ಪ್ರೀತಿ-ಪ್ರೇಮ ಅಂದ ಮೇಲೆ ಸ್ವಲ್ಪ ಜಗಳ, ಓಲೈಕೆ, ಪ್ರೀತಿ, ಹೊಟ್ಟೆಕಿಚ್ಚು ಇತ್ಯಾದಿ ಇತ್ಯಾದಿ ಇರೋದು ಸಹಜ. ಆದ್ರೆ ಇಂದು ನಾವು ಹೇಳ ಹೊರಟಿರುವ ಕೆಲ ರಾಶಿಯವರು ಪ್ರೀತಿ- ಪ್ರೇಮದ ವಿಷಯದಲ್ಲಿ ಕಿರಿಕ್. ಈ ರಾಶಿಯವರನ್ನು ಖುಷಿ ಪಡಿಸುವುದು ಅಷ್ಟು ಈಸಿ ಅಲ್ಲವಂತೆ. ಹಾಗಾದ್ರೆ ಯಾವುದು ಆ ರಾಶಿಗಳು ಅಂತಾ ತಿಳಿಯೋಣ ಬನ್ನಿ..

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531

ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ
ಬೆಂಗಳೂರಿನಲ್ಲಿ Home delivery
8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್
Noni ಹೋಂ ಡೆಲಿವರಿಗಾಗಿ ಸಂಪರ್ಕಿಸಿ
8147130507 / 7349360507
ಕರ್ಕ: ಮೊದಲನೇಯದಾಗಿ ಕಟಕ ರಾಶಿ. ಈ ರಾಶಿಯವರು ಉತ್ತಮ ಮನಸ್ಸಿನವರು, ಬಾಳ ಸಂಗಾತಿಯನ್ನ ಜೀವಕ್ಕಿಂತ ಪ್ರೀತಿಸುವವರಾಗಿರುತ್ತಾರೆ. ಆದ್ರೆ ಬಾಳ ಸಂಗಾತಿ ಏನಾದ್ರೂ ತಪ್ಪು ಮಾಡಿದ್ರೆ, ಅದನ್ನ ಕ್ಷಮಿಸೋದು ಸ್ವಲ್ಪ ಲೇಟ್ ಅಂತಾನೇ ಹೇಳಬಹುದು. ಅಲ್ಲದೇ, ಈ ರಾಶಿಯವರ ಸಂಗಾತಿಯ ಮೇಲೆ ಯಾರಾದರೂ ಕಣ್ಣು ಹಾಕಿದ್ರೆ, ಇವರು ಸಂಗಾತಿಯ ಮೇಲೆ ಸಿಟ್ಟಾಗುತ್ತಾರೆ. ಹಾಗಾಗಿ ಇವರ ಬಾಳ ಸಂಗಾತಿಯಾದವರಿಗೆ ಇವರನ್ನು ಸಮಾಧಾನ ಮಾಡುವುದು ಕೊಂಚ ಕಷ್ಟವೇ ಸರಿ.
ಕನ್ಯಾ: ಇವರು ಉತ್ತಮ ಮನಸ್ಸಿನವರಾದ್ರೂ, ಇವರು ಸ್ಟ್ರೇಟ್ ಫಾರ್ವರ್ಡ್ ವ್ಯಕ್ತಿ. ಸಿಟ್ಟು ಬಂದಾಗ ಅಥವಾ ಮನಸ್ಸಿಗೆ ಬೇಸರವಾದಾಗ, ಮುಚ್ಚುಮರೆ ಮಾಡದೇ ನೇರವಾಗಿ ಹೇಳಿಬಿಡುತ್ತಾರೆ. ಹಾಗಾಗಿ ಇವರು ಕೆಲವರ ದೃಷ್ಟಿಯಲ್ಲಿ ಕೆಟ್ಟವರೆನ್ನಿಸಿಕೊಳ್ಳುತ್ತಾರೆ. ಇನ್ನು ಪ್ರೀತಿ- ಪ್ರೇಮದ ವಿಷಯಕ್ಕೆ ಬಂದ್ರೆ, ಇವರು ಸಂಗಾತಿಯನ್ನ ಸಖತ್ ಆಗೇ ಗೋಳು ಹೊಯ್ದುಕೊಳ್ಳುವ ವ್ಯಕ್ತಿ. ತಮ್ಮ ಮಾತೇ ನಡೆಯಬೇಕು, ತಾನು ಹೇಳಿದ ಹಾಗೇ ಆಗಬೇಕು ಅನ್ನೋ ಸ್ವಭಾವ ಇವರದ್ದು. ಸ್ವಲ್ಪ ಹಠಮಾರಿಯೂ ಆಗಿರುವುದರಿಂದ ಇವರ ಸಂಗಾತಿಗೆ ಇವರನ್ನು ಸಂಭಾಳಿಸುವುದು ಕೊಂಚ ಕಷ್ಟ.
ವೃಶ್ಚಿಕ: ಇವರು ಸ್ವಲ್ಪ ಕೋಪಿಷ್ಠ ಸ್ವಭಾವದವರಾಗಿದ್ದರಿಂದ ಇವರನ್ನು ಮೆಚ್ಚಿಸೋದು ಕಷ್ಟ. ಇವರು ತಮ್ಮ ಸಂಗಾತಿ ತಮ್ಮ ಹಾಗೇ ಇರಬೇಕು. ತಮ್ಮಷ್ಟೇ ಫಾಸ್ಟ್ ಆಗಿ, ಪರ್ಫೆಕ್ಟ್ ಆಗಿ ಇರಬೇಕು ಅಂತಾ ಬಯಸುತ್ತಾರೆ. ಆದ್ರೆ ತಮ್ಮ ಬಾಳ ಸಂಗಾತಿ ತಮ್ಮ ಹಾಗೇ ಇಲ್ಲದೇ ಹೋದರೆ, ಕಿರಿಕ್ ಮಾಡುವ ಸ್ವಭಾವ ಇವರದ್ದು. ಪ್ರೀತಿ-ಕಾಳಜಿ ಇದ್ದರೂ, ಮಾತು ಮಾತಿಗೂ ಸಿಡುಕುವ ಸ್ವಭಾವ ಇವರದ್ದಾಗಿದ್ದರಿಂದ, ಇವರನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ.
ಕುಂಭ: ಇನ್ನು ಕುಂಭ ರಾಶಿಯವರು ಹಠಮಾರಿ ಸ್ವಭಾವದವರು. ಮನೆಯಲ್ಲಿ ತಮ್ಮ ಆಡಳಿತವೇ ನಡೆಯಬೇಕು ಅಂತಾ ಹೇಳುವವರು. ಉತ್ತಮ ಗುಣವಿದ್ದವರಾದರೂ, ತಮ್ಮ ಕಟು ಮಾತಿನಿಂದ ಕೆಲವೊಮ್ಮೆ ಎದುರಿದ್ದವರ ಮನಸ್ಸಿಗೆ ಘಾಸಿಗೊಳಿಸಿಬಿಡುತ್ತಾರೆ.
ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531
ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ
ಬೆಂಗಳೂರಿನಲ್ಲಿ Home delivery
8147130507 / 7349360507
ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್
Noni ಹೋಂ ಡೆಲಿವರಿಗಾಗಿ ಸಂಪರ್ಕಿಸಿ
8147130507 / 7349360507




