾಬ್ದಾರಿ ಹೆಗಲ ಮೇಲೇರಲಿದೆ ಎಂದಾಗ, ಜಾರಿಕೊಳ್ಳುವ ಸ್ವಭಾವ ಇವರದ್ದಾಗಿರುತ್ತದೆ. ಈ ಕಾರಣಕ್ಕೆ, ಇವರು ಹಲವರ ಬೇಸರಕ್ಕೆ ಕಾರಣರಾಗುತ್ತಾರೆ.

ಕುಂಭ ರಾಶಿ: ಕುಂಭ ರಾಶಿಯ ಜನರು, ಬಾಳ ಸಂಗಾತಿಯ ಅಥವಾ ಪ್ರಿಯಕರ-ಪ್ರಿಯತಮೆಯ ವಿಷಯದಲ್ಲಿ ಹೆಚ್ಚು ಹೆದರುತ್ತಾರೆ. ಏಕೆಂದರೆ, ಕುಂಭ ರಾಶಿಯವರು ಯಾರನ್ನಾದರೂ ಪ್ರೀತಿಸದರೆ, ಕೊನೆತನಕ ಜೊತೆಯಾಗಿರಲು ಬಯಸುತ್ತಾರೆ. ಈ ಪ್ರೀತಿಯ ಗುಣವೇ, ಅವರನ್ನು ಬಾಳ ಸಂಗಾತಿಯಿಂದ ದೂರವಾಗುವ ಹೆದರಿಕೆ ಹುಟ್ಟುವಂತೆ ಮಾಡುತ್ತದೆ. ಇವರು ಪ್ರೀತಿ ವಿಷಯದಲ್ಲಿ ಆಗುವ ಮೋಸವನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಾರೆ.

ಮೀನ ರಾಶಿ: ಮೀನ ರಾಶಿಯವರು ಸೂಕ್ಷ್ಮ ಸ್ವಭಾವದವರು. ಮತ್ತು ಮೌನಿಗಳು. ಅವರು ತಮ್ಮ ಸುತ್ತಮುತ್ತಲೂ ಏನಾದರೂ ತಪ್ಪು ನಡೆದರೆ, ಅದನ್ನು ನಿರ್ಲಕ್ಷಿಸುತ್ತಾರೆ. ಏಕೆಂದರೆ ತಮಗೇನಾದರೂ ಕಷ್ಟ ಬಂದರೆ, ಅದನ್ನು ಎದುರಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಯಾಕೆ ಸುಮ್ಮನೆ ಸಮಸ್ಯೆ ತಂದುಕೊಳ್ಳಬೇಕು ಎಂದು, ಸಮಸ್ಯೆಗಳಿಂದ ಪಲಾಯನ ಮಾಡುತ್ತಾರೆ.

- Advertisement -

Latest Posts

Don't Miss