Friday, July 11, 2025

Latest Posts

ಈ ಐದು ರಾಶಿಯವರು ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ..

- Advertisement -

ಒಂದೊಂದು ರಾಶಿಯವರಿಗೆ ಒಂದೊಂದು ಗುಣವಿರುತ್ತದೆ. ಕೆಲವರು ಪಟ ಪಟ ಎಂದು ಮಾತನಾಡುತ್ತಾರೆ. ಇನ್ನು ಕೆಲವರು ಮೌನವಾಗಿರುತ್ತಾರೆ. ಇನ್ನು ಕೆಲವರು ಸಿಡುಕುತ್ತಾರೆ. ಮತ್ತೆ ಕೆಲವರು ಯಾವಾಗಲೂ ನಗು ನಗುತ್ತಲಿರುತ್ತಾರೆ. ಹೀಗೆ ಒಂದೊಂದು ರಾಶಿಯವರಿಗೂ ಒಂದೊಂದು ಗುಣವಿರುತ್ತದೆ. ಅಂಥ ಗುಣಗಳಲ್ಲಿ ನಾಯಕತ್ವದ ಗುಣ ಕೂಡ ಒಂದು. ಹಾಗಾದ್ರೆ ನಾಯಕತ್ವದ ಗುಣವುಳ್ಳ ರಾಶಿಗಳ ಬಗ್ಗೆ ತಿಳಿಯೋಣ ಬನ್ನಿ..

ಮೊದಲನೇಯದಾಗಿ ಮೇಷ ರಾಶಿ. ಬುದ್ಧಿವಂತರೂ, ನೋಡಲು ಆಕರ್ಷಕವಾಗಿ ಕಾಣುವ ಮೇಷ ರಾಶಿಯವರು ನಾಯಕತ್ವದ ಗುಣವನ್ನು ಹೊಂದಿರುತ್ತಾರೆ. ಇವರಿಗೆ ಬೇರೆಯವರಿಂದ ಹೇಗೆ ಕೆಲಸ ತೆಗೆದುಕೊಳ್ಳಬೇಕು ಎಂದು ಗೊತ್ತಿರುತ್ತದೆ. ಇವರ ರಾಶಿಯ ತತ್ವ ಬೆಂಕಿ ಆಗಿರುವುದರಿಂದ ಇವರು ಪ್ರಾಬಲ್ಯ ಹೊಂದಿರುವವರಾಗಿರುತ್ತಾರೆ. ಏನಾದರೂ ಚಾಲೆಂಜ್ ಸ್ವೀಕರಿಸಿದರೆ, ಅಥವನಾ ಯಾವುದಾದರೂ ಸಾಧನೆ ಮಾಡಬೇಕೆಂದು ಪಣ ತೊಟ್ಟರೆ, ಅದನ್ನು ಸಾಧಿಸುವ ಛಲ ಹೊಂದಿರುತ್ತಾರೆ. ಇದರ ಜೊತೆಗೆ ನಾಾಯಕತ್ವವನ್ನೂ ಚೆನ್ನಾಗಿ ನಿಭಾಯಿಸುವ ಅರ್ಹತೆ ಇವರಿಗಿರುತ್ತದೆ.

ಎರಡನೇಯದಾಗಿ ವೃಶ್ಚಿಕ ರಾಶಿ. ವೃಶ್ಚಿಕ ರಾಶಿಯವರು ನಾಯಕತ್ವದ ಗುಣವನ್ನು ಹೊಂದಿದ್ದಾರೆ. ಇವರಿಗೆ ಕೊಂಚ ಕೋಪ ಜಾಸ್ತಿ ಇದ್ದು, ತಿಳುವಳಿಕೆ ಕೂಡ ಅಷ್ಟೇ ಉತ್ತಮವಾಗಿದೆ. ಇವರಿಗೆ ಬೇರೆಯವರಿಂದ ಕೆಲಸ ಮಾಡಿಸುವುದು ಗೊತ್ತು. ಮತ್ತು ಲಾಭ ಬರಬೇಕಾದರೆ ತಾವೇ ಆ ಕೆಲಸವನ್ನ ಮಾಡಿ ಮುಗಿಸುತ್ತಾರೆ. ಒಟ್ಟಾರೆಯಾಗಿ ಇವರನ್ನ ನಂಬಿ ಇವರಿಗೆ ಕೆಲಸ ಕೊಟ್ಟವರು ಮಾತ್ರ ಇವರ ಮೇಲೆ ಕಣ್ಣುಮುಚ್ಚಿ ನಂಬಬಹುದು.

ಮೂರನೇಯದಾಗಿ ಸಿಂಹ ರಾಶಿ. ಹೆಸರಿಗೆ ತಕ್ಕ ಹಾಗೆ ಸಿಂಹ ರಾಶಿಯವರು ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಈ ರಾಶಿಯ ಅದಿಪತಿ ಸೂರ್ಯ ಮತ್ತು ಇವರು ಅಗ್ನಿ ತತ್ವದವರಾಗಿದ್ದಾರೆ. ಹಾಗಾಗಿ ಇವರಲ್ಲಿ ಬೇರೆ ರಾಶಿಗಿಂತ ನಾಯಕತ್ವದ ಗುಣ ಕೊಂಚ ಹೆಚ್ಚೇ ಎನ್ನಬಹುದು. ಇವರು ಯಾವಾಗಲೂ ನಾಯಕರಾಗಿರಲು ಬಯಸುತ್ತಾರೆ. ಹಾಗಾಗಿ ಯಾವ ಕ್ಷೇತ್ರದಲ್ಲಿ ಕೆಲಸ ಮಾಡಿದರೂ, ಅಲ್ಲಿ ತಮ್ಮ ಪ್ರಾಬಲ್ಯ ಸಾಧಿಸಲು ಇಚ್ಛಿಸುತ್ತಾರೆ.

ನಾಲ್ಕನೇಯದಾಗಿ ಮಕರ ರಾಶಿ. ಯಾಾವುದಾದರೂ ಕೆಲಸವನ್ನು ಮಾಡಲು ಶುರುಮಾಡಿದರೆ, ಅದು ಪರಿಪೂರ್ಣಗೊಳ್ಳುವವರೆಗೂ ಬಿಡದೇ ಹಠದಿಂದ ಕೆಲಸ ಮಾಡಿ ಮುಗಿಸುವ ರಾಶಿ ಅಂದ್ರೆ ಅದು ಮಕರ ರಾಶಿ. ಇವರು ಕೂಡ ನಾಯಕತ್ವದ ಗುಣಗಳನ್ನು ಹೊಂದಿದ್ದು, ಶಿಸ್ತನ್ನು ಅಳವಡಿಸಿಕೊಂಡಿರುತ್ತಾರೆ. ಇದೇ ಕಾರಣಕ್ಕೆ ಇವರು ಅಂದುಕೊಂಡ ಕೆಲಸದಲ್ಲಿ ಯಶಸ್ಸು ಸಾಧಿಸುತ್ತಾರೆ.

- Advertisement -

Latest Posts

Don't Miss